ಕಟ್ಟಿ ಕಲ್ಲವ್ವ ಮತ್ ಕಿಡಗೇಡಿ ಕಿಟ್ಯಾ ಕಟ್ಟಿಗ್ ಕುಂತ್ ಸರ್ಕಸ್ ಮಾಡಿದ್ರ ಸರ್ಕಾರ ನಡಿಸಬಹುದು ಅಂತ ಪಂಟ್  ಹೊಡದಾರ. ಸರ್ಕಾರ ನಡಸಬೇಕು ಅನ್ನೋ ಭರದಾಗ ಸರ್ಕಸ್ ಮಾಡಾಕ್ ಹೋದ್ ಕಿಟ್ಯಾನ್ ಸ್ಥಿತಿ ಬಗ್ಗೆ ನಿಮ್ಮ ಉತ್ತರಪ್ರಭದ ಕಿಡಗೇಡಿ ಕಿಟ್ಯಾ ಅಂಕಣದಲ್ಲಿ ಹಾಸ್ಯ ಬರಹ

ಕಟ್ಟಿ ಕಲ್ಲವ್ವಾ; ಅಬಾಬಾ ಏನ್ಲೋ ಕಿಟ್ಯಾ ಮುಂಜ್ ಮುಂಜಾನೆ, ಕಟ್ಟಿಗ್ ಕುಂತ್ ತೆಳಗಾ ಮ್ಯಾಲೆ ಹಾರಾಡಾ ಕತ್ತಿಯಲ್ಲ.

ಕಿಡಗೇಡಿ ಕಿಟ್ಯಾ: ಅಯ್ಯ ನಿನ್ನ ಇದು ಹಾರ್ಯಾಡಾದ್ ಅಲ್ಬೆ. ಸರ್ಕಸ್ ಅಂತಾರಾ ಸರ್ಕಸ್.

ಕಟ್ಟಿ ಕಲ್ಲವ್ವಾ; ಅಯ್ಯಾ ಬಿಡಲಾ ಮೂಳ, ಊರ್ ಮೂಳ ನಾನ್ ನೋಡಲಾರದ್ ಐತೇನದು ಸರ್ಕಸ್ ಅಂದ್ರ. ಅದಾ ಒಬ್ಬಾಂವಾ ಕಸರತ್ ಮಾಡ್ತಿರ್ತಾನಾ, ಮತ್ತೊಬ್ಬಾಂವ ಮಕಕ್ಕಾ ಹಿಟ್ ಹಚ್ಕೊಂಡಾವ ಚಪಾತಿ ಇರ್ತಾನಾ. ಆದ್ರ ನೀನ ಮಾಡೋ ಈ ಸರ್ಕಸ್ ಬ್ಯಾರೆನಾ ಐತಿ ಬಿಡು.

ಕಿಡಗೇಡಿ ಕಿಟ್ಯಾ: ನಾನ್ ಮಾಡೋ ಸರ್ಕಸ್ ನಂಗಾ ತಿಳಿವಲ್ದು ಇನ್ನ ನಿಂಗೇನ್ ತಿಳಿತೈತಿ.

ಕಟ್ಟಿ ಕಲ್ಲವ್ವಾ; ಮತ್ತ ಸರ್ಕಸ್ ಮಾಡಾಕತ್ತಿನಿ ಅಂತ ನೀನಾ ಹೇಳಿದ್ಯಲ್ಲಲೋ…

ಕಿಡಗೇಡಿ ಕಿಟ್ಯಾ: ನಾನೇನ ಹೇಳಿದ್ನಬೇ ಆದ್ರೆ ಮೂರ್ನಾಲ್ಕ್ ದಿನದ್ ಹಿಂದ ಮಂತ್ರಿ ಶೆಟ್ಟರ್ ಸಾಹೇಬ್ರ ಸರ್ಕಸ್ ಬಗ್ಗೆ ಹೇಳಿದ್ರು.

ಕಟ್ಟಿ ಕಲ್ಲವ್ವಾ; ಅಯ್ಯೋ ನಿನ್ನ ಅವ್ರಿಗ್ಯಾಕಂತಲೋ ಸರ್ಕಸ್ ವಿಷಯಾ???

ಕಿಡಗೇಡಿ ಕಿಟ್ಯಾ: ಏನಿಲ್ಲಬೇ ಸಚಿವ ಸಂಪುಟದ್ ಪುನರ್ ರಚನೆ ಮಾಡಬೇಕು ಅನ್ನದರ್ ಬಗ್ಗೆ ಭಾಳ್ ಚರ್ಚೆ ನಡೆದಲ್ಲನು??

ಕಟ್ಟಿ ಕಲ್ಲವ್ವಾ; ಹುಂ ಹೌದು

ಕಿಡಗೇಡಿ ಕಿಟ್ಯಾ: ಅದಕ್ಕ ಇದರ ಬಗ್ಗೆ ಮೊನ್ನ್ಯಾರ ಹುಬ್ಬಳ್ಳ್ಯಾಗ ಮಾತಾಡಿದ ಜಗದೀಶ್ ಶೆಟ್ಟರ್ ಅವ್ರು ಸಂಪುಟ ವಿಸ್ತರಣೆ ಬಗ್ಗೆ ನಂಗೇನು ಕೇಳ್ ಬ್ಯಾಡ್ರಿ ಅದು ಸಿಎಂ ಅವ್ರಿಗೆ ಬಿಟ್ ವಿಚಾರ ಅಂತ ಹೇಳ್ಯಾರ.

ಕಟ್ಟಿ ಕಲ್ಲವ್ವಾ; ಅಯ್ಯೋ ನಿನ್ನ ನೀನ ಮಾಡಾಕತ್ತಿರದೇನು? ನಾನ್ ಕೇಳಿದ್ದೇನು? ನೀನ ಹೇಳಾಕುಂತಿದ್ದೇನು?? ಒಂದಕ್ಕೊಂದು ಸಂಬಂಧ ಇಲ್ದಂಗೈತ್ಯಲ್ಲ.

ಕಿಡಗೇಡಿ ಕಿಟ್ಯಾ: ಅದರಾಗ ಐತ್ಯಬೇ ಹಕಿಕತ್ತು. ಇದನ್ನ ಹೇಳಿದ್ ಶೆಟ್ಟರ್ ಸಾಹೇಬ್ರು ನಾವು ಸರ್ಕಸ್ ಮಾಡಿ ಸರ್ಕಾರ ನಡಸಾಕತ್ತಿವಿ ಅಂತ ಹೇಳಿದ್ರು.ಅದಕ್ಕ ಸರ್ಕಸ್ ಮಾಡಾಕ್ ಬಂದ್ರ ಮತ್ತ ಸರಳ ಆಗಿ ಸರ್ಕಾರ ನಡಿಸಬಹುದಲ್ಲ. ಅದಕ್ಕ ನಾನು ನಾಕ್ ದಿನಾ ಆತಿಗ ಸರ್ಕಸ್ ಕಲಿಯಾ ಕುಂತಿನಿ.

ಕಟ್ಟಿ ಕಲ್ಲವ್ವಾ; ಅಯ್ಯೋ ನಿನ್ನ ಕಿಡಗೇಡಿ, ಸರ್ಕಸ್ ಮಾಡಕಾ ಬಂದವ್ರಲ್ಲ ಸರ್ಕಾರ ನಡೆಸುವಂಗಾಗಿದ್ರು ತಿಂಗಳಿಗೊಂದ್ ಸರ್ಕಾರ ಬದಲಾಗ್ತಿತ್ತ. ಲೋ ಕಿಡಿಗೇಡಿ. ಅವ್ರ ಹೇಳಿದ್ ಸರ್ಕಾರ ನಡೆಸಾದ್ ಭಾಳ್ ಕಷ್ಟದ್ ಕೆಲ್ಸಾ! ಸರ್ಕಾರ ನಡಿಸೋದು ಸರ್ಕಸ್ ಮಾಡಿದಷ್ಟು ಕಷ್ಟ ಅನ್ನೋ ಅರ್ತದಾಗ ಹೇಳಿದ್ದು.

ಕಿಡಗೇಡಿ ಕಿಟ್ಯಾ: ಅಲಿ ಯೂವನಾ ಇದು ಹಿಂಗನೂ, ಅಯ್ಯೋ ನಾನು ಏನಾ ಅನ್ಕೊಂಡ್  ಸರ್ಕಸ್ ಮಾಡೋ ಕಸರತ್ತು ನಡಿಸಿದ್ನಲ್ಲಬೇ. ಯಪ್ಪಾ!!

ಕಟ್ಟಿ ಕಲ್ಲವ್ವಾ; ಯಾಕ್ಲೋ ಏನಾತು. ಯಪ್ಪಾ ಅಂತಿಯಲ್ಲ..

ಕಿಡಗೇಡಿ ಕಿಟ್ಯಾ: ಏನಿಲ್ಲಬೇ ಕೈ ಕೆಳಗ್ ಇಳಿಸಿದ್ನಲ್ಲ. ಅದಕ್ಕ.

ಕಟ್ಟಿ ಕಲ್ಲವ್ವಾ; ಥೂ ಕೆಳಗ್ ಇಳಿಸಿದ್ದಕ್ಕ ಯಾಕ ನೋವ್ಲೋ ಕಿಟ್ಯಾ??

ಕಿಡಗೇಡಿ ಕಿಟ್ಯಾ: ಅಲ್ಲಬೇ ಕಟ್ಟಿ ಕಲ್ಲವ್ವ ಹ್ಯಾಂಗೂ ನಮ್ಮ ಶೆಟ್ಟರ್ ಸಾಹೇಬ್ರು ಸರ್ಕಸ್ ಮಾಡಿ ಸರ್ಕಾರ ನಡೆಸಾಕತ್ತಿವಿ ಅಂದ್ರಲ್ಲ. ಅದಕ್ಕೆ ಈ ಕಿಟ್ಟಪ್ಪ ಸಾಹುಕಾರು ಒಂದ್ ಕೈ ನೋಡ ಬಿಟ್ರಾತು ಅಂತ ಸರ್ಕಸ್ ಮಾಡಾಕ್ ಹೋಗಿ ನಿನ್ನೆ ಕೈ ಮುರಕೊಂಡ್ ಬಿಟಿದ್ನಿಬೆ.

ಕಟ್ಟಿ ಕಲ್ಲವ್ವಾ; ಅಯ್ಯೋ ನಿನ್ನ ಸರ್ಕಾರ ಮಾಡೋ ಮಸಡಿ… ನಿನ್ನ ಬಾಯಾಗ್ ರೊಟ್ಟಿ ತುರಕಾ? ಕಟ್ಟಿಗ್ ಕುಂತ್ ಪಂಟ್ ಹೊಡಿಯಾದ್ ಬಿಟ್ ನಿಂಗೇನ್ ಗೊತ್ತೈತಿ. ಸರ್ಕಾರ ನಡೆಸೋ ಮೂತಿ ನೋಡು.. ಏಳಲಾ ಏಳ್. ಮೈತುಂಬ ಕೆಲ್ಸಾ ಇದ್ದಿದ್ರ ನೀನರಾ ಹಿಂಗ್ಯಾಕ್ ಮಾಡ್ತಿದ್ದಿ. ಕೆಲಸಾ ಇಲ್ದಕ್ ಇಂಥ ದಗದಾ ಮಾಡಾಕತ್ತಿ. ಎದ್ ಬಾ, ಇಲ್ಲಂದ್ರ ಇದ್ದ್ ಇನ್ನೊಂದು ಕೈನೂ ಮುರದ್ ಬಿಡ್ತಿನಿ ನೋಡು….

ಕಿಡಗೇಡಿ ಕಿಟ್ಯಾ: ಅಲ್ಲಬೇ ಅಂದ್ರ ನಾನ್ ಅನಕೊಂಡಿದ್ ಬ್ಯಾರೇ, ಶೆಟ್ಟರ್ ಸಾಹೇಬ್ರು ಹೇಳಿದ್ ಬ್ಯಾರೇ ಏನು?

ಕಟ್ಟಿ ಕಲ್ಲವ್ವಾ; ಅಯ್ಯೋ ಇಷ್ಟ ವದರಿದ್ರು ನಿಂಗ್ ಅರ್ಥ ಆಗಿಲ್ಲಂದ್ರ ಹ್ಯಾಂಗ್.. ಅದು ಏನಾ ಅಂತಾರಲ್ಲ ಎದರ್ದ ಮುಂದ್ ಕಿನ್ನೂರಿ ಬಾರಿಸ್ದಂಗಾ. ನೀನ್ ಬಂದರಾ ಬಾ, ಇಲ್ಲಂದ್ರ ಇಲ್ಲ ಬಿದ್ದರ ಬೀಳು. ನಾನಂತೂ ಹೊಕ್ಕಿನಿ….

Leave a Reply

Your email address will not be published. Required fields are marked *

You May Also Like

ಲೈವ್ ಮೀಟಿಂಗನ್ಯಾಗ ಹೆಂಡತಿ ಕೊಟ್ ಮುತ್ತಿನಿಂದ ಪಾಪ ಪೇಚಿಗೆ ಸಿಲುಕಿದ ಪತಿರಾಯ!

ಎಂತೆಂಥ ಚಿತ್ರವಿಚಿತ್ರ ಘಟನೆಗಳು ನಮ್ ನಡುವ ನಡೆದಿರ್ತಾವು. ಇಂಥದ್ದ ಒಂದು ವಿಚಿತ್ರ ಘಟನೆ ನಡೆದೈತಿ ನೋಡ್ರಿ.

ಮೇ.18ರಿಂದ ಸಾರಿಗೆ ಸಂಚಾರ ಆರಂಭ?

ಮೇ.18ರಿಂದ ಸಾರಿಗೆ ಸಂಚಾರ ಆರಂಭ? ಬೆಂಗಳೂರು: ಮೇ.18ರಿಂದ ಸಾರಿಗೆ ಸಂಚಾರ ಸಂಪೂರ್ಣವಾಗಿ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಮೇ.17ಕ್ಕೆ…

ಗದಗ ಜಿಲ್ಲೆಯಲ್ಲಿ ಒಂದೇ ದಿನ 105 ಬೈಕ್ ಸೀಜ್: 71 ಕೇಸ್ ದಾಖಲು

ಗದಗ: ಜಿಲ್ಲೆಯಾದ್ಯಂತ ಐದು ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದಾಗ್ಯೂ ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿ ರಸ್ತೆಗಿಳಿದ 105 ವಾಹನಗಳನ್ನು ಸೀಜ್ ಮಾಡಿ, ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ 71 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್ಪಿ ಯತೀಶ್ ಎನ್ ತಿಳಿಸಿದ್ದಾರೆ.

ಇಲಿಗಳೂ ಸಾರಾಯಿ ಕುಡಿಯುತ್ತವೆ.

ಆ ಟ್ಯೂಬ್ ನಲ್ಲಿ ಇದ್ದ ಸಾರಾಯಿಯನ್ನು ಮುದ್ದೆ ಮಾಲು ಕೊಠಡಿಯಲ್ಲಿ ಇದ್ದ ಇಲಿಗಳು ಕುಡಿದಿವೆ ಅಂತ ಹೇಳಿದ. ಆ ಕೊಠಡಿಯಲ್ಲಿ ಇಲಿ ಇದ್ದದ್ದು ನಿಜ ಆದರೆ ಇಲಿ ಸಾರಾಯಿ ಕುಡಿದಿದ್ದು ಯಾರು ಗಮನಿಸಿಲ್ಲ. ಆದರೂ ಇಲಿ ಸಾರಾಯಿ ಕುಡಿದಿದ್ದು, ನಿಜ..!