ಲಖ್ನೋ: ಉತ್ತರಪ್ರದೇಶದ ಹತ್ರಾಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ತರ ಭೇಟಿಗೆ ಇಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೆರಳಲಿದ್ದಾರೆ. ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ವಿರುದ್ಧ ದೇಶಾದ್ಯಂತ ವಿಪಕ್ಷಗಳು, ದಲಿತಪರ ಸಂಘಟನೆಗಳು ಮತ್ತು ವಿವಿಧ ಸಂಘಟನೆಗಳು ಮತ್ತು ಜಾಲತಾಣಗಳಲ್ಲಿ ಕೂಡ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಎರಡು ದಿನಗಳ ಹಿಂದೆ ಮನೀಷಾ ವಾಲ್ಮೀಕಿ ಕುಟುಂಬಸ್ಥರ ಭೇಟಿಗೆ ತೆರಳಿದ್ದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿಯವರನ್ನು ಉತ್ತರಪ್ರದೇಶ ಪೊಲೀಸರು ತಡೆದು, ರಾಹುಲ್ ಅವರನ್ನು ತಳ್ಳಾಡಲಾಗಿತ್ತು. ಈ ವಿಷಯವನ್ನು ಇಟ್ಟುಕೊಂಡು ಕಾಂಗ್ರೆಸ್ ಪ್ರತಿಭಟನೆಯನ್ನೂ ನಡೆಸಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಇಂದು ಕುಟುಂಬದವರನ್ನು ಭೇಟಿಯಾಗಲು ರಾಹುಲ್ ಗಾಂಧಿ ತೆರಳಲಿದ್ದಾರೆ. ಇವರ ಜೊತೆ ಕಾಂಗ್ರೆಸ್ ನಿಯೋಗ ಕೂಡ ಭೇಟಿ ನೀಡಲಿದೆ.

ಇಂದು ಮಧ್ಯಾಹ್ನ ರಾಹುಲ್ ನೇತೃತ್ವದ ಕಾಂಗ್ರೆಸ್ ಸಂಸದರ ನಿಯೋಗ ಹತ್ರಾಸ್ ಸಂತ್ರಸ್ತೆ ಕುಟುಂಬವನ್ನು ಭೇಟಿಯಾಗಲಿದೆ ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ದೇಶದಲ್ಲಿ ತನ್ನ ಅಟ್ಟಹಾಸ ಮುಂದುವರೆಸಿದೆ ಮಹಾಮಾರಿ!

ನವದೆಹಲಿ : ದೇಶದಲ್ಲಿ ಕೊರೊನಾ ಹಾವಳಿ ಸ್ವಲ್ಪ ಮಟ್ಟಿಗೆ ತಗ್ಗುತ್ತಿದ್ದರೂ ಆತಂಕ ಮಾತ್ರ ಇನ್ನೂ ನಿಂತಿಲ್ಲ.

ಕೊರೊನಾ ಭಯದಿಂದ ದಾರಿ ಮಧ್ಯೆಯೇ ಹೆಣ ಬಿಟ್ಟು ಹೋದ ಕುಟುಂಬಸ್ಥರು!

ವ್ಯಕ್ತಿಯೊಬ್ಬ ಕೊರೊನಾದಿಂದ ಮೃತಪಟ್ಟಿರಬಹುದೆಂಬ ಶಂಕೆಯಿಂದ ಶವವನ್ನು ನಡು ರಸ್ತೆಯಲ್ಲಿಯೇ ಬಿಟ್ಟು ಕುಟುಂಬವೊಂದು ಎಸ್ಕೇಪ್ ಆಗಿರುವ ಘಟನೆ ಬೆಳಕಿಗೆ ಬಂದಿದೆ.

ಫೆಬ್ರವರಿಯಲ್ಲಿ ಬ್ಯಾಂಕುಗಳ ಸೇವೆಯಲ್ಲಿ ವ್ಯತ್ಯಯ

ಮೊದಲೆಲ್ಲ ಬ್ಯಾಂಕ್ಗಳಿಗೆ ರಜೆ ಅಂದರೆ ತಲೆ ಕೆಟ್ಟು ಹೋಗ್ತಿತ್ತು. ಆದರೆ ಈಗ ಹಾಗಲ್ಲ ನೆಟ್ ಬ್ಯಾಂಕಿAಗ್ ಮೂಲಕ ಅವಶ್ಯಕ ವ್ಯವಹಾರಗಳನ್ನ ನಾವೇ ನಡೆಸಬಹುದಾಗಿದೆ. ಹಾಗಂತ ನಾವು ಬ್ಯಾಂಕ್ಗಳನ್ನೂ ನಿರ್ಲಕ್ಷ್ಯ ಮಾಡುವಂತೆಯೂ ಇಲ್ಲ. ಲಾಕರ್ ವ್ಯವಸ್ಥೆ, ಸಾಲದ ಬಗ್ಗೆ ಮಾಹಿತಿ ಹೀಗೆ ಮುಖ್ಯ ಕೆಲಸ ಆಗಬೇಕು ಅಂದರೆ ನಾವು ಬ್ಯಾಂಕ್ಗೆ ತೆರಳಲೇಬೇಕು.

ಚೀನಾ ಟೆನ್ಷನ್: ಸೇನಾಧಿಕಾರಿ, ಇಬ್ಬರು ಸೈನಿಕರು ಬಲಿ!

ದೆಹಲಿ: ಚೀನಾ ಮತ್ತು ಭಾರತೀಯ ಯೋಧರ ನಡುವಿನ ಮುಖಾಮುಖಿಯಲ್ಲಿ ಲಡಾಖ್ ನ ಗಾಲ್ವಾನ್ ನಲ್ಲಿ ಒಬ್ಬ…