ಬೆಂಗಳೂರು : ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ನಡೆದ  ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್ ಇಲವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಐತಿಹಾಸಿಕ ಗೆಲುವನ್ನು ರಾಜಸ್ಥಾನ್ ರಾಯಲ್ಸ್ ದಾಖಲಿಸಿದೆ.

ಕಿಂಗ್ಸ್ ಇಲವೆನ್ ಪಂಜಾಬ್ ನೀಡಿದ ಬೃಹತ್ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ ಇತಿಹಾಸದಲ್ಲಿಯೇ  ಅತಿ ದೊಡ್ಡ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಎಲೆವೆನ್ ಪಂಜಾಬ್ ತಂಡ 223 ರನ್‌ ಗಳಿಸಿತ್ತು. ಮಯಾಂಕ್ ಅಗರ್ವಾಲ್ ಸ್ಪೋಟಕ ಶತಕ ಹಾಗೂ ಕೆಎಲ್ ರಾಹುಲ್ ಭರ್ಜರಿ ಅರ್ಧ ಶತಕದ ನೆರವಿನಿಂದ ಪಂಜಾಬ್ ಈ ಬೃಹತ್ ಮೊತ್ತವನ್ನು ಕಲೆ ಹಾಕಿತು. ಇದನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಗುರಿ ಮುಟ್ಟಿ ಇತಿಹಾಸ ನಿರ್ಮಿಸಿದೆ.

ಇದದಕ್ಕೂ ಮುನ್ನ ಮೊದಲ ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ, ಮೊದಲ ವಿಕೆಟ್‌ ಗೆ 183 ರನ್‌ಗಳ ಭರ್ಜರಿ ಜೊತೆಯಾಟ ನೀಡಿತು. ಕಿಂಗ್ಸ್‌ ಇಲೆವೆನ್ ಪಂಜಾಬ್‌ ತಂಡ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 223 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ಇನಿಂಗ್ಸ್‌ ಅಂತ್ಯದಲ್ಲಿ ನಿಕೋಲಸ್‌ ಪೂರನ್‌ 9 ಎಸೆತಗಳಲ್ಲಿ ಅಜೇಯ 25 ರನ್‌ ಚೆಚ್ಚಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಐಪಿಎಲ್‌ 2020 ಟೂರ್ನಿಯಲ್ಲಿ ರಾಯಲ್ಸ್‌ ತಂಡ 216 ರನ್‌ ಗಳಿಸಿದ್ದು ಈ ಹಿಂದಿನ ದೊಡ್ಡ ಮೊತ್ತ ಆಗಿತ್ತು. ಈಗ ಈ ದಾಖಲೆಯನ್ನು ಪಂಜಾಬ್ ತಂಡ ತನ್ನದಾಗಿಸಿಕೊಂಡಿತ್ತು. ಆದರೆ, ಈ ದಾಖಲೆಯನ್ನು ಕ್ಷಣಮಾತ್ರದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಹೆಸರಿಗೆ ಬರೆದುಕೊಂಡಿದೆ. 

ಐಪಿಎಲ್ ಇತಿಹಾಸದಲ್ಲಿ ಮೊದಲ ವಿಕೆಟ್‌ಗೆ ದಾಖಲೆಯ ಜೊತೆಯಾಟವನ್ನು ಸನ್‌ ರೈಸರ್ಸ್‌ ಹೈದರಾಬಾದ್ ತಂಡದ ಜಾನಿ ಬೈರ್‌ಸ್ಟೋವ್‌ ಮತ್ತು ಡೇವಿಡ್‌ ವಾರ್ನರ್ ಹೆಸರಲ್ಲಿದೆ. ಈ ಜೋಡಿ 2018ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 185 ರನ್‌ಗಳ ಜೊತೆಯಾಟ ಆಡಿ ಮಾಡಿತ್ತು. ಭಾನುವಾರದ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ಮತ್ತು ಮಯಾಂಕ್‌ ಅಗರ್ವಾಲ್‌ ಜೋಡಿ 2ನೇ ಶ್ರೇಷ್ಠ ಜೊತೆಯಾಟವಾಗಿ ಮೊದಲ ವಿಕೆಟ್‌ಗೆ 183 ರನ್‌ ಗಳಿಸಿದರು.

ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ತಮ್ಮ ವೃತ್ತಿಬದುಕಿನ ಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನವಾಗಿ 89 ರನ್‌ ಸಿಡಿಸಿದ್ದ ಮಯಾಂಕ್‌ ಅಗರ್ವಾಲ್, ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಐಪಿಎಲ್‌ನ ಚೊಚ್ಚಲ ಶತಕ ಬಾರಿಸಿದರು. 9 ಫೋರ್ ಮತ್ತು 7 ಸಿಕ್ಸರ್‌ಗಳನ್ನೂ ಅವರನ್ನು ಸಿಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಾಲು ಮರದ ತಿಮ್ಮಕ್ಕನನ್ನು ನೆನೆದ ಬಜ್ಜಿ

ಭಾರತ ಕ್ರಿಕೆಟ್ ತಂಡದ ಆಟಗಾರ ಹರ್ಭಜನ್ ಸಿಂಗ್, ರಾಜ್ಯದ ಹೆಮ್ಮೆಯ ತಾಯಿಯನ್ನು ನೆನೆದು ಟ್ವೀಟ್ ಮಾಡಿದ್ದಾರೆ.ಸಾಲುಮರದ ತಿಮ್ಮಕ್ಕ ಅವರನ್ನು ಭಜ್ಜಿ ನೆನೆದು ಟ್ವೀಟ್ ಮಾಡಿದ್ದಾರೆ.

ರೈನಾ, ರಾಯುಡುರನ್ನು ಚೆನ್ನೈ ನೆನೆಯುತ್ತಿರುವುದೇಕೆ?

ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಎರಡು ಸೋಲುಗಳನ್ನು ಕಾಣುತ್ತಿದ್ದಂತೆ ಕೋಚ್ ಗೆ ತಲೆನೋವು ಶುರುವಾಗಿದೆ. ಸುರೇಶ್ ರೈನಾ ಮತ್ತು ಅಂಬಾಟಿ ರಾಯುಡು ಅವರು ಅನುಪಸ್ಥಿತಿ ಕಾಡುತ್ತಿದೆ ಎಂದು ಕೋಚ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಥಮ ಬಾರಿಗೆ ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್ ಪುರುಷರ ಪಂದ್ಯಾವಳಿ

ಉತ್ತರಪ್ರಭ ಸುದ್ದಿ ರೋಣ: ದ್ರೋಣಾಚಾರ್ಯ ಬ್ಯಾಡ್ಮಿಂಟನ್ ಕ್ಲಬ್ ರೋಣದ ವತಿಯಿಂದ ಪ್ರಥಮ ಬಾರಿಗೆ ರಾಜ್ಯಮಟ್ಟದ ಷಟಲ್…

ಸೋಲಿನ ಸುಳಿಗೆ ಸಿಲುಕಿದ ಧೋನಿ ವಿರುದ್ಧ ಟೀಕೆಗಳ ಮಹಾಪೂರ!

ಬೆಂಗಳೂರು : ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳಪೆ ಪ್ರದರ್ಶನ ತೋರುತ್ತಿರುವುದಕ್ಕೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ.