ಗಜೇಂದ್ರಗಡ: ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜ, ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ವಿಧಿವಶರಾದ ಹಿನ್ನಲೆಯಲ್ಲಿ ಪಟ್ಟಣದ ಅಭಿಮಾನಿಗಳು ಮತ್ತು ಸಂಘ ಸಂಸ್ಥೆಗಳು ಸಂತಾಪ ಸೂಚಿಸಿದ್ದಾರೆ.

ಪಟ್ಟಣದ ಮೈಸೂರ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂಗೀತ ಮಾತ್ರಿಕ, ಸಾವಿರಾರು ಹಾಡುಗಳ ಸರದಾರ ಎಸ್. ಪಿ ಬಾಲಸುಬ್ರಮಣ್ಯಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಈ ವೇಳೆ ಕಸಾಪ ತಾಲೂಕಾಧ್ಯಕ್ಷ ಐ.ಎ. ರೇವಡಿ ಮಾತನಾಡಿ, ಕೋನ್ಯಾನು ಕೋಟಿ ಅಭಿಮಾನುಗಳು ಎಸ್‌ಪಿಬಿ ಅವರು ಗುಣಮುಖರಾಗಿ ಬರಲಿ ಎಂದು ಹಾರೈಸಿದರೂ ಸಹ ಅಭಿಮಾನಿಗಳ ಹಾರೈಕೆ ಫಲಿಸದೇ, ಸಂಗೀತ ದಿಗ್ಗಜ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ತೆರಳಿರುವುದು ಬಹು ನಷ್ಟವಾಗಿದೆ ಎಂದರು.

ಎಸ್.ಕೆ ಕವಡಿಮಟ್ಟಿ, ಹೆಚ್.ಆರ್.ಭಜಂತ್ರಿ, ಕೆ.ಜಿ.ಸಂಗಟಿ, ಕಲ್ಲಿಗನೂರ, ಎಂ.ಎಸ್.ಮಕಾನದಾರ, ಎಸ್. ಎಸ್. ನರೇಗಲ್ಲ, ಬಿ.ವಿ.ಮುನವಳ್ಳಿ ಇದ್ದರು.

ಚೈತ್ರಾ ಮೆಲೋಡಿಸ್ ತಂಡದಿಂದ:

ಪಟ್ಟಣದ ಚೈತ್ರಾ ಮೆಲೋಡಿಸ್ ಕಲಾ ತಂಡದಿಂದ ಹಿರಿಯ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆ ಹಿನ್ನಲೆಯಲ್ಲಿ ಎಸ್‌ಪಿಬಿ ಅವರು ಹಾಡಿದ ಗೀತೆಗಳನ್ನು ಹಾಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಕಲಾವಿದರಾದ ಸಿದ್ದು ಗೌಡರ, ಡಿ.ಜಿ. ಮೋಮಿನ್, ಗೌಸ್ ಗಂಗಾವತಿ, ಬಾಬು ಗೊಡೇಕಾರ, ಜನಾರ್ಧನ ಅಮಟೆ ಇದ್ದರು.

ಬೀದಿಬದಿ ವ್ಯಾಪಾರಸ್ಥರಿಂದ:

ಪಟ್ಟಣದ ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳು ಒಕ್ಕೂಟ ವತಿಯಿಂದ ಸ್ಥಳೀಯ ಶ್ರೀ ಕಾಲಕಾಲೇಶ್ವರ ವೃತ್ತದಲ್ಲಿ ಗಾನಕೋಗಿಲೆ ಗಾನಗಂಧರ್ವ ಡಾ. ಎಸ್.ಪಿ ಬಾಲಸುಬ್ರಮಣ್ಯಂರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ತಾಲೂಕ ಅಧ್ಯಕ್ಷ ಭಾಷೆಸಾಬ್ ಕರ್ನಾಚಿ, ರಾಜು ಮಾಂಡ್ರೆ, ಬಾಬು ಗೋಡೆಕಾರ, ಹುಲ್ಲಪ್ಪ ತಳವಾರ, ಬಸು ಚಿನ್ನೂರು, ಇದ್ದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯ ಹಳ್ಳಿ ಗಳಲ್ಲಿ ಕೊರೊನಾ ಭಯ..!: ಗುಟಕಾ, ಸಿಗರೇಟ್ ಮಾರಿದ್ರೆ ದಂಡ ಗ್ಯಾರಂಟಿ..!

ಗದಗ: ಜಿಲ್ಲೆಯಲ್ಲಿ 180 ಪಾಸಿಟಿವ್ ಕೇಸ್ ಪತ್ತೆಯಾದ ಹಿನ್ನಲೆ ಹಳ್ಳಿ ಹಳ್ಳಿಗೂ ಕೊರೋನಾ ಭಯ ಶುರುವಾಗಿದೆ.…

ಕೆಎಸ್ಆರ್ ಟಿ ಸಿ ಬ್ರ್ಯಾಂಡ್ ಕರ್ನಾಟಕದ ಕೈ ತಪ್ಪಿಲ್ಲ : ಸಚಿವ ಸವದಿ ಸ್ಪಷ್ಟನೆ

ಕೆಎಸ್ಆರ್ ಟಿಸಿ ಪದ ಮತ್ತು ಲೋಗೋವನ್ನು ಕೇರಳಪಾಲಾಗಿದೆ ಎಂಬ ಸುದ್ದಿ ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ನಿರಾಕರಿಸಿದ್ದಾರೆ.

ಹುಲ್ಲೂರಿನಲ್ಲಿ ಮಳೆಯ ಆರ್ಭಟ: ಧರೆಗುರುಳುತ್ತಿವೆ ಮನೆ-ಮರಗಳು

ಕಳೆದ ಎರ್ಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮನೆ ಹಾಗೂ ಮರಗಳು ಧರೆಗುರುಳುತ್ತಿವೆ. ಇದರಿಂದ ಗದಗ ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.