ಗದಗ: ರಾಜ್ಯ ಸರ್ಕಾರ ಊರಿಗೊಂದು ಸ್ಮಶಾನಕ್ಕೆ ಆದ್ಯತೆ ನೀಡಿದ್ದು, ಈ ಬಗ್ಗೆ ಅನುದಾನದ ವ್ಯವಸ್ಥೆ ಕೂಡ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.ಗದಗನಲ್ಲಿ ಈ‌ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ 111 ಗ್ರಾಮಗಳಲ್ಲಿ ಸ್ಮಶಾನವಿಲ್ಲ. ಹೀಗಾಗಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದರು.
ಇನ್ನು ಒತ್ತುವರಿಯಾದ ಕಂದಾಯ ಇಲಾಖೆ ಜಮೀನನ್ನು ತೆರವುಗೊಳಿಸಿ ಇಲಾಖೆ ಸುಪರ್ಧಿಗೆ ತೆಗೆದುಕೊಳ್ಳುವಂತೆ ಸೂಚಿಸಿದ್ದು, ಇದರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನಕ್ಕೆ 5 ಎಕರೆ ಜಮೀನು ಹಾಗೂ ರೋಣದಲ್ಲಿ‌ ಬೀಜ ನಿಗಮದ ಕಚೇರಿಗೆ 1.20 ಗುಂಟೆ ಜಮೀನು ನೀಡಲಾಗಿದೆ. ಒತ್ತುವರಿ ಜಮೀನನ್ನು ಸ್ವಾಧೀನ ಪಡೆಸಿಕೊಂಡು ಸರ್ಕಾರದ ಇಲಾಖೆಗೆ ಹಂಚಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ.
ಜಿಲ್ಲೆಯ ನರಗುಂದ ತಾಲೂಕಿನಲ್ಲಿ -7 ಮತ್ತು ರೋಣ ತಾಲೂಕಿನಲ್ಲಿ 7 ಗ್ರಾಮಗಳು ಪ್ರವಾಹಕ್ಕೆ ಸಿಕ್ಕಿವೆ. ಈವರೆಗೆ ಒಟ್ಟು 338 ಮನೆಗಳಿಗೆ ಹಾನಿಯಾಗಿದ್ದು, 5553 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. ಇದರಲ್ಲಿ 6254 ಹೆಕ್ಟೇರ್ ತೋಟಾರಿಕೆ ಬೆಳೆ ಹಾನಿಯಾಗಿದ್ದು, ಈಗಾಗಲೇ 7.90ಲಕ್ಷ ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

You May Also Like

ಯಲಗೂರ ಶಕ್ತಿಮಾನಗೆ ಭಕ್ತರ ಭಕ್ತಿಮಾನ ಸಮರ್ಪಣೆ- ಕಾತಿ೯ಕೋತ್ಸವ ಸಂಭ್ರಮ ಏಳೂರು ಒಡೆಯನ ಸನ್ನಿಧಿಯಲ್ಲಿ ಭಕ್ತಿ ಪರಾಕಾಷ್ಠೆ – ಮಿಂದೆದ್ದ ಜನಸಾಗರ

ಸಚಿತ್ರ ವರದಿ: ಗುಲಾಬಚಂದ ಆರ್. ಜಾಧವಆಲಮಟ್ಟಿ : ಕೃಷ್ಣೆಯ ತೀರದ ಪ್ರಾಕೃತಿಕ ಪರಿಮಳದ ಹಸಿನೆಲದ ಸುವಾಸನೆಯಲ್ಲಿ…

ಗದಗ, ನರಗುಂದ, ರೋಣ, ಮುಂಡರಗಿ ತಾಲೂಕಿನಲ್ಲಿಂದು ಸೋಂಕಿರು ಪತ್ತೆ

ಗದಗ: ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ ರೋಣ ತಾಲೂಕಿನ ಮದೆನಗುಡಿ ಗ್ರಾಮದ ನಿವಾಸಿ 35 ವರ್ಷದ ಪುರುಷ(ಪಿ-23121)…

ವಿದ್ಯಾರ್ಥಿ ಆತ್ಮಹತ್ಯೆ

ಉತ್ತರಪ್ರಭ ನರೇಗಲ್:‌ ಪಟ್ಟಣದ ಹುಚ್ಚೀರೇಶ್ವರ ನಗರದ ವಿದ್ಯಾರ್ಥಿ ಕಾರ್ತಿಕ ವೀರಪ್ಪ ಹಳ್ಳಿಕೇರಿ(24) ನೇಣು ಬಿಗಿದುಕೊಂಡು ಆತ್ಮಹತ್ಯೆ…

ಜೆಡಿಎಸ್ ಸ್ಥಾನ ಕಬಳಿಸಲು ಬಿಜೆಪಿ ಹೊಂಚು – ರೇವಣ್ಣ!

ಹಾಸನ : ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮೀಸಲಾತಿ ಅಂತಿಮಗೊಳಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಶಾಸಕ ಎಚ್.ಡಿ. ರೇವಣ್ಣ ಆಕ್ರೋಶ ಹೊರ ಹಾಕಿದ್ದಾರೆ.