ಗದಗ: ರಾಜ್ಯ ಸರ್ಕಾರ ಊರಿಗೊಂದು ಸ್ಮಶಾನಕ್ಕೆ ಆದ್ಯತೆ ನೀಡಿದ್ದು, ಈ ಬಗ್ಗೆ ಅನುದಾನದ ವ್ಯವಸ್ಥೆ ಕೂಡ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.ಗದಗನಲ್ಲಿ ಈ‌ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ 111 ಗ್ರಾಮಗಳಲ್ಲಿ ಸ್ಮಶಾನವಿಲ್ಲ. ಹೀಗಾಗಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದರು.
ಇನ್ನು ಒತ್ತುವರಿಯಾದ ಕಂದಾಯ ಇಲಾಖೆ ಜಮೀನನ್ನು ತೆರವುಗೊಳಿಸಿ ಇಲಾಖೆ ಸುಪರ್ಧಿಗೆ ತೆಗೆದುಕೊಳ್ಳುವಂತೆ ಸೂಚಿಸಿದ್ದು, ಇದರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನಕ್ಕೆ 5 ಎಕರೆ ಜಮೀನು ಹಾಗೂ ರೋಣದಲ್ಲಿ‌ ಬೀಜ ನಿಗಮದ ಕಚೇರಿಗೆ 1.20 ಗುಂಟೆ ಜಮೀನು ನೀಡಲಾಗಿದೆ. ಒತ್ತುವರಿ ಜಮೀನನ್ನು ಸ್ವಾಧೀನ ಪಡೆಸಿಕೊಂಡು ಸರ್ಕಾರದ ಇಲಾಖೆಗೆ ಹಂಚಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ.
ಜಿಲ್ಲೆಯ ನರಗುಂದ ತಾಲೂಕಿನಲ್ಲಿ -7 ಮತ್ತು ರೋಣ ತಾಲೂಕಿನಲ್ಲಿ 7 ಗ್ರಾಮಗಳು ಪ್ರವಾಹಕ್ಕೆ ಸಿಕ್ಕಿವೆ. ಈವರೆಗೆ ಒಟ್ಟು 338 ಮನೆಗಳಿಗೆ ಹಾನಿಯಾಗಿದ್ದು, 5553 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. ಇದರಲ್ಲಿ 6254 ಹೆಕ್ಟೇರ್ ತೋಟಾರಿಕೆ ಬೆಳೆ ಹಾನಿಯಾಗಿದ್ದು, ಈಗಾಗಲೇ 7.90ಲಕ್ಷ ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

You May Also Like

ನಾಗಾವಿ ತಾಂಡದಲ್ಲಿ ಜಲಜೀವನ ಯೋಜನೆಗೆ ಚಾಲನೆ

ತಾಲೂಕಿನ ನಾಗಾವಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಗಾವಿ ತಾಂಡದಲ್ಲಿ ಹಾಗೂ ಬಿಂಕದಕಟ್ಟಿ, ಮಲ್ಲಸಮುದ್ರ ಗ್ರಾಮಗಳಲ್ಲಿ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗೆ ಭಾನುವಾರ ಶಾಸಕ ಎಚ್.ಕೆ.ಪಾಟೀಲ ಭೂಮಿ ಪೂಜೆ ನೆರವೇರಿಸಿದರು.

ಈಜಲು ಹೋದ ಇಬ್ಬರು ಹುಡುಗರು ಕ್ವಾರಿಯಲ್ಲೆ ಸಾವು: ಅಗ್ನಿಶಾಮಕ ದಳದಿಂದ ಶೋಧ ಕಾರ್ಯ

ಉತ್ತರಪ್ರಭಗದಗ: ತಾಲೂಕಿನ ಶ್ಯಾಗೋಟಿ ಗ್ರಾಮದ ಇಬ್ಬರು ವಿದ್ಯಾರ್ಥಿಗಳು ಈಜಲು ಹೋಗಿ ಮಣ್ಣು ಹುತಿದ್ದ ದೋಡ್ಡ ಕ್ವಾರಿಯಲ್ಲಿ…

ಆಲಮಟ್ಟಿಯ ಮರಿಮಟ್ಟಿಯಲ್ಲಿ ಜಾನಪದ ಕಲಾವಿದರಿಗೆ ಬಟ್ಟೆ ವಿತರಣಾ ಸಮಾರಂಭ ಜರುಗಿತು

ಉತ್ತರಪ್ರಭಆಲಮಟ್ಟಿ: ಜಾನಪದ ಕಲೆಗಳು ನಮ್ಮ ಪರಂಪರೆಯ ಜೀವಾಳವಾಗಿದ್ದು ಅವು ಮೌಲ್ಯಾಧಾರಿತ ಸಂಸ್ಕೃತಿಯ ಪ್ರತೀಕವಾಗಿವೆ, ಎಂದು ಕನ್ನಡ…

ನಾಳೆ ಸಂಪುಟ ಸಭೆ: ಹಲವು ನಿರೀಕ್ಷೆ ಮೂಡಿಸಿದ ಸಭೆ

ಸಾಕಷ್ಟು ಜನರು ತೀವ್ರ ತೊಂದರೆಗೀಡಾಗಿದ್ದಾರೆ. ಸರ್ಕಾರ ತಮ್ಮ ಸಂಕಷ್ಟಕ್ಕೆ ನೆರವಾಗಬಹುದು ಎಂದು ಬಹುತೇಕರು ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ ಗಳ ಲೆಕ್ಕಾಚಾರದಲ್ಲೆ ತೊಡಗಿದ್ದಾರೆ.