ಹೈದರಾಬಾದ್: ಮಹಿಳೆಯೊಬ್ಬರಿಗೆ ಕೆಲವು ವರ್ಷಗಳಲ್ಲಿ 139 ಜನರು ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ನಡೆದಿದ್ದು, 25 ವರ್ಷದ ಮಹಿಳೆ ಈ ಕುರಿತು ದೂರು ದಾಖಲಿಸಿದ್ದಾರೆ.

ಈ ಸಂತ್ರಸ್ಥ ಮಹಿಳೆಗೆ 2010ರಲ್ಲಿ ವಿವಾಹವಾಗಿತ್ತು. ಆದರೆ, ಈ ಮಹಿಳೆ ಒಂದೇ ವರ್ಷದಲ್ಲಿ ಪತಿಯಿಂದ ವಿಚ್ಛೇದನ ಪಡೆದಿದ್ದರು. ಹೀಗಾಗಿ ಮಾಜಿ ಪತಿಯ ಕೆಲವು ಕುಟುಂಬ ಸದಸ್ಯರು ನನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸಂತ್ರಸ್ಥೆ ನೀಡಿದ ದೂರಿನ ನಂತರ ಪೊಲೀಸರು ಐಪಿಸಿ ಸೆಕ್ಷನ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಈ ಕುರಿತು 42 ಪುಟಗಳಲ್ಲಿ ಎಫ್ಐರಆರ್ ದಾಖಲಿಸಲಾಗಿದೆ. ಸದ್ಯಕ್ಕೆ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ದೂರಿನ ನಂತರ ನಾವು ಪ್ರಕರಣವನ್ನು ದಾಖಲಿಸಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಮಹಿಳೆಯ ಪ್ರಕಾರ, ಕಳೆದ ಹಲವಾರು ವರ್ಷಗಳಿಂದ 139 ಜನರು ವಿವಿಧ ಸ್ಥಳಗಳಲ್ಲಿ ಅತ್ಯಾಚಾರ ಎಸಗಿದ್ದಾರೆ. ಜೊತೆಗೆ ಬೆದರಿಕೆ ಮತ್ತು ಶೋಷಣೆಗೆ ಒಳಗಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

Leave a Reply

Your email address will not be published. Required fields are marked *

You May Also Like

ಎನ್‌ಐಎ ವಶಕ್ಕೆ ಪಿಎಸ್‌ಐ ಸುನೀಲ

ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಹೇಳಿದ ಎನ್‌ಐಎ ನೋಟಿಸ್ ಗೆ ಪ್ರತಿಕ್ರಿಯಿಸದ ಪಿಎಸ್‌ಐ ಸುನೀಲ್ ಅವರನ್ನು ರಾಷಟ್ರೀಯ ತನಿಕಾ ದಳ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

ಇಂದು ಐಶ್ವರ್ಯ ರೈ, ಮಗಳು ಆರಾಧ್ಯಳಿಗೂ ಸೋಂಕು ದೃಢ

ಮುಂಬೈ: ಶನಿವಾರ ರಾತ್ರಿ ಹಿರಿಯ ನಟ ಅಮಿತಾಬ್ ಬಚ್ಚನ್ ತಮಗೆ ಸೋಂಕುದೃಢ ಪಟ್ಟ ಕುರಿತು ಟ್ವೀಟ್ ಮಾಡಿದ್ದರು. ಕನ್ನಡತಿ ಐಶ್ವರ್ಯ ರೈ ಮತ್ತು ಪುತ್ರಿ ಆರಾಧ್ಯಳಿಗೂ ಪಾಸಿಟಿವ್

ಮಹಿಳಾ ಸಚಿವೆ ಕುರಿತು ಹೇಳಿದ ಹೇಳಿಕೆಗೆ ಮಾಜಿ ಸಿಎಂ ಹೇಳಿದ್ದೇನು?

ಭೋಪಾಲ್ : ಬಿಜೆಪಿ ಜನರು, ಮತದಾರರನ್ನು ತಪ್ಪು ದಾರಿಗೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಅವರಿಗೆ ಮಾಜಿ ಸಿಎಂ ಕಮಲ್ ನಾಥ್ ಪತ್ರ ಬರೆದಿದ್ದಾರೆ.