ಕೋವಿಡ್ ಲಸಿಕೆ ತಯಾರಿಸುತ್ತಿರುವ ಎಲ್ಲ ಪ್ರಯೋಗಗಳು ಈಗ ಯಶಸ್ವಿ ಹಾದಿಯಲ್ಲಿವೆ. ಸುರಕ್ಷತೆ ಮತ್ತು ರೋಗ ನಿರೋಧಕತೆ ಸೃಷ್ಟಿಸುವ ದೃಷ್ಟಿಯಲ್ಲಿ ಈ ಪ್ರಯೋಗಗಳು ಫಲ ನೀಡುತ್ತಿವೆ.


ಜಿನಿವಾ/ಜುರಿಚ್: ಸಂಶೋಧಕರು ಕೋವಿಡ್ ಲಸಿಕೆ ಕಂಡು ಹಿಡಿಯುವ ಯತ್ನದಲ್ಲಿ ಯಶಸ್ವಿಯಾಗುತ್ತಿದ್ದಾರೆ. ಬಹುತೇಕ ಸಂಶೋಧನೆಗಳು ಈಗ ಅಂತಿಮ ಹಂತದಲ್ಲಿವೆ, ಆದರೆ, 2021ರ ಆರಂಭದ ನಂತರವಷ್ಟೇ ಲಸಿಕೆ ಜನಬಳಕೆಗೆ ಲಭ್ಯವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್ಒ) ತುರ್ತು ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಮೈಕ್ ರಾನ್ ತಿಳಿಸಿದ್ದಾರೆ.


ಸೋಷಿಯಲ್ ಮೀಡಿಯಾದ ಪಬ್ಲಿಕ್ ಇವೆಂಟ್ ಉದ್ದೇಶಿಸಿ ಅವರು ಬುಧವಾರ ಮಾತನಾಡಿದರು.
ಲಸಿಕೆಯನ್ನು ಸರಿಯಾದ ಕ್ರಮದಲ್ಲಿ ವಿತರಿಸಲು ಡಬ್ಲೂಎಚ್ಒ ಉದ್ದೇಶಿಸಿದೆ. ಆದರೆ ಸದ್ಯ ಸೋಂಕು ಹರಡದಂತೆ ತಡೆಯುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.
ನಾವೀಗ ಉತ್ತಮ ಬೆಳವಣಿಗೆ ಕಾಣುತ್ತಿದ್ದೇವೆ. ಬಹುಪಾಲು ಲಸಿಕೆ ಸಂಶೋಧನೆಗಳು 3ನೆ ಹಂತದಲ್ಲಿದ್ದು, ಸುರಕ್ಷತೆ ಮತ್ತು ರೋಗ ನಿರೋಧಕ ಶಕ್ತಿ ಉತ್ಪಾದಿಸುವಲ್ಲಿ ಯಶಸ್ಸು ಕಾಣುತ್ತಿವೆ ಎಂದು ಅವರು ತಿಳಿಸಿದ್ದಾರೆ.
ವಾಸ್ತವದಲ್ಲಿ 2021ರ ಮೊದಲ ಭಾಗದಲ್ಲಿ ಲಸಿಕೆ ಸಾರ್ವಜನಿಕವಾಗಿ ಲಭ್ಯವಾಗಬಹುದು. ಈ ವಿಷಯದಲ್ಲಿ ನಾವು ಮುಕ್ತವಾಗಿ ಮಾತನಾಡಬೇಕು. ಲಸಿಕೆ ಕೇವಲ ಶ್ರೀಮಂತರಿಗೂ ಅಲ್ಲ, ಕೇವಲ ಬಡವರಿಗೂ ಅಲ್ಲ. ಅದು ಎಲ್ಲ ಸಾರ್ವಜನಿಕರಿಗಾಗಿ ತಯಾರಾಗುತ್ತಿದೆ. ಲಸಿಕೆ ಅಭಿವೃದ್ಧಿಯ ಎಲ್ಲ ಸಂಶೋಧನೆಗಳಿಗೆ ಡಬ್ಲೂಎಚ್ಒ ಒತ್ತಾಸೆಯಾಗಿ ನಿಂತಿದೆ ಎಂದು ರಾನ್ ಹೇಳಿದ್ದಾರೆ.


ಡಬ್ಲೂಎಚ್ಒ ಎಲ್ಲ ಕೋವಿಡ್ ಲಸಿಕೆ ಸಂಶೋಧನೆಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಅದು ನೀಡುವ ಹೇಳಿಕೆಗೆ ಗಣನೀಯ ಮೌಲ್ಯ ಮತ್ತು ತೂಕವಿದೆ.

Leave a Reply

Your email address will not be published. Required fields are marked *

You May Also Like

ಕ್ವಾರಂಟೈನಲ್ಲಿ ಮೊಬೈಲ್ ಸ್ವಿಚ್ ಆಫ್: ಮುಂಡರಗಿಯಲ್ಲಿ 2 ವರ್ಷದ ಮಗುವಿಗೆ ನೋಟಿಸ್!

ಹೋಂ ಕ್ವಾರಂಟೈನ್ನಲ್ಲಿರುವಾಗ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು ಶಿಕ್ಷಾರ್ಹ. ಮತ್ತೆ ಹೀಗೆ ಮಾಡಬೇಡಿ ಎಂಬ ತಹಸೀಲ್ದಾರ್ ಸೂಚನೆ ಸರಿಯಾಗಿಯೇ ಇದೆ. ಆದರೆ ಅದನ್ನು 2 ವರ್ಷದ ಮಗುವಿನ ಹೆಸರಿಗೆ ಕಳುಹಿಸಿದ್ದಾರೆ.

ಅಂದರ ಬಾಹರ ಆಡುತ್ತಿದ್ದ 6 ಜನ ಬಂದನ

ಲಕ್ಷ್ಮೇಶ್ವರ. ಲಕ್ಷ್ಮೇಶ್ವರ ಪಟ್ಟಣದಲ್ಲಿ ಕೊಡಿಯಲ್ಲಮ್ಮ ದೇವಸ್ಥಾನದ ಮುಂಬಾಗ, ಸಾರ್ವಜನಿಕ ಬಯಲು ಪ್ರದೇಶದಲ್ಲಿ ಇಸ್ಪೀಟ್ (ಅಂದರ ಬಾಹರ)…

ವಾರದಲ್ಲಿ ಸಮಸ್ಯೆ ಬಗೆಹರಿಸಲು ಕರವೆ ಆಗ್ರಹ

ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಘಟಕದ ವತಿಯಿಂದ ಶನಿವಾರ ಹೆಬ್ಬಾಳ ಗ್ರಾಪಂ ಎದುರು ಪ್ರತಿಭಟನೆ ನಡೆಸಲಾಯಿತು.

ಆಕಸ್ಮಿಕ ಬೆಂಕಿಗೆ ಬಣಿವೆ ಭಸ್ಮ

ವರದಿ: ವಿಠಲ ಕೆಳೂತ್ಮಸ್ಕಿ: ತಾಲೂಕಿನ ಜಕ್ಕೇರಮಡು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮೇವಿನ ಬಣಿವೆ ಸುಟ್ಟು…