ನವದೆಹಲಿ:ಕೋವಿಡ್ ನಿಂದ ತೀವ್ರ ಬಾಧಿತರಾಗಿ ಗುಣಮುಖರಾದ ಹಲವರಲ್ಲಿ ಇಂತಹ ಸಮಸ್ಯೆಗಳನ್ನು ವೈದ್ಯರು ಗುರುತಿಸುತ್ತಿದ್ದಾರೆ. ಕೋವಿಡ್ ಪರಿಣಾಮ ಇನ್ ಫ್ಲುಯೆಂಜಾಗಿಂತ ಹೆಚ್ಚಿನ ಕಾಲ ಕಾಡಬಹುದು ಎಂಬುದು ಈಗ ದೃಢವಾಗುತ್ತಿದೆ. ಇಲ್ಲಿವರೆಗೆ ಕೋವಿಡ್ ಶ್ವಾಸಕೋಶ ಮತ್ತು ಉಸಿರಾಟ ಸಂಬಂಧಿ ಇತರ ಅಂಗಗಳಿಗೆ ಬಾಧಿಸುತ್ತದೆ ಎನ್ನಲಾಗಿತ್ತು. ಆದರೆ ಅದರ ಪರಿಣಾಮ ಇದರಾಚೆಗೂ ಹೃದಯ, ಕಿಡ್ನಿ, ಮೆದುಳು ಮತ್ತು ಜೀರ್ಣಾಂಗವ್ಯೂಹದ ( gastrointestinal tract) ಮೇಲೂ ಪರಿಣಾಮ ಬೀರಬಹುದು ಎಂದು ಹಲವು ಪ್ರಕರಣಗಳಲ್ಲಿ ದೃಢವಾಗಿದೆ. ಕೋವಿಡ್ ರೋಗದಿಮದ ಗುಣಮುಖರಾದ ಹಲವಾರು ವ್ಯಕ್ತಿಗಳು ಈಗ ಮತ್ತೆ ಆಸ್ಪತ್ರೆಗಳತ್ತ ಧಾವಿಸುವಂತಾಗಿದೆ. ಇದು ಎಲ್ಲರಲ್ಲೂ ಕಾಣಿಸಿಕೊಂಡಿಲ್ಲವಾದರೂ, ಮುಂದಿನ ದಿನಗಳಲ್ಲಿ ಕಳವಳದ ವಿಷಯವಾಗಬಹುದು ಎಂದು ವೈದ್ಯರು ಅಬಿಮತ ವ್ಯಕ್ತಪಡಿಸುತ್ತಿದ್ದಾರೆ.


ಇಲ್ಲಿ ಇಬ್ಬರು ತಜ್ಞ ವೈದ್ಯರ ಭಿಪ್ರಾಯಗಳನ್ನು ನೀಡಲಾಗಿದೆ.
ದೆಹಲಿ ಅಪೊಲೊ ಆಸ್ಪತ್ರೆಯ ಸೀನಿಯರ್ ಕನ್ಸಲ್ಟಂಟ್ ಡಾ. ಎಸ್. ಚಟರ್ಜಿ ಹೇಳುತ್ತಾರೆ:
‘ಕೋವಿಡ್ ಬಾಧಿತರಾಗಿ ಗುಣಮುಖರಾದ ಲ್ಲರಲ್ಲೂ ಸಮಸ್ಯೆಗಳಿಲ್ಲ. ಆದರೆ ಸಾಮಾನ್ಯವಾಗಿ, ಗುಣಮುಖರಾದ ನಂತರವೂ ಕೆಲವು ವಾರದವರೆಗೆ ಅವರಲ್ಲಿ ಕಡಿಮೆ ಪ್ರಮಾಣದಲ್ಲಿ ಜ್ವರ ಮುಂದುವರೆಯುತ್ತಿದೆ. ಇದು ಆ ವ್ಯಕ್ತಿ ಮತ್ತು ಸಂಬಂಧಿಕರಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ. ಕೆಲವೊಮ್ಮೆ ವೈದ್ಯರಿಗೂ, ಮತ್ತೆ ಕೋವಿಡ್ ಲಕ್ಷಣವೇ ಎಂಬ ಸಂದೇಗ ಉಂಟಾಗಲು ಕಾರಣವಾಗುತ್ತಿದೆ. ಇಂತವರಲ್ಲಿ ಜೀರ್ಣಾಂಗವ್ಯೂಹದ ಸಮಸ್ಯೆಯಿಂದ ವಾಂತಿ-ಭೇದಿ ಕಾಡತೊಡಗಿದ ನಿದರ್ಶನಗಳಿವೆ. ಇದು ಸಣ್ಣ ಪ್ರಮಾಣದ ಸಮಸ್ಯೆಯಷ್ಟೇ…
ಆದರೆ ಕೆಲವರಲ್ಲಿ ಹೃದಯದ ಮೇಲೂ ಪರಿಣಾಮವಾಗಿದೆ. ಇಂತವರಲ್ಲಿ ಮ್ಯೋಕಾರ್ಡಿಟಿಸ್ (ಹೃದಯದ ಅಂಗಾಂಸದ ಉರಿತ) ಕಾಣಿಸಿಕೊಳ್ಳುತ್ತಿದೆ. ಇದರ ಪ್ರಮಾಣ ಕಡಿಮೆಯಿಂದ ಮಧ್ಯಮ ಮಟ್ಟದವರೆಗಿದೆ. ಎಡಕ್ಕಿಂತ ಬಲಭಾಗದಲ್ಲಿ ಇದು ಕಾಣಿಸಿಕೊಂಡಿದೆ. ಮ್ಯೋಕಾರ್ಡಿಟಿಸ್ ನಿಂದ ಯಾವ ರೋಗಿಯೂ ಗಂಭೀರವಾಗಿ ಅಸ್ವಸ್ಥರಾಗಿಲ್ಲ. ಆದರೆ ಮುಂದಿನ ದಿನಗಳ ಫಾಲೋ-ಅಪ್ ನಲ್ಲಿ ಇದು ಮುಖ್ಯ ಅಂಶವಾಗಲಿದೆ…
ಇನ್ನೊಂದು ಅಂಶವೆಂದರೆ, ಕೆಲವರಲ್ಲಿ postural drop of blood pressure (ದೇಹದ ಭಂಗಿಗೆ ಅನುಗುಣವಾಗಿ ರಕ್ತದೊತ್ತಡದಲ್ಲಿ ಇಳಿಕೆ) ಕಂಡುಬರುತ್ತಿದೆ.


ಮುಂಬೈನ ಸೀನಿಯರ್ ಚೆಸ್ಟ್ ಫಿಜಿಸಿಯನ್ ಡಾ. ಜೀನಂ ಶಾ ಗುರುತಿಸಿದ ವಿವರಗಳು:
ಹೊರ ರೋಗಿ ವಿಭಾಗದಲ್ಲಿ (ಒಪಿಡಿ) ಲಂಗ್ ಫೈಬ್ರೊಸಿಸ್ (ಶ್ವಾಸಕೋಶಸ ಅಂಗಾಂಶಗಳಿಗೆ ಹಾನಿ) ಸಮಸ್ಯೆ ಇರುವ ಕೋವಿಡ್-ಗುಣಮುಖ ರೋಗಿಗಳನ್ನು ಕಾಣುತ್ತಿದ್ದೇನೆ. ಕೋವಿಡ್ ಚಿಕಿತ್ಸೆ ಸಂದರ್ಭದಲ್ಲಿ ವೆಂಟಿಲೇಟರ್ ಮೇಲಿದ್ದವರು ಮತ್ತು ಆಮ್ಲಜನಕ ಕೊರತೆಯಿಂದ ಬಳಲಿದವರಲ್ಲಿ ಕೆಲವರು ಈಗ ಆಮ್ಲಜನಕ ಕೊರತೆಯ ಸಮಸ್ಯೆಯಿಂದ ಒಪಿಡಿಗೆ ಬರುತ್ತಿದ್ದಾರೆ.


ಆದರೆ, ಈ ಸಂಖ್ಯೆ ಕಡಿಮೆಯಿದೆ ಎಂಬುದೇ ಸಮಾಧಾನ. ಕೋವಿಡ್ ಗುಣಮುಖರ ಇನ್ನೊಂದು ಸಮಸ್ಯೆಯೆಂದರೆ, ಅವರಲ್ಲಿ ಹಲವರಿಗೆ ಮಾನಸಿಕ ಬದಲಾವಣೆ ಆಗಿವೆ. ಕೋವಿಡ್ ರೋಗದಿಂದ ತೀವ್ರ ಬಾಧಿತರಾದವರು, ವೃದ್ಧರು ಮತ್ತು ವೆಂಟಿಲೇಟರ್ ಮೇಲಿದ್ದವರು, ಐಸಿಯು ಚಿಕಿತ್ಸೆ ಪಡೆದವರು- ಇಂತವರಲ್ಲಿ ಗುಣಮುಖರಾದ ಕೆಲವರಲ್ಲಿ ಮಾತ್ರ ಒಂದು ಮಟ್ಟಿಗಿನ ಮಾನಸಿಕ ಒತ್ತಡ ಕಾಣುತ್ತಿದೆ. ಇವರು ಸರಿಯಾಗಿ ಊಟ ಮಾಡದೇ ತೂಕ ಕಳೆದುಕೊಳ್ಳುತ್ತಿದ್ದಾರೆ. ಇದು ಅವರ ಮನೆಯವರಿಗೂ ಚಿಂತೆಯ ವಿಷಯವಾಗಿದೆ. ಇದಕ್ಕೇನೂ ಚಿಕಿತ್ಸೆ ಬೇಕಾಗಿಲ್ಲ,ಯಾವುದೇ ಚಿಂತೆ, ಆತಂಕವಿಲ್ಲದೇ ಊಟ ಮಾಡುತ್ತ ಹೋಗಬೇಕು.
ಹೃದಯ, ಶ್ವಾಸಕೋಶ ಮತ್ತು ಇತರೆ ಸಮಸ್ಯೆ ಕಾಣಿಸಿದರೆ ವೈದ್ಯರನ್ನು ಸಂಪರ್ಕಿಸಬೇಕು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಮತ್ತೆ 10 ಕಂಟೇನ್ ಮೆಂಟ್ ಪ್ರದೇಶಗಳ ಘೋಷಣೆ

ಗದಗ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜುಲೈ 10ರಂದು 10 ಪ್ರತಿಬಂಧಿತ ಪ್ರದೇಶಗಳನ್ನು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಘೋಷಿಸಿದ್ದಾರೆ.

ಕೊರೊನಾ ದುಷ್ಪರಿಣಾಮ: ನಗರಗಳ 14 ಕೋಟಿ ಜನರ ಬದುಕು ದುಸ್ತರ

ದೆಹಲಿ: ದೇಶಾದ್ಯಂತ ಕೊರೊನಾ ಕಾರಣದಿಂದಾಗಿ ಲಾಕ್ಡೌನ್ ದುಷ್ಪರಿಣಾಮ ನಗರ ಪ್ರದೇಶಗಳಲ್ಲಿ ವಾಸವಾಗಿರುವ ನಾಗರಿಕರ ಮೇಲೆ ಹೆಚ್ಚಾಗಿದೆ.…

ಕಾಶ್ಮೀರದಲ್ಲಿ ಮುಂದುವರೆದ ಪಾಕ್ ದಾಳಿ: ಸರಣಿ ಕದನ ವಿರಾಮ ಉಲ್ಲಂಘನೆ

ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ದಾಳಿಯನ್ನು ಮುಂದುವರೆಸಿದೆ. ನಿನ್ನೆ ಮುಂಜಾನೆ ರಾಜ್ಯದ ವಿವಿಧೆಡೆ ಆರಂಭವಾಗಿರುವ ಕದನವಿರಾಮ ಉಲ್ಲಂಘನೆ ಇಡೀ ರಾತ್ರಿ ಮುಂದುವರೆದಿತ್ತು.