ಹೈದರಾಬಾದ್: ಲಾಕ್ ಡೌನ್ ಹಿನ್ನೆಲೆಯಲ್ಲಿ ಹಲವು ದಿನಗಳ ನಂತರ ಸರ್ಕಾರ ಶೂಟಿಂಗ್ ಗೆ ಅವಕಾಶ ನೀಡಿದೆ. ಇದರಿಂದಾಗಿ ಕಲಾವಿದರಲ್ಲಿ ಹುರುಪು ಮನೆ ಮಾಡಿದೆ. ಈ ಕುರಿತು ನಟ ಕಿಚ್ಚ ಸುದೀಪ್ ಸಹ ಸುಧೀರ್ಘ ಸಮಯದ ಬಳಿಕ ಶೂಟಿಂಗ್ ಮರಳಿದ ಅನುಭವವನ್ನು ಹಂಚಿಕೊಂಡಿದ್ದಾರೆ.

ಅಲ್ಲದೇ, ಶೂಟಿಂಗ್‍ ಆರಂಭವಾಗಿರುವ ಕುರಿತು ಚಿತ್ರೀಕರಣದ ಚಿಕ್ಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇಂದು ಮೇಕಪ್ ಹಾಕಿಕೊಂಡಾಗ ಅದ್ಭುತ ಅನುಭವವಾಯಿತು. ಸಿನಿಮಾ ಎಂಬ ಉತ್ಸಾಹ. ಹೀಗಾಗಿ ನಾನು ಇಲ್ಲಿದ್ದೇನೆ. ಮತ್ತೆ ವಿಕ್ರಾಂತ್ ರೋಣ ಘರ್ಜಿಸಲಿದ್ದಾನೆ ಎಂದು ಬರೆದುಕೊಂಡಿದ್ದಾರೆ.

ಕಿಚ್ಚ ಸುದೀಪ್ ಟ್ವೀಟ್ಗೆಿ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಶುಭ ಕೋರುತ್ತಿದ್ದಾರೆ. ಹಲವು ದಿನಗಳ ಬಳಿಕ ಅಣ್ಣ ಶೂಟಿಂಗ್ಗೆ್ ಮರಳಿದ್ದಾರೆ. ವಾವ್ ಫೆಂಟಾಸ್ಟಿಕ್, ಯು ಲುಕ್ ಸ್ಟನ್ನಿಂಗ್ ಅಣ್ಣ ಎಂದು ಹೇಳಿದ್ದಾರೆ. ಫ್ಯಾಂಟಮ್ ಚಿತ್ರ ಕಿಚ್ಚ ಸುದೀಪ್ ಹಾಗೂ ರಂಗಿತರಂಗ ಸಾರಥಿ ಅನೂಪ್ ಭಂಡಾರಿ ಕಾಂಬಿನೇಷನ್ನಿಲ್ಲಿ ತಯಾರಾಗುತ್ತಿದೆ. ಸಿನಿಮಾ ಟೈಟಲ್ ಹಾಗೂ ಕಿಚ್ಚನ ವಿಕ್ರಾಂತ್ ರೋಣ ಪಾತ್ರದ ಕುರಿತು ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಪೋಸ್ಟರ್ ನಲ್ಲಿ ಕಿಚ್ಚನ ಅರ್ಧ ಫೇಸ್ ನೋಡಿ, ಮೊನಚು ಮೀಸೆ ಮೋಡಿಗೆ ಅಭಿಮಾನಿಗಳು ಫುಲ್ ಫೀದಾ ಆಗಿದ್ದಾರೆ.

Leave a Reply

Your email address will not be published. Required fields are marked *

You May Also Like

23 ರಂದು ಉಚಿತ ಆರೋಗ್ಯ, ರಕ್ತದಾನ ಶಿಬಿರ

ಉತ್ತರಪ್ರಭ ಸುದ್ದಿನಿಡಗುಂದಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ…

ಪಿಯುಸಿ ಸರ್ಕಾರಿ ಕಾಲೇಜುಗಳು ‘ಫೇಲ್’: ದೆಹಲಿ ಸರ್ಕಾರಿ ಶಾಲೆಗಳ ಮೇಲುಗೈ

ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡಿದರೆ ಏನಾಗಬಹುದು ಎಂಬುದನ್ನು

ವಿಚಿತ್ರ ಕರುವೊಂದಕ್ಕೆ ಕೊರೋನಾ ಕರು ಎಂದು ನಾಮಕರಣ

ಎರಡು ತಲೆ, ಎಂಟು ಕಾಲುಗಳುಳ್ಳ ಎಮ್ಮೆ ಕರುವೊಂದು ಜನಿಸಿದ್ದು, ಈ ಕರುವಿಗೆ ಗ್ರಾಮಸ್ಥರು ಕೊರೋನಾ ಕರು ಎಂದು ಹೆಸರಿಟ್ಟಿದ್ದಾರೆ.

ಸರಳ ಗಣರಾಜ್ಯೋತ್ಸವ ಆಲಮಟ್ಟಿ ಪ್ರವಾಸಿ ತಾಣ ಉತ್ತೇಜನಕ್ಕೆ ಸಂಕಲ್ಪ- ಎಚ್.ಸುರೇಶ್

ಆಲಮಟ್ಟಿ: ಈ ಭಾಗದ ಪ್ರವಾಸಿ ತಾಣವಾಗಿ ಖ್ಯಾತಿ ಪಡೆಯುತ್ತಿರುವ ಆಲಮಟ್ಟಿಯನ್ನು ಇನ್ನಷ್ಟು ಪ್ರವಾಸಿಗರನ್ನು ಇತ್ತ ಆಕಷಿ೯ಸಿ…