ಸದ್ಯ ಬಿಹಾರ್ ಬಿಜೆಪಿಯ ಸಂಘಟನಾತ್ಮಕ ಕಾರ್ಯದರ್ಶಿ ಸೇರಿ 25 ನಾಯಕರಿಗೆ ಪಾಸಿಟಿವ್ ದೃಢಪಟ್ಟಿದೆ.

ಪಾಟ್ನಾ: ಬಿಜೆಪಿಯ ಪಾಟ್ನಾ ಕೇಂದ್ರ ಕಚೇರಿಯಲ್ಲಿ ಆತಂಕ ಶುರುವಾಗಿದೆ. ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗೇಂದ್ರನಾಥ್, ಪ್ರಧಾನ ಕಾರ್ಯದರ್ಶಿ ದೇವೇಶ್ಕುಮಾರ್ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಧಾಮೋಹನ್ ಶರ್ಮಾ ಸೇರಿ 25 ರಾಜ್ಯ ನಾಯಕರಿಗೆ ಇಂದು ಪಾಸಿಟಿವ್ ದೃಢಪಟ್ಟಿದೆ.

ಈ ಮೊದಲು 75 ಬಿಜೆಪಿ ನಾಯಕರಿಗೆ  ಸೋಂಕು ತಗುಲಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಕುರಿತು ಸ್ಪಷ್ಟನೆ ನೀಡಿರುವ ಪಕ್ಷದ ವಕ್ತಾರ ರಜ್ನಿ ರಾಜನ್ ಪಟೇಲ್, 75 ಜನರಿಗೆ ಪರೀಕ್ಷೆ ಮಾಡಲಾಗಿದ್ದು, 25 ಜನರಿಗೆ ಪಾಸಿಟಿವ್ ಬಂದಿದೆ ಎಂದಿದ್ದಾರೆ.

ಬಿಹಾರಿನಲ್ಲಿ ಸೋಂಕಿನ ತೀವ್ರತೆ ಹೆಚ್ಚಿದ್ದು, ನಾಳೆಯಿಂದ ಜುಲೈ 31ರವರೆಗೆ ಗ್ರಾಮೀಣ ಭಾಗ ಹೊರತುಪಡಿಸಿ ಇಡೀ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಲಾಗಿದೆ.

ಇ-ರ‌್ಯಾಲಿ   ಪರಿಣಾಮ

ಜೂನ್ 9ರಂದು ಅಮಿತ್ ಶಾ ದೆಹಲಿಯಿಂದ ನಡೆಸಿದ ಇ-ರ್ಯಾಲಿ ನಂತರ ಹಲವಾರು ರಾಷ್ಟ್ರೀಯ ನಾಯಕರು ಇಂತಹ ವರ್ಚುವಲ್ ರ್ಯಾಲಿ ನಡೆಸಿದರು. ಪಾಟ್ನಾ ಬಿಜೆಪಿ ಕಚೇರಿಯಲ್ಲಿ ನೂರಾರು ಬಿಜೆಪಿ ನಾಯಕರು ಸೇರಿ ಇಂತಹ ಇ-ಸಭೆಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಹಲವು ಸಭೆಗಳಲ್ಲಿ ಒಬ್ಬ ಪಾಸಿಟಿವ್ ಕಾರ್ಯಕರ್ತನೂ ಪಾಲ್ಗೊಂಡ ಪರಿಣಾಮ 25 ನಾಯಕರಿಗೆ ಸೋಂಕು ತಗುಲಿದೆ ಎನ್ನಲಾಗಿದೆ.

Leave a Reply

Your email address will not be published.

You May Also Like

ಹುಲಕೋಟಿ-ಕುರ್ತಕೋಟಿಗೆ ಸ್ವಾತಂತ್ರ್ಯ ಕೊಡಿಸಿ : ಬಿಜೆಪಿ ಮುಖಂಡ ಅನೀಲ್ ಮೆಣಸಿನಕಾಯಿ ಆಗ್ರಹ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷವಾದರೂ ಹುಲಕೋಟಿ, ಕುರ್ತಕೋಟಿ ಗ್ರಾಮ ಪಂಚಾಯತಿಗಳಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಈ ಬಾರಿಯಾದರೂ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮುಕ್ತ ಹಾಗೂ ಪಾರದರ್ಶಕ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಮುಖಂಡ ಅನೀಲ್ ಮೆಣಸಿನಕಾಯಿ ಆಗ್ರಹಿಸಿದರು.

ಭಾರತೀಯ ಟೆಕ್ಕಿಗಳಿಗೆ ಪೌರತ್ವ: ಮಹತ್ವದ ಆದೇಶಗಳಿಗೆ ಬೈಡನ್ ಸಹಿ

ವಾಷಿಂಗ್ಟನ್: ಅಮೆರಿrಕಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರಿಸಿದ ಬೆನ್ನಲ್ಲೇ 15 ಮಹತ್ವದ ಆದೇಶಗಳಿಗೆ ಬೈಡೆನ್ ಸಹಿ ಮಾಡಿದ್ದಾರೆ.…

ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕನ್ನಡಿಗನ್ನು ರಕ್ಷಿಸಿದ ನಟ!

ಕೊರೊನಾ ಲಾಕ್ ಡೌನ್ ನಿಂದಾಗಿ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕರ್ನಾಟಕದ ನೂರಾರು ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ತಲುಪಿಸಲು ಬಾಲಿವುಡ್ ನಟ ಸೋನು ಸೂದ್ ಮುಖ್ಯ ಪಾತ್ರ ವಹಿಸಿದ್ದರು.

ಶ್ರೀರಾಮ್ ಘೋಷಣೆಗೆ ಜೈ ಸಿಯಾ ರಾಮ್ ಎಂಬ ಪ್ರತ್ಯುತ್ತರ

ದೇಶದೆಲ್ಲೆಡೆ ಟೂಲ್‌ಕಿಟ್, ರೈತರ ಪ್ರತಿಭಟನೆ, ಪೆಟ್ರೋಲ್ ದರ ಏರಿಕೆ ಸುದ್ದಿಯಾಗುತ್ತಿದ್ದರೆ, ಪಶ್ಚಿಮ ಬಂಗಾಳದಲ್ಲಿ ಮಾತ್ರ ಘೋಷಣೆಗಳ ರಾಜಕೀಯ ನಡೆಯುತ್ತಿದೆ. ಚುನಾವಣೆ ಎದುರು ನೋಡುತ್ತಿರುವ ಪಶ್ಚಿಮ ಬಂಗಾಳದಲ್ಲಿ ಈಗಲೇ ಬಿಜೆಪಿ ಮತ್ತು ಆಡಳಿತರೂಢ ಟಿಎಂಸಿ ಪಕ್ಷಗಳು ತಮ್ಮ ಕಾರ್ಯಕರ್ತರನ್ನು ಸೆಳೆಯಲು ಘೋಷಣೆಗಳ ಮೊರೆ ಹೋಗಿದ್ದಾರೆ.