3ನೆ ಸ್ಥಾನದಲ್ಲಿರುವ ದೆಹಲಿಯಲ್ಲಿ 1,781 ಮತ್ತು 4ನೆ ಸ್ಥಾನದಲ್ಲಿರುವ ಗುಜರಾತಿನಲ್ಲಿ 871 ಕೇಸು ಶನಿವಾರ ದಾಖಲಾಗಿದ್ದರೆ, 5ನೆ ಸ್ಥಾನ ತಲುಪಿದ ರಾಜ್ಯದಲ್ಲಿ ಈ ಎರಡೂ ರಾಜ್ಯಗಳಿಗಿಂತ ಹೆಚ್ಚು ಕೇಸು (2,798) ದಾಖಲಾಗಿವೆ.
ಬೆಂಗಳೂರು: ಸೋಂಕಿತರ ಸಂಖ್ಯೆಯ ಆಧಾರದ ಪಟ್ಟಿಯಲ್ಲಿ (ಕೇಸ್-ಲೋಡ್) ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. 6ನೆ ಸ್ಥಾನದಲ್ಲಿದ್ದ ಕರ್ನಾಟಕ ಶನಿವಾರ ಉತ್ತರಪ್ರದೇಶವನ್ನು ದಾಟಿ 5ನೆ ಸ್ಥಾನಕ್ಕೆ ಏರಿದೆ.
ಆದರೆ ಇದೆಲ್ಲಕ್ಕೂ ಶಾಕಿಂಗ್ ನ್ಯೂಸ್ ಎಂದರೆ, ಈಗ ಕರ್ನಾಟಕ ಅತಿ ವೇಗವಾಗಿ ಸೋಂಕು ಹರಡಲ್ಪಡುತ್ತಿರುವ ರಾಜ್ಯವಾಗಿದೆ. ರಾಜ್ಯದ ಪ್ರತಿದಿನದ ಕೇಸುಗಳಲ್ಲಿ ಅರ್ಧದಷ್ಟು ಕೇಸುಗಳು ಬೆಂಗಳೂರಿನಿಂದಲೇ ವರದಿಯಾಗುತ್ತಿದ್ದು ಬೆಂಗಳೂರು ಈಗ ಮತ್ತೊಂದು ವಾರದ ಲಾಕ್ ಡೌನ್ ಗೆ ಒಳಗಾಗಬೇಕಾಗಿದೆ.
ಶನಿವಾರ ರಾಜ್ಯದಲ್ಲಿ 2,798 ಕೇಸುಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆಯಲ್ಲಿ (ಕೇಸ್-ಲೋಡ್) ಉತ್ತರಪ್ರದೇಶಕ್ಕಿಂತ ಹೆಚ್ಚು ಸೋಂಕಿತರನ್ನು ಹೊಂದಿದ ರಾಜ್ಯವಾಗಿದೆ. ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 2,46,600, 2ನೆ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 1.34, 226, 3ನೆ ಸ್ಥಾನದಲ್ಲಿರುವ ದೆಹಲಿಯಲ್ಲಿ 1,10.921, 4ನೆ ಸ್ಥಾನದಲ್ಲಿರುವ ಗುಜರಾತಿನಲ್ಲಿ 41,026 ಕೇಸುಗಳಿದ್ದರೆ ಶನಿವಾರ 5ನೆ ಸ್ಥಾನ ತಲುಪಿರುವ ರಾಜ್ಯದಲ್ಲಿ 36,216 ಸೋಂಕಿನ ಪ್ರಕರಣಗಳು ದಾಖಲಾಗಿವೆ.
3ನೆ ಸ್ಥಾನದಲ್ಲಿರುವ ದೆಹಲಿಯಲ್ಲಿ 1,781 ಮತ್ತು 4ನೆ ಸ್ಥಾನದಲ್ಲಿರುವ ಗುಜರಾತಿನಲ್ಲಿ 871 ಕೇಸು ಶನಿವಾರ ದಾಖಲಾಗಿದ್ದರೆ, 5ನೆ ಸ್ಥಾನ ತಲುಪಿದ ರಾಜ್ಯದಲ್ಲಿ ಈ ಎರಡೂ ರಾಜ್ಯಗಳಿಗಿಂತ ಹೆಚ್ಚು ಕೇಸು (2,798) ದಾಖಲಾಗಿವೆ.

ಸಾವಿನ ಸಂಖ್ಯೆಯಲ್ಲೂ ಹೆಚ್ಚಳ
ಕಳೆದ ವಾರದಲ್ಲಿ ಕರ್ನಾಟಕದಲ್ಲಿ ಸಾವುಗಳ ಸಂಖ್ಯೆ ಹೆಚ್ಚಿದೆ.
• ರಾಜ್ಯದ ಒಟ್ಟು ಕೋರೊನಾ ಸಾವು: 617
• ಈ 30 ದಿನದಲ್ಲಿ ಸಂಭವಿಸಿದ ಸಾವು: 367 (ಒಟ್ಟು ಸಾವಿನ ಶೇ. 60ರಷ್ಟು ಈ ತಿಂಗಳಲ್ಲೇ ಸಂಭವಿಸಿವೆ ಎಂಬುದು ಎಚ್ಚರಿಕೆಯ ಗಂಟೆ)
• ಕಳೆದ ನಾಲ್ಕು ದಿನಗಳಲ್ಲಿ ಕೋರೊನಾ ಸಾವು: ಸುಮಾರು 200
• ನಿನ್ನೆ ಶನಿವಾರ ಒಂದೇ ದಿನದಲ್ಲಿ ಸಾವು: 70
ಮೊದಲೆರಡು ಸ್ಥಾನಗಳಲ್ಲಿರುವ ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿ ಸಂಭವಿಸುತ್ತಿರುವ ಸಾವುಗಳಿಗೆ ಹೋಲಿಕೆ ಮಾಡುವಷ್ಟು ರಾಜ್ಯ ಸಮೀಪವಿದೆ.
ಕೇಸುಗಳ ದೈನಿಕ ಬೆಳವಣಿಗೆ ದರದಲ್ಲಿ ರಾಜ್ಯದ ಪ್ರಮಾಣ ಶೇ. 7.7 ಇದ್ದರೆ, ಒಟ್ಟು ರಾಷ್ಟ್ರೀಯ ದರ ಇಳಿಯುತ್ತ ಶೇ. 3.4 ತಲುಪಿದೆ. ಕೇಸುಗಳ ದೈನಿಕ ಬೆಳವಣಿಗೆ ದರದಲ್ಲಿ ಕರ್ನಾಟಕಕ್ಕಿಂತ ಮುಂದಿದ್ದ ತೆಲಂಗಾಣದಲ್ಲಿ ಈಗ ದೈನಿಕ ಕೇಸುಗಳ ಸಂಖ್ಯೆ ಇಳಿಯುತ್ತ ಬಂದು ದರ ಶೇ. 6ಕ್ಕೆ ಇಳಿದಿದೆ.
ಇದು ರಾಕ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಬೇಕು. ದೈನಂದಿನ ಸೋಂಕು ಸಂಖ್ಯೆ ಮತ್ತು ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ.
(ಮಾಹಿತಿ: ಅಮಿತಾಬ್ ಸಿನ್ಹಾ ಲೇಖನ, ಇಂಡಿಯನ್ ಎಕ್ಸ್ ಪ್ರೆಸ್)