ನವದೆಹಲಿ: ನಮ್ಮೆಲ್ಲರ ನೆಚ್ಚಿನ ಭಾರತದ ಮಾಜಿ ಕ್ಯಾಪ್ಟನ್ ಹಾಗೂ ದಾದಾ ಎಂದಲೆ ಹೆಸರಾದಂತ ಈಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರು ಬಾಲಿವುಡ್ ನಲ್ಲಿ ತಮ್ಮ ಜೀವನ ಚರಿತ್ರೆ ಮೇಲೊಂದು ಚಿತ್ರದ ಚಿತ್ರೀಕರಣಕ್ಕೆ ಒಪ್ಪಿಕೊಂಡಿದ್ದಾರೆ.

ಈ ಹಿಂದೆ ಬಾಲಿವುಡ್ನಲ್ಲಿ ಕ್ರಿಕೆಟಿಗರ ಜೀವನ ಚಿತ್ರಗಳು ಬಾಕ್ಸಾಫೀಸಿನಲ್ಲಿ ಹೆಸರು ಮಾಡಿದ್ದು, ಈಗ ಬಾಲಿವುಡ್ ನಲ್ಲಿ ಮಾಜಿ ಭಾರತದ ಕ್ಯಾಪ್ಟನ್ ಗಂಗೂಲಿಯವರ ಬಯೋಪಿಕ್ ಮಾಡಲು ಮುಂದಾಗಿದ್ದಾರೆ.

ಈ ಚಿತ್ರ ಮಾಡಲು ಸೌರವ್ ಗಂಗೂಲಿ ಅವರು ಒಪ್ಪಿಗೆ ನೀಡಿದ್ದು ನಾನು ಚಿತ್ರದ ನಿರ್ದೇಶಕರ ಹೆಸರು ಹೇಳಲಾರೆ ಹಾಗೂ ಈ ಚಿತ್ರವು ಹಿಂದಿ ಭಾಷೆಯಲ್ಲಿ ಮೂಡಿಬರಲಿದೆ, ಇನ್ನು ಕೆಲ ದಿನಗಳಲ್ಲಿ ಚಿತ್ರಕ್ಕೆ ಬೇಕಾದ ಕೆಲಸ ಶುರು ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ಈ ಚಿತ್ರವು ಬಹು ನಿರೀಕ್ಷಿತ ಹಾಗೂ ಬಹುದೊಡ್ಡ ಚಿತ್ರವಾಗಲಿದ್ದು ಚಿತ್ರಕ್ಕೆ ಕನಿಷ್ಠ 200 ರಿಂದ 250 ಕೋಟಿ ಬಂಡವಾಳದ್ದಾಗಿದೆ, ಕೊನೆಯದಾಗಿ ಅಭಿಮಾನಿಗಳ ಬಯಕೆಗೆ ನಾಯಕನಾಗಿ ಬಾಲಿವುಡ್ ನಟ ರಣಬೀರ್ ಕಪೂರ್ ಗಂಗೂಲಿಯವರ ಪಾತ್ರಕ್ಕೆ ಅಭಿನಯಿಸುವಂತೆ ಕೇಳಿಬರುತ್ತಿದೆ,

ಈಗ ಸದ್ಯಕ್ಕೆ ಚಿತ್ರಕಥೆಯನ್ನು ಬರೆಯಲು ಆರಂಭಿಸಿದ್ದೇವೆ ಎಂದು ಸೌರವ್ ಗಂಗೂಲಿಯವರು ತಿಳಿಸಿದ್ದಾರೆ.

Leave a Reply

Your email address will not be published.

You May Also Like

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚು ಹೆಚ್ಚಿಸಿದ ಚುನಾವಣಾ ಆಯೋಗ!

ನವದೆಹಲಿ : ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚು ಮಿತಿಯನ್ನು ಶೇ. 10ರಷ್ಟು ಹೆಚ್ಚಿಸಲಾಗಿದೆ.

ಇಂದು ಬಿಸಿಸಿಐ ಸಭೆ: ಐಪಿಎಲ್ ಮತ್ತೆ ಮೈದಾನಕ್ಕೆ?

ಕೋರೊನಾ ಬಿಕ್ಕಟ್ಟಿನ ಕಾರಣಕ್ಕೆ ಕ್ರಿಕೆಟ್ ಮಲಗಿದೆ. ತಿಂಗಳುಗಳ ನಂತರ ಇಂದು ಬಿಸಿಸಿಐ ಮಹತ್ವದ ಸಭೆ ನಡೆಸುತ್ತಿದ್ದು,…

ಬಿಟ್ ಕಾಯಿನ್ ಸದ್ದು: ಬಿಟ್ ಕಾಯಿನ್ ಎಂದರೇನು ? ಕ್ರಿಪ್ಟೋಕರೆನ್ಸಿಯಲ್ಲಿ ಹಲವು ವಿಧ..!

ಜನಪ್ರಿಯವಾಗಿದೆ. ಹಾಗಾದ್ರೆ ಏನಿದು ಕ್ರಿಪ್ಟೋ ಕರೆನ್ಸಿ? ಸಾಮಾನ್ಯ ಹಣಕ್ಕೂ ಇದಕ್ಕೂ ಏನು ವ್ಯತ್ಯಾಸ..? ಸಾಮಾನ್ಯ ನೋಟಿನ ಬದಲು ಕ್ರಿಪ್ಟೋ ಕರೆನ್ಸಿ ಬಳಕೆ ಮಾಡಿದರೆ ಲಾಭ ಏನು..? ಈ ಹಣಕಾಸು ವಹಿವಾಟು ಸುರಕ್ಷಿತವೇ..? ಸಾಮಾನ್ಯ ಹಣಕಾಸು ವ್ಯವಹಾರ, ಬ್ಯಾಂಕಿoಗ್ ವ್ಯವಹಾರಕ್ಕಿಂತಾ ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿ..? ಇದರ ಸಂಕ್ಷೀಪ್ತ ಮಾಹಿತಿ ನಿಮಗಾಗಿ

5-8 ಮಿಲಿಯನ್ ವರ್ಷಗಳಷ್ಟು ಹಿಂದಿನ ಆನೆ ಪಳೆಯುಳಿಕೆ ಪತ್ತೆ.!

ಲಖ್ನೋ: ಉತ್ತರಪ್ರದೇಶದ ಸಹರನ್ಪುರದ ಬದ್ಶಾಹಿ ಬಾಗ್ ಬಳಿಯಲ್ಲಿ ಸುಮಾರು 5-8 ಮಿಲಿಯನ್ ವರ್ಷಗಳಷ್ಟು ಹಿಂದಿನ ಆನೆಯ…