ಗದಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಓರ್ವ ಯುವಕ ಇಂದು ಬಲಿಯಾಗಿದ್ದಾನೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 9 ಕ್ಕೆ ಏರಿದೆ.
ಗದಗ ನಗರದ 20 ವರ್ಷದ ಯುವಕ ಇಂದು ಸಾವನ್ನಪ್ಪಿದ್ದು, ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ಯುವಕ ಜುಲೈ 9 ರಂದು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ದಾಖಲಾದ ಬಳಿಕ ಕೋವಿಡ್-19 ಪರೀಕ್ಷೆ ಮಾಡಲಾಗಿತ್ತು. ಜುಲೈ 10 ರಂದು ಕೊರೊನಾ ಸೋಂಕು ದೃಢ ಪಟ್ಟಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You May Also Like

ಎಚ್.ಎಸ್.ವೆಂಕಟಾಪೂರದ ನೀರಿನ ಬವಣೆ ನೀಗುವುದು ಯಾವಾಗ..?

ಅದು ಆ ತಾಲೂಕಿನ ಕಟ್ಟಕಡೆಯ ಗ್ರಾಮ. ಆ ತಾಲೂಕಿನಲ್ಲಿ ಆ ಗ್ರಾಮ ಇದ್ರೂ ವಿಧಾನ ಸಭಾ ಕ್ಷೇತ್ರ ಮಾತ್ರ ಬೇರೆಯದೆ. ಎಲ್ಲಿಯ ತಾಲೂಕು, ಎಲ್ಲಿಯ ವಿಧಾನಸಭಾ ಕ್ಷೇತ್ರ, ಎಲ್ಲಿಯ ಆ ಗ್ರಾಮ ಎನ್ನುವಂತಾಗಿದೆ.

ಬುಧವಾರ ಭಾರತಕ್ಕೆ ಬರಲಿವೆ ರಫೇಲ್ ಯುದ್ಧ ವಿಮಾನ: ಸದ್ಯ ಫ್ರಾನ್ಸ್ ಬಿಟ್ಟಿವೆ ಫೈಟರ್ ಜೆಟ್ಸ್

ಸೋಮವಾರ ಫ್ರಾನ್ಸ್ ನಿಂದ ಹೊರಟಿರುವ ಮೊದಲ ಬ್ಯಾಚಿನ ರಫೇಲ್ ಯುದ್ಧ ಫ್ರಾನ್ಸ್ ಬಿಟ್ಟಿರುವ 5 ರಫೇಲ್ ಯುದ್ಧ ವಿಮಾನಗಳು 7 ಸಾವಿರ ಕಿಮೀ ದೂರ ಕ್ರಮಿಸಿ ಬುಧವಾರ ಭಾರತವನ್ನು ತಲುಪಲಿವೆ. ಯುಎಇನಲ್ಲಿರುವ ಫ್ರಾನ್ಸ್ ಏರ್ ಬೇಸ್ ನಲ್ಲಿ ಇಳಿದು ನಂತರ ಭಾರತ ತಲುಪಲಿವೆ. ಎವಿಯೇಷನ್ ಕಂಪನಿ ಡಸಾಲ್ಟ್ ನಿರ್ಮಿಸಿರುವ ಈ ಅತ್ಯಾಧುನಿಕ ಫೈಟರ್ ಜೆಟ್ಸ್ ದಕ್ಷಿಣ ಫ್ರಾನ್ಸಿನ ಬ್ರೊಡಾಕ್ಸ್ ನಗರದಿಂದ ಪ್ರಯಾಣ ಬೆಳೆಸಿವೆ. 2016ರಲ್ಲಿ ಭಾರತವು ಫ್ರಾನ್ಸ್ ಕಂಪನಿ ಡಸಾಲ್ಟ್ ಕಂಪನಿಯಿಂದ ಇಂತಹ 36 ವಿಮಾನಗಳನ್ನು ಖರೀದಿಸಲು 59 ಸಾವಿರ ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿತ್ತು. ಅದರ ಮೊದಲ ಭಾಗವಾಗಿ ಈಗ 5 ವಿಮಾನಗಳು ದೇಶದ ಸೇನೆಯ ಭಾಗವಾಗಲಿವೆ.

ಯಾವ ಜಿಲ್ಲೆಯ ಪೊಲೀಸರಿಗೆ ಕೊರೊನಾ ಬರುವುದಿಲ್ಲವೋ ಆ ಜಿಲ್ಲೆಯೇ ಗ್ರೀನ್ ಜೋನ್!

ಕೊರೊನಾ ಸೋಂಕು ತಡೆಗಟ್ಟುವಲ್ಲಿ ಜಿಲ್ಲೆಯ ಪೊಲೀಸರು ಮಾದರಿಯಾಗಿದ್ದಾರೆ ಎಂದು ಡಿಜಿ – ಐಜಿಪಿ ಪ್ರವೀಣ್ ಸೂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆಯಲ್ಲಿಂದು ಪತ್ತೆಯಾದ ಸೋಂಕಿತರ ವಿವರ

ಗದಗ ಜಿಲ್ಲೆಯ ಗದಗ, ಮುಂಡರಗಿ, ರೋಣ, ನರಗುಂದ, ಶಿರಹಟ್ಟಿ ತಾಲೂಕುಗಳಲ್ಲಿ ಕೊರೊನಾ ಸೋಂಕಿತರು ಇಂದು ದೃಢಪಟ್ಟಿದ್ದಾರೆ. ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.