ಗದಗ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜುಲೈ 10ರಂದು 10 ಪ್ರತಿಬಂಧಿತ ಪ್ರದೇಶಗಳನ್ನು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಘೋಷಿಸಿದ್ದಾರೆ.

ಗದಗ ಬೆಟಗೇರಿ ವಾರ್ಡ ಸಂಖ್ಯೆ 29 ಹಮಾಲರ ಪ್ಲಾಟ್ಸ ಪ್ರತಿಬಂಧಿತ ಪ್ರದೇಶವಾಗಿ ಮತ್ತು ಅದರ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ ಗದಗ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಇವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಮುಂಡರಗಿ ತಾಲೂಕ ಜಂತ್ಲಿಶಿರೂರ ಗ್ರಾಮಪಂಚಾಯತಿ ವಾರ್ಡ ಸಂಖ್ಯೆ 01 ಪ್ರತಿಬಂಧಿತ ಪ್ರದೇಶವಾಗಿ ಮತ್ತು ಅದರ ಸುತ್ತಲಿನ 7 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ ಮುಂಡರಗಿ ತಾಲೂಕಾ ಪಂಚಾಯತಿಯ ಸಹಾಯಕ ನಿರ್ದೇಶಕ ಎಂ.ಎಸ್.ಕೊರ್ಲಹಳ್ಳಿ ಇವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಗದಗ ಬೆಟಗೇರಿ ವಾರ್ಡ ನಂ: 15, ಬಸವೇಶ್ವರ ನಗರ ಪ್ರತಿಬಂಧಿತ ಪ್ರದೇಶವಾಗಿ ಮತ್ತು ಆ ಪ್ರದೇಶದ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ ಗದಗ ಡೈಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಜಿ.ವಿ.ಹಿರೇಮಠ ಇವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಗದಗ ಬೆಟಗೇರಿ ವಾರ್ಡ ನಂ: 03, ಹೆಲ್ತ್ ಕ್ಯಾಂಪ್ ಪ್ರತಿಬಂಧಿತ ಪ್ರದೇಶವಾಗಿ ಮತ್ತು ಅದರ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ ಗದಗ ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಇವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಗದಗ ಬೆಟಗೇರಿ ವಾರ್ಡ ನಂ: 22, ಗಂಗಿಮಡಿ ಪ್ರತಿಬಂಧಿತ ಪ್ರದೇಶವಾಗಿ ಮತ್ತು ಅದರ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ ಗದಗ ಡೈಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ವಿ.ಪಾಟೀಲ ಇವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಗದಗ ತಾಲೂಕ ಕಣಗಿನಹಾಳ ವಾರ್ಡ ನಂ: 03 ಪ್ರತಿಬಂಧಿತ ಪ್ರದೇಶವಾಗಿ ಮತ್ತು ಅದರ ಸುತ್ತಲಿನ 7 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ ಗದಗ ತಾಲೂಕಾ ಪಂಚಾಯತಿಯ ಸಹಾಯಕ ನಿರ್ದೇಶಕ ಮೌನೇಶ ಬಡಿಗೇರ ಇವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಮುಳಗುಂದ ಪಟ್ಟಣ ಪಂಚಾಯತ್ ವಾರ್ಡ ಸಂಖ್ಯೆ 18 ಸಿತಾಲಹರಿ ಪ್ರತಿಬಂಧಿತ ಪ್ರದೇಶವಾಗಿ ಮತ್ತು ಅದರÀ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ ಮುಳಗುಂದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಉಮಾ ಯತ್ತಿ ಇವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಶಿರಹಟ್ಟಿ ಪಟ್ಟಣ ಪಂಚಾಯತ ವಾರ್ಡ ನಂ: 06, ಮ್ಯಾಗೇರಿ ಓಣಿ ಪ್ರತಿಬಂಧಿತ ಪ್ರದೇಶವಾಗಿ ಮತ್ತು ಅದರÀ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ ಶಿರಹಟ್ಟಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಲ್ಲೇಶ ಅಕ್ಕರ್ಕಿ ಇವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಗಜೇಂದ್ರಗಡ ಪುರಸಭೆ ವ್ಯಾಪ್ತಿಯ ವಾರ್ಡ ನಂ; 20, ಪೂಜಾರ ಓಣಿ ಪ್ರತಿಬಂಧಿತ ಪ್ರದೇಶವಾಗಿ ಮತ್ತು ಅದರ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ ಗಜೇಂದ್ರಗಡ ಪುರಸಭೆ ಮುಖ್ಯಾಧಿಕಾರಿ ಮಹಾಂಥೇಶ ಬೀಳಗಿ ಇವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಮುಂಡರಗಿ ತಾಲೂಕ ಡೋಣಿ ಗ್ರಾ.ಪಂ ವ್ಯಾಪ್ತಿಯ ವಾರ್ಡ ನಂ: 04, ಕುಂಬಾರ ಓಣಿ ಪ್ರತಿಬಂಧಿತ ಪ್ರದೇಶವಾಗಿ ಮತ್ತು ಅದರ ಸುತ್ತಲಿನ 7 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ ಮುಂಡರಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹುಲಿಗೆವ್ವ ಇವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಕಂಟೈನ್‌ಮೆ0ಟ್, ಬಫರ್ ಝೋನ್ ಮತ್ತು ಕ್ಲಸ್ಟರ್‌ಗಳಲ್ಲಿ ಕೊರೋನಾ ವೈರಸ್ ನಿಯಂತ್ರಿಸುವ ಕುರಿತು ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಹಾಗೂ ಇಲಾಖೆಗಳಿಗೆ ಸರ್ಕಾರದ ಮಾರ್ಗಸೂಚಿಗಳನ್ವಯ ಜಿಲ್ಲಾಧಿಕಾರಿಗಳು ಕರ್ತವ್ಯಗಳನ್ನು ನಿಗದಿಪಡಿಸಿರುತ್ತಾರೆ. ಈ ಆದೇಶವನ್ನು ಉಲ್ಲಂಘಿಸಿದವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ- 2005 ರನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ನಿರ್ದೇಶಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಶೃಂಗಸಭೆಯಲ್ಲಿ ಭಾರತ ಸೇರಿಸುವಂತೆ ಟ್ರಂಪ್ ಮನವಿ

ಅಮೇರಿಕಾ: ಮುಂದಿನ ತಿಂಗಳು ನಡೆಯಬೇಕಿದ್ದ ಜಿ7 (ಗ್ರೂಪ್ ಆಫ್‌ 7) ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್…

ಹಿರಿಯ ನಟ ಶಿವರಾಂ ಆರೋಗ್ಯ ಸ್ಥಿತಿ ಗಂಭೀರ

ಬೆಂಗಳೂರು: ಚಲಚಿತ್ರರಂಗದ ಹಿರಿಯ ನಟ ಆರೋಗ್ಯ ಸ್ಥಿತಿ ಗಂಭೀರ. ನಟ ಶಿವರಾಂ ಅವರ  ಆರೋಗ್ಯದಲ್ಲಿ ಏರುಪೇರಾದ…

ಪಪಂ ಅಧಿಕಾರಿಗಳ ನಿರ್ಲಕ್ಷ್ಯ : ಸಾರ್ವಜನಿಕರಿಗೆ ಕತ್ತಲಲ್ಲಿಯೇ ಸಂಚಾರ ಭಾಗ್ಯ..!

ಪಟ್ಟಣದಲ್ಲಿ ಮಾಗಡಿ ಹಾಗೂ ಬೆಳ್ಳಟ್ಟಿ ರಸ್ತೆಗೆ ಅಳವಡಿಸಲಾದ ಹೈಮಾಸ್ಟ್ ದೀಪಗಳು ಸಾರ್ವಜನಿಕರಿಗೆ ಬೆಳಕಾಗದೆ ಅವರ ಸಂಚಾರಕ್ಕೆ ಸಂಚಕಾರ ತರುತ್ತಿರುವುದು ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಅಗಸ್ತ್ಯ ತೀರ್ಥ ಬಾವಿಯಲ್ಲಿ ನೀರುಪಾಲಾದ ಯುವಕ

ದೀಪಾವಳಿ ಹಬ್ಬಕ್ಕೆಂದು ಸಂಬಂಧಿಕರ ಊರಿಗೆ ಬಂದಿದ್ದ ಯುವಕ ನೀರುಪಾಲಾದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.