ಆರೋಗ್ಯ ಸಚಿವ ಮತ್ತು ಮೇಯರ್ ಸೃಷ್ಟಿಸಿದ ಗೊಂದಲಕ್ಕೆ ತೆರೆ ಬಿದ್ದಿದ್ದು, ಐಶ್ವರ್ಯಾ ಮತ್ತು ಮಗಳಿಗೆ ಪಾಸಿಟಿವ್ ಇರುವುದು ಪಕ್ಕಾ ಎಂದು ಎರಡನೇ ಪರೀಕ್ಷಾ ವರದಿ ತಿಳಿಸಿದೆ.

ಮುಂಬೈ: ಐಶ್ವರ್ಯ ರೈ ಮತ್ತು ಮಗಳು ಆರಾಧ್ಯಳಿಗೆ ಪಾಸಿಟಿವ್ ಇದೆ ಎಂದು ಎರಡು ಗಂಟೆಗಳ ಹಿಂದೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಟ್ವೀಟ್ ಮಾಡಿದ್ದರು. ನಂತರ ಮುಂಬೈ ಪಾಲಿಕೆ ಮೇಯರ್ ಕಿಶೋರಿ ಪಡ್ನೆಕರ್ ಪಿಟಿಐ ಜೊತೆ ಮಾತನಾಡಿ, ಐಶ್ವರ್ಯ ಮತ್ತು ಆರಾಧ್ಯರಿಗೆ ನೆಗೆಟಿವ್ ಎಂದು ತಿಳಿಸಿದ್ದರು. ಇದು ಜನರಲ್ಲಷ್ಟೇ ಅಲ್ಲ, ಸರ್ಕಾರದಲ್ಲೇ ಗೊಂದಲ ಮೂಡಿಸಿತ್ತು.

ಆಗ ಆರೋಗ್ಯ ಸಚಿವ ತಮ್ಮ ಟ್ವೀಟ್ ಡಿಲೀಟ್ ಮಾಡುವ ಮೂಲಕ ಇನ್ನಷ್ಟು ಗೊಂದಲ ಮೂಡಿಸಿದರು. ಆಮೇಲೆ ಪಾಲಿಕೆ ಅಸಿಸ್ಟಂಟ್ ಕಮೀಶನರ್ ಐಶ್ವರ್ಯ ಮತ್ತು ಆರಾಧ್ಯ ಇಬ್ಬರಿಗೂ ಪಾಸಿಟಿವ್ ಇದೆ ಎಂದು ಸ್ಪಷ್ಟಪಡಿಸಿದ್ದು, ಹೆಲ್ತ್ ಬುಲೆಟಿನ್ನಲ್ಲಿ ಈ ವಿಷಯ ಪ್ರಕಟವಾಗಲಿದೆ ಎಂದಿದ್ದಾರೆ.

ಮೊದಲ ರ್ಯಾಪಿಡ್ ಪರೀಕ್ಷೆಯಲ್ಲಿ ಐಶ್ವರ್ಯ ಮತ್ತು ಆರಾಧ್ಯರಿಗೆ ನೆಗೆಟಿವ್ ಬಂದಿತ್ತು. ನಂತರದ ಎರಡನೇ ಪರೀಕ್ಷೆಯಲ್ಲಿ ಅವರಿಬ್ಬರಿಗೂ ಪಾಸಿಟಿವ್ ಬಂದಿದ್ದು ಪಕ್ಕಾ ಆಗಿದೆ. ಇದೆಲ್ಲದರ ನಡುವೆ ಟಿವಿ ಆಂಕರ್ಗಳು ಇದೊಂದು ರಾಷ್ಟ್ರೀಯ ವಿಷಯ ಎಂಬಂತೆ ತಲೆಗೆ ವಿಪರೀತ ಹಚ್ಚಿಕೊಂಡು ಚರ್ಚೆ ನಡೆಸಿದ್ದಾರೆ!

Leave a Reply

Your email address will not be published. Required fields are marked *

You May Also Like

ಆರೋಗ್ಯಕ್ಕೆ ಮಾರಕ ತಂಬಾಕು

ಹಾನಿಕಾರಕ ಎಂದು ತಂಬಾಕುಗಳಿoದ ಸಿದ್ಧವಾದ ಬಿಡಿ ಹಾಗೂ ಸಿಗರೇಟುಗಳ ಚೀಟು, ಪ್ಯಾಕೇಟು, ಕವರ್ ಹಾಗೂ ಬಾಕ್ಸ್ ಮೇಲೆ ಚೇಳಿನ ಚಿತ್ರದೊಂದಿಗೆ ಗಂಟಲು & ಬಾಯಿ ಕ್ಯಾನ್ಸರ್ ನ ಸ್ಪಷ್ಟ ಚಿತ್ರದೊಂದಿಗೆ ಮುದ್ರಿಸಿದ್ದರೂ ಜನರು ಹಗಲು ಕಂಡ ಬಾವಿಯಲ್ಲಿ ಇರುಳು ಹೋಗಿ ಬಿಳುವಂತ ಪರಸ್ಥಿತಿ ನಮ್ಮ ಮುಂದಿದೆ. ಒಂದು ವಯೋಮಾನದ ತರುಣರು, ತಂಬಾಕು ಮಿಶ್ರಿತ ಗುಟಕಾ, ಮಾವಾ, ಪಾನ್ ಬೀಡಾ, ಬೀಡಿ ಸಿಗರೇಟ್ ಗಳನ್ನು ಮೋಜು ಮಸ್ತಿಗಾಗಿ ಸೇವನೆ ಮಾಡುವುದು, ತಿಂದುಜಗಿಯುವುದು, ಅಗಿಯುವುದು,ಎಲ್ಲೆಂದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದು, ಹುಡುಗಿಗೆ ಹಠ ಇರಬಾರದು, ಹುಡುಗರಿಗೆ ಚಟ ಇರಬಾರದು ಎಂಬ ಮಾತು ನಿತ್ಯಸತ್ಯವಾಗಿದೆ. ಹುಡುಗರುಜಿದ್ದಿಗೆ ಬಿದ್ದವರಂತೆ ಮುಗಿ ಬಿದ್ದುಕೊಂಡು ಸೇವನೆ ಮಾಡುವುದನ್ನು ನೋಡಿದರೆ ನಮ್ಮ ಯುವ ಜನತೆ ಎತ್ತ ಸಾಗುತ್ತಿದೆ ಎಂಬುದೇ ತೋಚುತ್ತಿಲ್ಲ.

ಕೊರೋನಾ : ನಗರ ಪ್ರದೇಶಗಳ ಆತಂಕ

ನವದೆಹಲಿ : ಕೊರೊನಾದಿಂದಾಗಿ ನಗರ ಪ್ರದೇಶಗಳು ಅಕ್ಷರಶಃ ಆತಂಕದಲ್ಲಿ ಇವೆ. ಕೊರೊನಾದಿಂದಾಗಿ ನಿರುದ್ಯೋಗ, ಬಡತನ, ಅಸಮಾನತೆ…

ಆಮ್ಲಜನಕ ಟ್ಯಾಂಕ್ ಸೋರಿಕೆ : 11 ಸಾವು

ಮಹರಾಷ್ಟçದ ನಾಸಿಕ್‌ನಲ್ಲಿ ಜಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ಆಮ್ಲಜನಕ ಟ್ಯಾಂಕ್ ಸೋರಿಕೆಯಿಂದ 11 ಜನ ಸಾವನ್ನಪ್ಪಿದ್ದಾರೆ.

ಉಸಿರಾಟ ತೊಂದರೆಯಿಂದ ನಟ ಚಿರಂಜೀವಿ ಸರ್ಜಾ ಸಾವು..!

ನಟ ಚಿರಂಜೀವಿ ಸರ್ಜಾ ಉಸಿರಾಟದ ತೊಂದರೆ ಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದರು.