ಬೆಂಗಳೂರು: ರಾಜ್ಯದಲ್ಲಿಂದು 2798 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 36216 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 880. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 14716 ಕೇಸ್ ಗಳು. ರಾಜ್ಯದಲ್ಲಿ 20883 ಸಕ್ರೀಯ ಪ್ರಕರಣಗಳಿವೆ.
ಇಂದು ಕೊರೊನಾ ಸೋಂಕಿನಿಂದ 70 ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 613 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲೆಟಿನ್ ತಿಳಿಸಿದೆ.
ಈ ವಾರ ಪ್ರತಿದಿನ 1,500 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಸತತ 3 ದಿನದಿಂದ ಸೋಂಕಿತರ ಸಂಖ್ಯೆ 2 ಸಾವಿರ ಗಡಿ ದಾಟುತ್ತಿದ್ದು ಇಂದು ಶನಿವಾರ 2798 ಪ್ರಕರಣಗಳು ದಾಖಲಾಗಿದ್ದು, ರಾಜ್ಯ ಸರ್ಕಾರ ನಿಯಂತ್ರಣದ ವಿಷಯದಲ್ಲಿ ನಿರ್ದಿಷ್ಟ ರೂಪುರೇಷೆ, ಕಾರ್ಯಸೂಚಿ, ಸಮನ್ವಯತೆ ಹೊಂದಿಲ್ಲದಿರುವುಕ್ಕೆ ಇದು ಸಾಕ್ಷಿಯಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು
ಬೆಂಗಳೂರು ನಗರ- 1533
ದಕ್ಷಿಣ ಕನ್ನಡ-186
ಉಡುಪಿ-90
ಮೈಸೂರು-83
ತುಮಕೂರು-78
ಧಾರವಾಡ-77
ಯಾದಗಿರಿ-74
ದಾವಣಗೆರೆ-72
ಕಲಬುರಗಿ-65
ಬಳ್ಳಾರಿ-65
ಬೀದರ್-63
ವಿಜಯಪುರ-48
ಉತ್ತರ ಕನ್ನಡ-40
ಗದಗ-40
ಬಾಗಲಕೋಟೆ-37
ಹಾಸನ-34
ರಾಮನಗರ-30
ಶಿವಮೊಗ್ಗ-26
ಮಂಡ್ಯ-23
ಕೊಪ್ಪಳ-23
ಚಿಕ್ಕಬಳ್ಳಾಪುರ-20
ಚಾಮರಾಜನಗರ-17
ಹಾವೇರಿ-16
ರಾಯಚೂರು-14
ಕೋಲಾರ-12
ಕೊಡಗು-12
ಚಿತ್ರದುರ್ಗ-09
ಬೆಂಗಳೂರು ಗ್ರಾಮಾಂತರ-05
ಬೆಳಗಾವಿ-03
ಚಿಕ್ಕಮಗಳೂರು-03

Leave a Reply

Your email address will not be published.

You May Also Like

ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಕೆ.ಎಸ್. ಈಶ್ವರಪ್ಪ ಮುಖಭಂಗ

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಕೆ.ಎಸ್. ಈಶ್ವರಪ್ಪ ಮುಖಭಂಗ ಅನುಭವಿಸಿದ್ದಾರೆ.…

ಶೀಘ್ರವೇ ಅಂಗನವಾಡಿ ಬಾಗಿಲು ತೆರೆಯಲು ಸರ್ಕಾರ ನಿರ್ಧಾರ

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಬಂದ್ ಆಗಿದ್ದ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಶಾಸಕರೇ ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯನ್ನೊಮ್ಮೆ ನೋಡಿ!

ರೋಗಿಗಳ ಪಾಲಿಗೆ ಆಸ್ಪತ್ರೆಗಳೇ ಸಂಜೀವಿನಿ ಅಂತಾರೆ. ಆದರಲ್ಲೂ ಸರ್ಕಾರಿ ಆಸ್ಪತ್ರೆಗಳಂತೂ ಬಡರೋಗಿಗಳಿಗೆ ಅನುಕೂಲವಾಗಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಸರ್ಕಾರಿ ಆಸ್ಪತ್ರೆ ಗಬ್ಬು ನಾರುತ್ತಿದೆ.

ಸದ್ದು ಮಾಡುತ್ತಿದೆ ಶೀತಲ್ ಶೆಟ್ಟಿ ನಿರ್ದೇಶನದ ಚಿತ್ರ!

ಬೆಂಗಳೂರು : ವಿಂಡೋ ಸೀಟ್ ಗಾಗಿ ಶೀತಲ್ ಶೆಟ್ಟಿ ನಿರ್ದೇಶಕರ ಕ್ಯಾಪ್ ಹಾಕಿದ್ದು, ಸದ್ಯ ಅಧಿಕೃತ ಪ್ರಕಟಣೆ ಹೊರ ಬಂದಿದೆ.