ನವದೆಹಲಿ: ಮೂರು ದಿನದ ಹಿಂದಷ್ಟೇ ದೇಶದಲ್ಲಿ 7 ಲಕ್ಷ ದಾಟಿದ್ದ ಕೋರೊನಾ ಸೋಂಕಿತರ ಸಂಖ್ಯೆ ಈಗ 8 ಲಕ್ಚ ದಾಟಿದೆ. ಸದ್ಯ 8,22,603 ಸೋಂಕಿತರಿದ್ದು, 22,144 ಸಾವು ಸಂಭವಿಸಿವೆ.

6 ಲಕ್ಷದಿಂದ 7 ಲಕ್ಷ ತಲುಪಲು 4 ದಿನ ತಗುಲಿದ್ದರೆ, 7ರಿಂದ 8 ಲಕ್ಷ ತಲುಪಲು ಮೂರೇ ದಿನ ಸಾಕಾಯ್ತು.

ಈ ಅಂಕಿಅಂಶ ಗಮನಿಸಿ: ಪ್ರತಿ ಲಕ್ಷ ಕೇಸ್ ದಾಖಲಾಗುವ ಅವಧಿ ಕಡಿಮೆಯಾಗುತ್ತ ಹೋಗಿದೆ. ಸದ್ಯ ಮೂರೇ ದಿನಕ್ಕೆ 1 ಲಕ್ಷ ಹೊಸ ಕೇಸು ದಾಖಲಾಗಿವೆ. ಇದೇ ಟ್ರೆಂಡ್ ಮುಂದುವರೆದರೆ ಇನ್ನು 3 ದಿನದಲ್ಲಿ ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ಕೇಸ್ ದಾಖಲಾಗಲಿವೆ.

ಜನೇವರಿ 30: ದೇಶದಲ್ಲಿ ಮೊದಲ ಪಾಸಿಟಿವ್ ಪತ್ತೆ, ಚೀನಾದ ವುಹಾನ್ ಪ್ರಾಂತ್ಯದಲ್ಲಿ ಎಂ.ಬಿ.ಬಿ.ಎಸ್ ಓದುತ್ತಿದ್ದ ಕೇರಳದ ಯುವತಿಗೆ ಪಾಸಿಟಿವ್ ದೃಢಪಟ್ಟಿತ್ತು.

1 ಲಕ್ಷ ಕೇಸು: ಜನೇವರಿ 30ರ ನಂತರ 110 ದಿನದಲ್ಲಿ 1 ಲಕ್ಷ ಕೇಸುಗಳು.

ಜೂನ್ 13: ಹತ್ತೇ ದಿನದಲ್ಲಿ 3 ಲಕ್ಷ ತಲುಪಿತು.

ಜೂನ್ 21: 8 ದಿನದಲ್ಲಿ 4 ಲಕ್ಷ ತಲುಪಿತು.

ಜುಲೈ 2: 10 ದಿನದಲ್ಲಿ 2 ಲಕ್ಷ. 6 ಲಕ್ಷ ದಾಟಿತು.

ಜುಲೈ 7: 4 ದಿನದಲ್ಲಿ ಮತ್ತೆ 1 ಲಕ್ಷ. ಸೋಂಕಿತರ ಸಂಖ್ಯೆ 7 ಲಕ್ಷ ದಾಟಿತು.

ಜುಲೈ 10: ಮೂರೇ ದಿನದಲ್ಲಿ ಹೊಸ 1 ಲಕ್ಷ ಪಾಸಿಟಿವ್. 8 ಲಕ್ಷ ದಾಟಿದ ಸೋಂಕಿತರ ಸಂಖ್ಯೆ.

Leave a Reply

Your email address will not be published.

You May Also Like

ಪಾಸ್ ಬುಕ್ ಮೇಲಿದ್ದ ಕನ್ನಡ ಮಾಯವಾಗಿದ್ದೇಕೆ?

ಬೆಂಗಳೂರು: ಇಲ್ಲಿನ ಚಾಮರಾಜ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.ಈ ಹಿಂದೆ…

ಕೊರೊನಾ ಪಾಸಿಟಿವ್ – ಜೆಡಿಎಸ್ ನಾಯಕನ ಹೈಡ್ರಾಮಾ!

ಮಂಡ್ಯ : ಜೆಡಿಎಸ್ ಮುಖಂಡರೊಬ್ಬರಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು, ಆಸ್ಪತ್ರೆಗೆ ಹೋಗಲು ಕಿರಿಕ್ ಮಾಡಿರುವ ಘಟನೆ…

ಯಪ್ಪಾ..!, ಗಂಡ ತನ್ನ ಜೊತಿ ಜಗಳಾ ಆಡಂಗಿಲ್ಲಾ ಅಂತ ಡಿವೋರ್ಸ್ ಕೇಳ್ಯಾಳಂತ!

ಗಂಡ-ಹೆಂಡರ ಜಗಳ ಗಂಧ ತೀಡಿದಂಗ ಅಂತಾರ. ಅಷ್ಟ ಯಾಕ, ಗಂಡ-ಹೆಂಡರ ಜಗಳ ಉಂಡು ಮಲಗೋ ತನಕ ಅಂತಾನೂ ಅಂತಾರ. ಆದ್ರ ಗಂಡ ತನ್ನ ಜೊತಿಗೆ ಜಗಳಾನ ಆಡವಲ್ಲಾ, ತನಗ ಭಾಳ್ ಪ್ರೀತಿ ಮಾಡ್ತಾನಾ ಅಂತ ಹೆಣ್ಮಗಳ ಒಬ್ಬಾಕಿ ಕೋರ್ಟ್ ಕಟ್ಟಿ ಹತ್ತಿದ ಕತಿ ಇದು..