ಗದಗ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜುಲೈ 9ರಂದು ಆರು ನಿರ್ಭಂಧಿತ ಪ್ರದೇಶಗಳನ್ನು ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಘೋಷಿಸಿದ್ದಾರೆ.

ಗದಗ ಬೆಟಗೇರಿ ವಾರ್ಡ ಸಂಖ್ಯೆ 16 ಡಿ.ಸಿ. ಮಿಲ್ ಪ್ರತಿಬಂಧಿತ ಪ್ರದೇಶವಾಗಿ ಮತ್ತು ಅದರ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ ಗದಗ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್.ಕೆಳದಿಮಠ ಇವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಗದಗ ಬೆಟಗೇರಿ ವಾರ್ಡ ಸಂಖ್ಯೆ 29 ರಾಜೀವಗಾಂಧಿ ನಗರ ಪ್ರತಿಬಂಧಿತ ಪ್ರದೇಶವಾಗಿ ಮತ್ತು ಅದರ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ ಗದಗ ಡೈಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಎಸ್.ಆರ್. ಹೂಗಾರ ಇವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಗದಗ ಬೆಟಗೇರಿ ವಾರ್ಡ ಸಂಖ್ಯೆ 2 ಎಸ್.ಎಂ.ಕೃಷ್ಣಾ ನಗರ ಎಕ್ಸಟೆನ್ ಶನ್ ಪ್ರತಿಬಂಧಿತ ಪ್ರದೇಶವಾಗಿ ಮತ್ತು ಆ ಪ್ರದೇಶದ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಮನ್ಸೂರ ಅಲಿ ಇವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಗದಗ ಬೆಟಗೇರಿ ವಾರ್ಡ ಸಂಖ್ಯೆ 6 ಶರಣಬಸವೇಶ್ವರ ನಗರ ಪ್ರತಿಬಂಧಿತ ಪ್ರದೇಶವಾಗಿ ಮತ್ತು ಅದರ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ ಗದಗ ಡೈಟ್ ಸಂಸ್ಥೆಯ ಉಪನ್ಯಾಸಕ ಶರಣು  ಗೊಗೇರಿ ಇವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಲಕ್ಷ್ಮೇಶ್ವರ ಪುರಸಭೆಯ ವಾರ್ಡ ಸಂಖ್ಯೆ 5ರ ದೂದನಾನಾ ದರ್ಗಾದ ಸಮೀಪ ಪ್ರತಿಬಂಧಿತ ಪ್ರದೇಶವಾಗಿ ಮತ್ತು ಅದರ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ ಲಕ್ಷ್ಮೇಶ್ವರ ಪುರಸಭೆ ಮುಖ್ಯಾಧಿಕಾರಿ ರಾಮನಗೌಡ ಪಾಟೀಲ ಇವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಮುಳಗುಂದ ಪಟ್ಟಣ ಪಂಚಾಯತ್ ವಾರ್ಡ ಸಂಖ್ಯೆ 11 ಹಳೇವಾಡಾ ಓಣಿ ಪ್ರತಿಬಂಧಿತ ಪ್ರದೇಶವಾಗಿ ಮತ್ತು ಅದರ ಸುತ್ತಲಿನ 5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ ಮುಳಗುಂದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಉಮಾ ಯತ್ತಿ ಇವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

 ಕಂಟೈನ್‌ಮೆಂಟ್, ಬಫರ್ ಝೋನ್ ಮತ್ತು ಕ್ಲಸ್ಟರ್‌ಗಳಲ್ಲಿ ಕೊರೋನಾ ವೈರಸ್ ನಿಯಂತ್ರಿಸುವ ಕುರಿತು ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಹಾಗೂ ಇಲಾಖೆಗಳಿಗೆ ಸರ್ಕಾರದ ಮಾರ್ಗಸೂಚಿಗಳನ್ವಯ ಜಿಲ್ಲಾಧಿಕಾರಿಗಳು ಕರ್ತವ್ಯಗಳನ್ನು ನಿಗದಿಪಡಿಸಿರುತ್ತಾರೆ. ಈ ಆದೇಶವನ್ನು ಉಲ್ಲಂಘಿಸಿದವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ- 2005 ರನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ನಿರ್ದೇಶಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಸಂವಿಧಾನಕ್ಕೆ ತೆಲೆ ಬಾಗಿ ನಡೆದರೆ ಬದುಕು ಪಾವನ ಮಕ್ಕಳು ಶೈಕ್ಷಣಿಕ ಪ್ರಭಲತೆ ಸಾಧಿಸಬೇಕು – ಜಿ.ಎಂ.ಕೋಟ್ಯಾಳ

ಆಲಮಟ್ಟಿ : ಸರಕಾರ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಾಗು ಮಕ್ಕಳ ಕಲಿಕೆಯ ಪ್ರಗತಿಗಾಗಿ ನಾನಾ ಬಗೆಯ…

ಆಲಮಟ್ಟಿ ಬಸ್ ನಿಲ್ದಾಣಕ್ಕೆ ಸದನದಲ್ಲಿ ಆಗ್ರಹ

ಉತ್ತರಪ್ರಭ ಸುದ್ದಿ ಆಲಮಟ್ಟಿ: ಕಳೆದ ಐದು ವರ್ಷದಿಂದ ಬಸ್ ನಿಲ್ದಾಣ ನಿಮಾ೯ಣಕ್ಕಾಗಿ ಜನಪ್ರತಿನಿಧಿ ಶಾಸಕರೊಬ್ಬರು ನಿರಂತರ…

ಪಿಯುಸಿ ಸರ್ಕಾರಿ ಕಾಲೇಜುಗಳು ‘ಫೇಲ್’: ದೆಹಲಿ ಸರ್ಕಾರಿ ಶಾಲೆಗಳ ಮೇಲುಗೈ

ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡಿದರೆ ಏನಾಗಬಹುದು ಎಂಬುದನ್ನು

ಲಕ್ಕುಂಡಿ ಗ್ರಾಮ ಪಂಚಾಯತಿಗೆ ಆಡಳಿತಾಧಿಕಾರಿ ಯಾರು..?

ಗದಗ: ಅವಧಿ ಮುಗಿದ್ರು ಚೇರಿನ ವ್ಯಾಮೋಹ ಮುಗಿಲ್ಲವೇ..? ಆಡಳಿತಾಧಿಕಾರಿ ನೇಮಕವಾದ್ರು, ಅಧ್ಯಕ್ಷ ಪದವಿಯ ಅವಧಿ ಮುಗಿದಿರೋದು…