ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದ ಕರಿಯನ ಓಣಿ ನಿವಾಸಿ 24 ವರ್ಷದ ಮಹಿಳೆ (ಪಿ-28299) ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ.

ಗದಗ-ಬೆಟಗೇರಿ ನಗರದ ಕುರಟ್ಟಿಪೇಟ ನಿವಾಸಿ 40 ವರ್ಷದ ಪುರುಷ (ಪಿ-28300) ಇವರಿಗೆ ಸೋಂಕು ದೃಡಪಟ್ಟಿರುತ್ತದೆ. ಕೆಮ್ಮು ಹಾಗೂ ಜ್ವರದ ಲಕ್ಷಣ ಕಂಡುಬಂದ ಹಿನ್ನಲೆಯಲ್ಲಿ ಇವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿತ್ತು. (ಆಯ್.ಎಲ್.ಐ.)

ಹರ್ತಿ ಗ್ರಾಮದ ನಿವಾಸಿ 22 ವರ್ಷದ ಮಹಿಳೆ (ಪಿ-18287) ಸೋಂಕಿತರ ಸಂಪರ್ಕದಿಂದಾಗಿ ಗದಗ-ಬೆಟಗೇರಿ ನಗರದ ಜವಳಗಲ್ಲಿ ನಿವಾಸಿ 23 ವರ್ಷದ ಮಹಿಳೆ (ಪಿ-28301) ಹಾಗೂ ಎ.ಪಿ.ಎಂ.ಸಿ. ಹಿಂದುಗಡೆ ಹಮಾಲರ ಓಣಿ ನಿವಾಸಿ 35 ವರ್ಷದ ಮಹಿಳೆ (ಪಿ-28302) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.

ತೆಲಂಗಾಣ ರಾಜ್ಯದಿಂದ ಜಿಲ್ಲೆಗೆ ಆಗಮಿಸಿದ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಗೌರಿ ಓಣಿ ನಿವಾಸಿ 32 ವರ್ಷದ ಪುರುಷ (ಪಿ-28303) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.

ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಪಿ.ಎಸ್.ಐ ನೇಮಕಾತಿ ವಯೋಮಿತಿ ಹೆಚ್ಚಳ: ಗೃಹ ಸಚಿವ ಬೊಮ್ಮಾಯಿ

ಪಿ.ಎಸ್.ಐ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ವಯೋಮಿತಿಯನ್ನು ಹೆಚ್ಚಿಸಲಾಗಿದೆ. ಈ ಕುರಿತು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಗದಗನಲ್ಲಿ ಇಂದು 15 ಜನರಿಗೆ ಕೊರೋನಾ ಪಾಸಿಟಿವ್: 35 ಕ್ಕೆ ಸೋಂಕಿತರ ಸಂಖ್ಯೆ ಏರಿಕೆ

ಗದಗ: ಕೊರೋನಾಗೆ ಬೆಚ್ಚಿದ ಗದಗ ಜಿಲ್ಲೆಯ ಜನ. ಇಂದು 15 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಈ…

ಚನ್ನೈನಲ್ಲಿ ಕೊರೋನಾ ಕಾಟ

ತಮಿಳುನಾಡಿನಲ್ಲಿ ಕೊರೋನಾ ವೈರಸ್ ಹಾವಳಿ ಹೆಚ್ಚಾಗುತ್ತಿದೆ. ಒಂದೇ ದಿನ ಬರೋಬ್ಬರಿ 771 ಹೊಸ ಪ್ರಕರಣಗಳು ದಾಖಲಾಗಿವೆ. ಈ ನಿಟ್ಟಿನಲ್ಲಿ ಸೋಂಕಿತರ ಸಂಖ್ಯೆ 4829ಕ್ಕೆ ಏರಿಕೆಯಾಗಿದೆ.

ಕುರಿಗಾಹಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ

ರಾಜ್ಯದಲ್ಲಿ ಕುರಿಗಾಹಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ತಾಲೂಕು ಕುರುಬರ ಸಂಘದ ವತಿಯಿಂದ ಗುರುವಾರ ಸ್ಥಳೀಯ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.