ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದ ಕರಿಯನ ಓಣಿ ನಿವಾಸಿ 24 ವರ್ಷದ ಮಹಿಳೆ (ಪಿ-28299) ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ.

ಗದಗ-ಬೆಟಗೇರಿ ನಗರದ ಕುರಟ್ಟಿಪೇಟ ನಿವಾಸಿ 40 ವರ್ಷದ ಪುರುಷ (ಪಿ-28300) ಇವರಿಗೆ ಸೋಂಕು ದೃಡಪಟ್ಟಿರುತ್ತದೆ. ಕೆಮ್ಮು ಹಾಗೂ ಜ್ವರದ ಲಕ್ಷಣ ಕಂಡುಬಂದ ಹಿನ್ನಲೆಯಲ್ಲಿ ಇವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿತ್ತು. (ಆಯ್.ಎಲ್.ಐ.)

ಹರ್ತಿ ಗ್ರಾಮದ ನಿವಾಸಿ 22 ವರ್ಷದ ಮಹಿಳೆ (ಪಿ-18287) ಸೋಂಕಿತರ ಸಂಪರ್ಕದಿಂದಾಗಿ ಗದಗ-ಬೆಟಗೇರಿ ನಗರದ ಜವಳಗಲ್ಲಿ ನಿವಾಸಿ 23 ವರ್ಷದ ಮಹಿಳೆ (ಪಿ-28301) ಹಾಗೂ ಎ.ಪಿ.ಎಂ.ಸಿ. ಹಿಂದುಗಡೆ ಹಮಾಲರ ಓಣಿ ನಿವಾಸಿ 35 ವರ್ಷದ ಮಹಿಳೆ (ಪಿ-28302) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.

ತೆಲಂಗಾಣ ರಾಜ್ಯದಿಂದ ಜಿಲ್ಲೆಗೆ ಆಗಮಿಸಿದ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಗೌರಿ ಓಣಿ ನಿವಾಸಿ 32 ವರ್ಷದ ಪುರುಷ (ಪಿ-28303) ಇವರಿಗೆ ಸೋಂಕು ದೃಢಪಟ್ಟಿರುತ್ತದೆ.

ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಮಹಾಂತೇಶ ಜೀವಣ್ಣವರ ಹೇಳಿಕೆ ಪ್ರಜಾಪ್ರಭುತ್ವ ಬಲಗೊಳಿಸಲು ಯುವಕರು ಕಡ್ಡಾಯವಾಗಿ ಮತದಾನ ಮಾಡಬೇಕು

ಪ್ರಜಾ ಪ್ರಭುತ್ವವನ್ನು ಬಲ ಪಡಿಸಲು ಯುವ ಸಮೂಹ ಕಡ್ಡಾಯವಾಗಿ ಚುನಾವಣಾ ಪ್ರಕ್ರೀಯೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರಜಾಪ್ರಭುತ್ವದ ಗೌರವ ಹೆಚ್ಚಿಸಬೇಕು ಎಂದು ಪ್ರಾಧ್ಯಾಪಕ ಮಹಾಂತೇಶ ಜೀವಣ್ಣವರ ಹೇಳಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತರಿಗೆ ಮಾರಕ: ಪ್ರತಿಪಕ್ಷಗಳ ವಿರೋಧ

ಬೆಂಗಳೂರು: ರಾಜ್ಯ ಸರ್ಕಾರ ಇದೀಗ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ಆದರೆ ಇದಕ್ಕೆ ರೈತಪರ…

ಶಿರಹಟ್ಟಿ ತಾಲೂಕ ದೇವಿಹಾಳ ತಾಂಡಾ ಬಗರಹುಕುಮ್ ಸಾಗುವಳಿ; ಸದನದಲ್ಲಿ ಚರ್ಚಿಸಲು ವಿರೋಧ ಪಕ್ಷದ ನಾಯಕರಿಗೆ – ರವಿಕಾಂತ ಅಂಗಡಿ ಒತ್ತಾಯ

ಉತ್ತರಪ್ರಭ ಸುದ್ದಿಗದಗ: ಶಿರಹಟ್ಟಿ ತಾಲೂಕ ದೇವಿಹಾಳ ತಾಂಡಾದ ಬಗರ ಹುಕುಮ್ ಸಾಗುವಳಿದಾರರಿಗೆ ಅರಣ್ಯ ಇಲಾಖೆಯಿಂದ ಸಾಗುವಳಿ…

ನಡಕಟ್ಟಿನ ಕೂರಿಗೆ ಸಂಶೋಧನೆಗೆ ಪದ್ಮಶ್ರೀ ಪ್ರಶಸ್ತಿಯ ಗರಿ

ಧಾರವಾಡ: ಬಿತ್ತುವ ಕೂರಿಗೆ ತಜ್ಞ ಅಬ್ದುಲ್‌ ಖಾದರ್ ನಡಕಟ್ಟಿನ ಗೆ ಪದ್ಮಶ್ರೀ ಪ್ರಶಸ್ತಿಯ ಗರಿ ಹೌದು…