ಬೆಂಗಳೂರು: ಹಲವು ಮಂದಿ ತಜ್ಞರು ಕೇವಲ ಆನ್‌ಲೈನ್ ಶಿಕ್ಷಣದಿಂದ ಮಕ್ಕಳ ಮನೋವಿಕಾಸ ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ನಡೆಯುತ್ತಿರುವ ಆನ್ಲೈನ್ ತರಗತಿ ಮತ್ತು ಅವ್ಯವಹಾರ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಖರ್ಚು ವೆಚ್ಚಗಳ ಸೂಕ್ತ ಮಾಹಿತಿ ಸರ್ಕಾರದ ಬಳಿಯಿದ್ದರೆ ಅಧಿಕಾರಿಗಳ ಜೊತೆ ಅದನ್ನು ಕಳಿಸಿಕೊಡಲಿ, ನಾನೂ ಒಮ್ಮೆ ನೋಡುತ್ತೇನೆ. ತಾರ್ತಿಕ ಅಂತ್ಯ ಕಾಣುವವರೆಗೂ ಈ ವಿಚಾರದಿಂದ ಹಿಂದೆ ಸರಿಯುವುದಿಲ್ಲ. ಜನರ ಹಣ, ಜನರಿಗೆ ಲೆಕ್ಕ ಕೊಡಬೇಕು. ಇದನ್ನು ಕೇಳುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.

ಹಳ್ಳಿಗಳಿಂದ ಬಂದ ಜನರು ಬೆಂಗಳೂರಿನಲ್ಲಿ ಉಳಿದುಕೊಳ್ಳುವಂತಹ ವಾತಾವರಣವನ್ನು ಸರ್ಕಾರ ಕಲ್ಪಿಸಬೇಕಿತ್ತು, ಆಗ ಅವರು ಮರಳಿ ಹಳ್ಳಿಕಡೆ ಮುಖ ಮಾಡುವಂತಹಾ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ. ಅವರಿಗೆ ವಸತಿ, ಉದ್ಯೋಗ ನೀಡುವ ಜೊತೆಗೆ ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿರುವುದೇ ಜನ ಹಳ್ಳಿಗಳಿಗೆ ಮರಳಲು ಕಾರಣ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಲಾಕ್‌ಡೌನ್ ನಂತರವೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಜಾಸ್ತಿಯಾಗಿದೆ. ಹಾಗಾದರೆ ಲಾಕ್‌ಡೌನ್‌ನಿಂದಾದ ಪ್ರಯೋಜನವೇನು? ಈಗ ನಿಜವಾಗಿ ಲಾಕ್‌ಡೌನ್ ಅಗತ್ಯವಿದೆ. ಸರ್ಕಾರ ಕೇವಲ ಆರ್ಥಿಕತೆಗೆ ಮಹತ್ವ ನೀಡುತ್ತಿದೆ, ಜನರ ಜೀವಗಳಿಗೆ ಬೆಲೆ ಇಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ನಿರುದ್ಯೋಗಿಗಳಿಗೆ ಭತ್ಯೆ ನೀಡಲು ಒತ್ತಾಯಿಸುತ್ತೇನೆ: ಕೆ.ಆರ್.ಎಸ್ ಅಬ್ಯರ್ಥಿ ಕಾಂಬಳೆ

ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ದೊರಕುವವರೆಗೆ ನಿರುದ್ಯೋಗ ಭತ್ಯೆ ನೀಡಲು ನಾನು ಒತ್ತಾಯಿಸುತ್ತೇನೆ ಎಂದು ಪಶ್ಚಿಮ ಪದವಿಧರ ಕ್ಷೇತ್ರದ ಕೆ.ಆರ್.ಎಸ್ ಅಬ್ಯರ್ಥಿ ಶಿವರಾಜ್ ಕಾಂಬಳೆ ಹೇಳಿದರು.

ವಿಶ್ವ ಜಾನಪದ ದಿನ ಆಚರಣೆ: ಜಾನಪದ ಸಂರಕ್ಷಣೆ ಹಾಗೂ ಸಂವರ್ಧನೆ ಅಗತ್ಯ.

ಬೀದರ: ಜಾನಪದ ಜನ ಕೇಂದ್ರಿತ ಮೌಲ್ಯಗಳ ನಿದಿಯಾಗಿದ್ದು ಇದನ್ನು ಬಗೆದಷ್ಟು ದೇಶಿಯತೆ ಅನಾವರಣಗೊಳ್ಳುವುದು ಎಂದು ಕರ್ನಾಟಕ…

ರಾಜ್ಯದಲ್ಲಿಂದು 1272 ಕೊರೊನಾ ಪಾಸಿಟಿವ್! : ಒಟ್ಟು ಸೋಂಕಿತರ ಸಂಖ್ಯೆ 16514ಕ್ಕೆ ಏರಿಕೆ!

ರಾಜ್ಯದಲ್ಲಿಂದು 1272 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 16514 ಕ್ಕೆ ಏರಿಕೆಯಾದಂತಾಗಿದೆ.

ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ನಿನ್ನೆ ಪತ್ತೆಯಾದ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ?

ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಆತಂಕ ಮೂಡಿಸುತ್ತಿದೆ. ಕಳೆದ 24 ಭಾರತ ದೇಶದಲ್ಲಿ ಸೋಂಕಿತರು ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ಕೊರೊನಾ ವಾರಿಯರ್ಸ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಇದರಿಂದ ತಿಳಿದು ಬರುತ್ತಿದೆ. ಸದ್ಯ ದೇಶದಲ್ಲಿ 9,07,883 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 67,57,132ಕ್ಕೆ ಏರಿಕೆ ಕಂಡಿದೆ. ದೇಶದಲ್ಲಿ ಇದುವರೆಗೂ 8,22,71,657 ಜನ ಕೊರೊನಾ ಟೆಸ್ಟ್ ಗೆ ಒಳಪಟ್ಟಿದ್ದಾರೆ.ಗಂಟೆಗಳಲ್ಲಿ 72,049 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.