ಬೆಂಗಳೂರು: ಈಗಾಗಲೇ ಕೇಂದ್ರ ಸರ್ಕಾರ ಲಾಕ್ ಡೌನ್ 4 ರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೆ ಇಂದು ಸಂಪುಟ ಸಭೆ ಕರೆದ ಸಿಎಂ ಹಲವು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದಾಗಿ ನಾಳೆಯಿಂದ ರಾಜ್ಯದಲ್ಲಿ ಏನೆಲ್ಲ ಆರಂಭವಾಗಲಿವೆ ಇನ್ನುವ ಹೈಲೇಟ್ಸ್ ಈ ಕೆಳಗೆ ನೀಡಲಾಗಿದೆ.

ನಾಳೆಯಿಂದ ರಾಜ್ಯದಲ್ಲಿ ಏನಿರುತ್ತೆ? – ಏನಿರಲ್ಲ..?

  • ನಾಳೆಯಿಂದ ರಾಜ್ಯದೊಳಗೆ ಬಸ್ ಸಂಚಾರಕ್ಕೆ ಅವಕಾಶ
  • ಅಂತಾರಾಜ್ಯ ಬಸ್ ಓಡಾಟಕ್ಕೆ ಅವಕಾಶ ಇಲ್ಲ
  • ಬಿಎಂಟಿಸಿ ಬಸ್ ಓಡಾಟದ ಬಗ್ಗೆ ಇನ್ನು ಗೊಂದಲ
  • ಬಿಎಂಟಿಸಿ ಬಸ್ ಸಂಚಾರದ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತವಾಗಿಲ್ಲ
  • ಮೇ 31 ರ ವರೆಗೆ ಲಾಕ್ ಡೌನ್ ಮುಂದುವರಿಕೆ
  • ಕಂಟೈನ್ ಮೆಂಟ್ ಝೋನ್ ನಲ್ಲಿ ಕಟ್ಟುನಿಟ್ಟಿನ ಕ್ರಮ
  • ಖಾಸಗಿ ಬಸ್ ಗಳ ಓಡಾಟಕ್ಕೂ ಅವಕಾಶ
  • ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ
  • ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ
  • ಪೊಲೀಸರು ಹಾಗೂ ಸಾರಿಗೆ ಸಿಬ್ಬಂದಿಯಿಂದ ಮಾಸ್ಕ್ ಧರಿಸದವರಿಗೆ ದಂಡ
  • ಆಟೋ, ಟ್ಯಾಕ್ಸಿ ಓಡಾಟಕ್ಕೆ ಅವಕಾಶ
  • ಆಟೋಗಳಲ್ಲಿ ಚಾಲಕರು ಬಿಟ್ಟು ಇಬ್ಬರ ಪ್ರಯಾಣಕ್ಕೆ ಮಾತ್ರ ಅವಕಾಶ
  • ಮಾಲ್, ಸಿನಿಮಾ ಬಿಟ್ಟು ಎಲ್ಲಾ ಚಟುವಟಿಕೆ ಅವಕಾಶ
  • ರಾಜ್ಯದೊಳಗೆ ರೈಲು ಓಡಾಟಕ್ಕೆ ಅವಕಾಶ
  • ಪ್ರತಿ ಭಾನುವಾರ ಕಂಪ್ಲೀಟ್ ಲಾಕ್ ಡೌನ್
  • ಪಾರ್ಕ್ ಗಳಲ್ಲಿ ವಾಯುವಿಹಾರಕ್ಕೆ ಅವಕಾಶ
  • ಬೆಳಗ್ಗೆ 7 ರಿಂದ 9, ಸಂಜೆ 5 ರಿಂದ 7 ಪಾರ್ಕ್ ವಾಯುವಿಹಾರಕ್ಕೆ ಅವಕಾಶ
  • ಲಾಲ್ ಬಾಗ್, ಕಬ್ಬನ್ ಪಾರ್ಕ್ ಸೇರಿ ಎಲ್ಲಾ ರೀತಿಯ ಪಾರ್ಕ್ ಗಳು ಓಪನ್
  • ಬಸ್ ಪ್ರಯಾಣ ದರ ಹೆಚ್ಚಳ ಇಲ್ಲ
  • ಮಹಾರಾಷ್ಟ್ರ, ಕೇರಳ, ಗುಜರಾತ್, ತಮಿಳುನಾಡಿನಿಂದ ಈಗಾಗಲೇ ಟಿಕೆಟ್ ಬುಕ್ ಆಗಿರುವವರು ಬರಬಹುದು..
  • ರಾತ್ರಿ 7 ರಿಂದ ಬೆಳಗ್ಗೆ 7 ರ ವರೆಗೆ ಸಂಪೂರ್ಣ ಬಂದ್
  • ಕ್ರೀಡಾ ಚಟುವಟಿಕೆಗೆ ಅವಕಾಶ
  • ಬಸ್ ಆಟೋಗಳು ಕಡ್ಡಾಯ ನಿಯಮಗಳನ್ನು ಪಾಲನೆ ಮಾಡಬೇಕು
  • ಜಿಮ್ ಗಳಿಗಿಲ್ಲ ಅನುಮತಿ
  • ವಿವಾಹ ಸಮಾರಂಭಕ್ಕೆ ಷರತ್ತು ಬದ್ಧ ಅನುಮತಿ
  • ಕಂಟೈನ್ ಮೆಂಟ್ ಝೋನ್ ನಲ್ಲಿ ನಿಯಮ ಉಲ್ಲಂಘನೆ ಮಾಡಿದರೆ ಕ್ರಿಮಿನಲ್ ಕೇಸ್
  • ಬೀದಿ ಬದಿ ವ್ಯಾಪಾರಕ್ಕೆ ಅವಕಾಶ
  • ಹೊರ ರಾಜ್ಯಗಳಿಗೆ ಹೋಗುವವರಿಗೆ ಯಾವುದೇ ನಿರ್ಬಂಧ ಇಲ್ಲ
  • ಹೊರ ರಾಜ್ಯದಿಂದ ಬಂದವರಿಗೆ 14 ದಿನ ಸಾಂಸ್ಥಿಕ ಕೊರಂಟೈನ್ ಕಡ್ಡಾಯ
  • ಮೆಟ್ರೋ ಸಂಚಾರ ಮೇ.31 ರವರೆಗೆ ಇರೋದಿಲ್ಲ
  • ಭಾನುವಾರ ಮದ್ಯ ಮಾರಾಟ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೂ ಬ್ರೇಕ್
  • ಆಟೋ, ಓಲಾ, ಊಬರ್, ಟ್ಯಾಕ್ಸಿಗಳು ರಾಜ್ಯಾದ್ಯಂತ ಸಂಚಾರ ಮಾಡಬಹುದು
  • ಡೆಂಟಲ್ ಕ್ಲಿನಿಕ್ ಆರಂಭಕ್ಕೂ ಅನುಮತಿ ನೀಡಿದ್ದೇವೆ
  • ಎಲ್ಲಾ ಜಿಲ್ಲೆಗಳಿಂದ ಬೆಂಗಳೂರಿಗೆ ಬರೋದಕ್ಕೆ ಬಸ್ ವ್ಯವಸ್ಥೆ
Leave a Reply

Your email address will not be published. Required fields are marked *

You May Also Like

ಕಂಡಕ್ಟರ್, ಡ್ರೈವರ್ ಗಳನ್ನು ಟಾರ್ಗೇಟ್ ಮಾಡಿದ್ರಾ ಡಿಪೋ ಮ್ಯಾನೇಜರ್..?

ಇದೀಗ ಡಿಪೋ ಮ್ಯಾನೇಜರ್ ಬಸಪ್ಪ ಪೂಜಾರ್ ಅವರ ವರ್ತನೆ ಮತ್ತೊಂದು ಯಡವಟ್ಟಿಗೆ ಕಾರಣವಾಗಿದೆ. ನಿನ್ನೆ ಘಟನೆ ನಂತರ ಇದೀಗ ಸಿಬ್ಬಂಧಿಗಳನ್ನು ಡಿಪೋ ಮ್ಯಾನೇಜರ್ ಟಾರ್ಗೆಟ್ ಮಾಡಿದ್ದಾರೆಯೇ? ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಗದಗ ಜಿಲ್ಲೆಯಲ್ಲಿ ಪಾಪುಗಳನ್ನು ಬಿಡದ ಪಾಪಿ ಕೊರೊನಾ..!: ಗದಗ, ನರಗುಂದ, ರೋಣ ತಾಲೂಕಿನಲ್ಲಿ ಸೋಂಕು ದೃಢ

ಗದಗ: ಜಿಲ್ಲೆಯ ನರಗುಂದ ಗಾಡಿ ಓಣಿ ನಿವಾಸಿ 39 ವರ್ಷದ ಪುರುಷ (ಪಿ-15320) ಸೋಂಕಿತರ ಸಂಪರ್ಕದಿಂದಾಗಿ…

ವಲಸೆ ಕಾರ್ಮಿಕರಿಗೆ ವಸತಿ ಸೌಕರ್ಯ: 2 ಎಕರೆ ನಿವೇಶನ ವ್ಯವಸ್ಥೆಗೆ ಚಿಂತನೆ

ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಉದ್ಯೋಗ ಅರಸಿ ಮಂಗಳೂರಿಗೆ ಆಗಮಿಸುವ ಕಾರ್ಮಿಕರಿಗೆ ಸೂಕ್ತ ವಸತಿ ವ್ಯವಸ್ಥೆಯನ್ನು ಸರಕಾರದ ವತಿಯಿಂದಲೇ ಮಾಡಿ ಕೊಡಲು ನಿರ್ಧರಿಸಲಾಗಿದ್ದು, ಯೋಜನೆ ಸಿದ್ಧಪಡಿಸಲಾಗುತ್ತಿದೆ.