ಗದಗ: ಹೆಸರು ಹಾಗೂ ಗೋವಿನ ಜೋಳ ಬಿತ್ತನೆಯಾಗಿದ್ದು, ಈಗಾಗಲೇ ಹೆಸರು ಹೂವಾಡುವ ಹಂತ ಹಾಗೂ ಗೋವಿನ ಜೋಳ ಸುಮಾರು 30 ರಿಂದ 40 ದಿವಸದ ಬೆಳೆ ಇರುತ್ತವೆ. ಹೆಸರು ಬೆಳೆಯಲ್ಲಿ ವಿವಿದೆಡೆ ಹಳದಿ ರೋಗ ಮತ್ತು ಗೋವಿನ ಜೋಳದಲ್ಲಿ ಸೈನಿಕ ಹುಳುವಿನ ಬಾಧೇ ಹೆಚ್ಚಿದೆ. ಗದಗ ತಾಲೂಕಿನ ಉಪ ಕೃಷಿ ನಿರ್ದೇಶಕ ವೀರೇಶ ಹುನಗುಂದ ನೇತೃತ್ವದ ಕೃಷಿ ಇಲಾಖೆಯ ಅಧಿಕಾರಿಗಳ ತಂಡ ಅಡವಿ ಸೋಮಾಪೂರ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿತು. ಹೆಸರು ಬೆಳೆಯಲ್ಲಿ ಹಳದಿ ರೋಗ ಹಾಗೂ ಮೆಕ್ಕೆ ಜೋಳದಲ್ಲಿ ಸೈನಿಕ ಹುಳುವಿನ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರು.


ಮೆಕ್ಕೆ ಜೋಳ ಉತ್ತಮವಾಗಿ ಬೆಳೆಯಲು, ಲದ್ದಿ ಹುಳು ಹಾಗೂ ಇತರೇ ಕೀಟಗಳ ದಾಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ಸೂಕ್ತ ನಿರ್ವಹಣಾ ಕ್ರಮಗಳ ಅಗತ್ಯವಿದೆ. ಕೀಟನಾಶಕಗಳಾದ ಕ್ಲೊರ‍್ಯಾಂಟ್ರಿನಿಲಿಪ್ರೋಲ್ 18.5 ಇ.ಸಿ.ಯನ್ನು 0.4 ಮಿ. ಲೀ. ಅಥವಾ ಲ್ಯಾಮ್ಡಾಸೈಹ್ಯಾಲೋಥ್ರೀನ್ 49 ಇ.ಸಿ.ಯನ್ನು 1 ಮಿ.ಲೀ. ಅಥವಾ ಎಮಾಮೆಕ್ಟಿನ್ ಬೆಂಜೋಯೇಟ್‌ಎಸ್.ಜಿ. ಯನ್ನು 0.5 ಮಿ.ಲೀ. ಅಥವಾ ಸ್ಪೆನೋಸ್ಯಾಡ್ 45 ಎಸ್.ಸಿ.ಯನ್ನು 0.2 ಮಿ.ಲೀ. ಅಥವಾ ಇಂಡಾಕ್ಸಿಕಾರ್ಬ್ 14.5 ಎಸ್.ಸಿ.ಯನ್ನು 0.5 ಮಿ.ಲೀ. ಅಥವಾ ಸ್ಪನೆಟ್ರಾಮ್ 11.7 ಎಸ್.ಸಿ.ಯನ್ನು 0.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯಲ್ಲಿ ಬೀಳುವಂತೆ ಸಿಂಪರಣೆ ಮಾಡಬೇಕು
ಹೆಸರು ಬೆಳೆಯಲ್ಲಿ ಕಂಡು ಬಂದ ಹಳದಿ ರೋಗ ಸಾಂಕ್ರಾಮಿಕವಾಗಿ ಹರಡುವ ಮುನ್ನವೇ ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಮಳೆ ಕೊರತೆ ಹಾಗೂ ಮೋಡ ಮುಸುಕಿದ ವಾತಾವಣಯಿಂದಾಗಿ ಹೆಸರು ಬೆಳೆಗೆ ಹಳದಿ ರೋಗ ಹರಡುವ ಸಾಧ್ಯತೆ ಇರುತ್ತದೆ. ಒಂದು ಬಾರಿ ಹಳದಿ ರೋಗ ಕಾಣಿಸಿಕೊಂಡರೇ ನಿಯಂತ್ರಣ ಬರುವುದು ಕಷ್ಠ ಸಾಧ್ಯ.
“ಪ್ರತಿ ಲೀಟರ್ ನೀರಿಗೆ 0.25 ಮಿ.ಲೀ. ಇಮಿಡಾಕ್ಲೋಪ್ರಿಡ್ ಸೇರಿಸಿ ಬೆಳೆಗೆ ಸಿಂಪಡಿಸಬೇಕು. ರೋಗಕ್ಕೆ ತುತ್ತಾದ ಸಸಿಗಳನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ ಕಿತ್ತು ಹೊಳಬೇಕು ಇಲ್ಲವೇ ಸುಡ ಬೇಕು. ಕ್ರಿಮಿನಾಶಕವನ್ನು ಬೆಳೆಗೆ ಸಿಂಪಡಿಸುವುದಕ್ಕಿಂತ ಮೊದಲು ಬದುವಿಗೆ ಸಿಂಪಡಿಸಿದರೇ ಅಲ್ಲಿ ವಾಸವಾಗಿರುವ ಜಿಗಿಹುಳು ನಿಯಂತ್ರಣಕ್ಕೆ ಬರುತ್ತವೆ. ಬಿತ್ತನೆ ಸಮಯದಲ್ಲಿ ಟ್ರೆಂಕೋಡರ್ಮಾ ಪುಡಿಯಿಂದ ಬೀಜೋಪಚಾರ ಮಾಡಿದರೆ ಹಾಗೂ ಬದುಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಹಳದಿ ರೋಗದ ಭೀತಿ ಇರುವುದಿಲ್ಲ ಎಂದು ತಂಡ ರೈತರಿಗೆ ಮಾಹಿತಿ ನೀಡಿತು.

1 comment
  1. Namma holadalli nelakadale beleyalli mutagi kempu chukki rogad bade idakke yava oushad simpadisabeku heli sar.

Leave a Reply

Your email address will not be published. Required fields are marked *

You May Also Like

ಕೊರೊನಾ ವಾರಿಯರ್ಸ್ ನಿಜವಾದ ಹಿರೋಗಳು: ಜನಜಾಗೃತಿಯ ಸಂದೇಶ ನೀಡುವ ಚಿತ್ರರಂಗದ ದಿಗ್ಗಜರ ದೃಶ್ಯರೂಪಕ

ಕೊರೊನಾ ಜಾಗೃತಿಗಾಗಿ ಕನ್ನಡ ಚಿತ್ರರಂಗದ ದಿಗ್ಗಜರು ಸಂದೇಶ ನೀಡಿದ ದೃಶ್ಯ ರೂಪಕವನ್ನು ನೀವು ನೋಡಬಹುದು.

ಚನ್ನೈನಲ್ಲಿ ಕೊರೋನಾ ಕಾಟ

ತಮಿಳುನಾಡಿನಲ್ಲಿ ಕೊರೋನಾ ವೈರಸ್ ಹಾವಳಿ ಹೆಚ್ಚಾಗುತ್ತಿದೆ. ಒಂದೇ ದಿನ ಬರೋಬ್ಬರಿ 771 ಹೊಸ ಪ್ರಕರಣಗಳು ದಾಖಲಾಗಿವೆ. ಈ ನಿಟ್ಟಿನಲ್ಲಿ ಸೋಂಕಿತರ ಸಂಖ್ಯೆ 4829ಕ್ಕೆ ಏರಿಕೆಯಾಗಿದೆ.

ಕರ್ತವ್ಯ ನಿರತ ಸಾರಿಗೆ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವವರ ಮೇಲೆ ಕ್ರಮಕ್ಕೆ ಗದಗ ಡಿಸಿ ಸೂಚನೆ!

ವಾಕರಾರಸಾ ಸಂಸ್ಥೆಯ ನಿರ್ವಾಹಕರು ಹಾಗೂ ಚಾಲಕರು ಮತ್ತು ಸಿಬ್ಬಂದಿಗಳು ನೀಡಿದ ಅನಿರ್ದಿಷ್ಟಾವಧಿ ಮುಷ್ಕರದಿಂದ ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ಕನಿಷ್ಟ ದರದಲ್ಲಿ ಸಾರಿಗೆ ಸೇವೆ ಒದಗಿಸಲು ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.

ಕತ್ತಲ ಕೋಣೆ ಕನ್ನಡ ಸಿನಿಮಾಕ್ಕೆ ಭೋಜಪುರಿ ನಿರ್ಮಾಪಕನ ಕಣ್ಣು!

ಕತ್ತಲ ಕೋಣೆ ಕನ್ನಡ ಸಿನಿಮಾ ಮೇಲೆ ಇದೀಗ ಭೋಜಪುರಿ ನಿರ್ಮಾಪಕರು ಕಣ್ಣು ಬಿದ್ದಿದೆ. ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಸಿನಿಮಾ ಇದಾಗಿದ್ದು 1998ರ ಸತ್ಯ ಘಟನೆ ಆಧಾರಿತ ಚಿತ್ಯರ. ಉಡುಪಿಯ ಸಂದೇಶ ಶೆಟ್ಟಿ ಆಜ್ರಿ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿತ್ತು. ಚಿತ್ರದ ನಾಯಕ ನಟ ಕೂಡ ಸಂದೇಶ ಅವರೆ. ಅಂದುಕೊಂಡಂತಾದರೆ ಕನ್ನಡದ ಕತ್ತಲ ಕೋಣೆ ಮರಾಠಿಯಲ್ಲೂ ಸದ್ದು ಮಾಡಲಿದೆ.