ಪಚನ ಶಕ್ತಿ ವೃದ್ಧಿಗೆ ಮೊಳಕೆ ಒಡೆದ ಹೆಸರು ಕಾಳು

ಸದ್ಯ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮಹಾಮಾರಿ ತಡೆಗಟ್ಟಲು ಆತ್ಮವಿಶ್ವಾಸದ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಾಗಿ ಬೇಕಾಗುತ್ತದೆ. ಇದಕ್ಕಾಗಿ ಸಾರ್ವಜನಿಕರು ಜಾಗೃತಿ ವಹಿಸುವ ಅಗತ್ಯತೆ ತುಂಬಾ ಇದೆ. ಮಕ್ಕಳು, ವೃದ್ಧರು ಸೇರಿದಂತೆ ಎಲ್ಲ ವಯಸ್ಸಿನವರು ಇಮ್ಯೂನಿಟಿ ಪವರ್ ಹೆಚ್ಚಿಸುವ ಆಹಾರದತ್ತ ಹೆಚ್ಚಿನ ಗಮನ ಹರಿಸುವ ಅಗತ್ಯತೆ ಈ ಸಂದರ್ಭದಲ್ಲಿ ತುಂಬಾ ಇದೆ. ಇದಕ್ಕೆ ರಾಮಬಾಣ ಎಂಬಂತೆ ವರ್ತಿಸುವ ಹೆಸರುಕಾಳನ್ನು ಜನರು ಹೆಚ್ಚಾಗಿ ಬಳಸುವ ಅವಶ್ಯಕತೆ ಇದೆ.

ಹಳದಿ ರೋಗ ಹಾಗೂ ಮೆಕ್ಕೆ ಜೋಳದಲ್ಲಿ ಸೈನಿಕ ಹುಳುವಿನ ನಿರ್ವಹಣೆ ಮಾಡುವುದು ಹೇಗೆ.?

ಗದಗ: ಹೆಸರು ಹಾಗೂ ಗೋವಿನ ಜೋಳ ಬಿತ್ತನೆಯಾಗಿದ್ದು, ಈಗಾಗಲೇ ಹೆಸರು ಹೂವಾಡುವ ಹಂತ ಹಾಗೂ ಗೋವಿನ ಜೋಳ ಸುಮಾರು 30 ರಿಂದ 40 ದಿವಸದ ಬೆಳೆ ಇರುತ್ತವೆ. ಹೆಸರು ಬೆಳೆಯಲ್ಲಿ ವಿವಿದೆಡೆ ಹಳದಿ ರೋಗ ಮತ್ತು ಗೋವಿನ ಜೋಳದಲ್ಲಿ ಸೈನಿಕ ಹುಳುವಿನ ಬಾಧೇ ಹೆಚ್ಚಿದೆ. ಗದಗ ತಾಲೂಕಿನ ಉಪ ಕೃಷಿ ನಿರ್ದೇಶಕ ವೀರೇಶ ಹುನಗುಂದ ನೇತೃತ್ವದ ಕೃಷಿ ಇಲಾಖೆಯ ಅಧಿಕಾರಿಗಳ ತಂಡ ಅಡವಿ ಸೋಮಾಪೂರ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿತು. ಹೆಸರು ಬೆಳೆಯಲ್ಲಿ ಹಳದಿ ರೋಗ ಹಾಗೂ ಮೆಕ್ಕೆ ಜೋಳದಲ್ಲಿ ಸೈನಿಕ ಹುಳುವಿನ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರು.