ಬಾಗಲಕೋಟೆ:ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆ ಮದುವೆ, ಸೀಮಂತ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಮದುವೆ ತುರ್ತು ನಡೆಸಲೇ ಬೇಕಿದ್ದರೆ ಸಬ್ ರೆಜಿಸ್ಟ್ರಾರ್ ಕಚೇರಿಯಲ್ಲಿ ಕೇವಲ‌ ತಂದೆ-ತಾಯಿಗಳೊಂದಿಗೆ ತೆರಳಿ‌ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಯಾರಾದ್ರೂ ಮೃತಪಟ್ಟರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ನಂತರ ಅಂತಿಮ‌ ಸಂಸ್ಕಾರ ನಡೆಸಲು ಸೂಚಿಸಿದ್ದು, 20ಜನರ ಭಾಗವಹಿಸಲು ಮಾತ್ರ ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಎಸ್ಪಿ ಲೋಕೇಶ್ ಜಗಲಾಸರ್ ಜಂಟಿ ತಿಳಿಸಿದ್ದಾರೆ.

ಈ ಕುರಿತು ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜಮಖಂಡಿ ಉಪವಿಭಾಗದ ತೇರದಾಳ, ಮುಧೋಳ, ರಬಕವಿ-ಬನಹಟ್ಟಿಯ ಸರ್ಕಾರಿ, ಖಾಸಗಿ ಆಸ್ಪತ್ರೆಗಳನ್ನು ಸಿದ್ಧತೆಯಲ್ಲಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ತುರ್ತು‌ ಸಂದರ್ಭದಲ್ಲಿ ಸರ್ಕಾರಿ ಹಾಸ್ಟೆಲ್ ಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿಯೂ ಪರಿವರ್ತನೆ ಮಾಡಲು ತೀರ್ಮಾನಿಸಿದ್ದು ಕೋವಿಡ್ ನಿಯಮಾವಳಿ ಉಲ್ಲಂಘನೆಗೆ ಸಂಬಂಧಿಸಿದಂತೆ 60 ಎಫ್ ಐಆರ್ ದಾಖಲಾಗಿವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಕ್ಕರೆ ನಾಡಿನಲ್ಲಿ ಸಿಹಿಯಾದ ಮಾತಿಗೆ ಮರುಳಾಗಿ 20 ಕೋಟಿ ಮೌಲ್ಯದ ಚಿನ್ನ ಕಳೆದುಕೊಂಡ ನಾರಿಯರು!!

ಬೆಂಗಳೂರು : ಸಕ್ಕರೆ ನಾಡಿನಲ್ಲಿ ಸಿಹಿಯಾದ ಆಮಿಷಕ್ಕೆ ಮಹಿಳೆಯರು ಬಲಿಯಾಗಿ, ಬರೋಬ್ಬರಿ ರೂ. 20 ಕೋಟಿ ಮೌಲ್ಯದ ಚಿನ್ನ ಕಳೆದುಕೊಂಡಿರುವ ಘಟನೆ ನಡೆದಿದೆ.

ಶೆಟ್ಟಿಕೇರಿ ಕೆರೆ: ಪಾರಂಪರಿಕ ತಾಣವನ್ನಾಗಿಸಲು ಅಗತ್ಯದ ಕ್ರಮ

ಜೀವ ವೈವಿಧ್ಯತೆಯ ಸಂರಕ್ಷಣೆ ಸಂವರ್ಧನೆಯ ಕಾಯ್ದೆಯ ಸಮರ್ಪಕ ಜಾರಿಗಾಗಿ ಜಿ.ಪಂ, ತಾ.ಪಂ ಮೂಲಕ ಸಮಿತಿಗಳನ್ನು ರಚಿಸಿದ್ದು ಈ ಸಮಿತಿಗಳ ಮೂಲಕ ಜಿಲ್ಲೆಯಲ್ಲಿನ ಜೀವ ವೈವಿಧ್ಯತೆಯನ್ನು ಬಲಪಡಿಸುವುದು ಅಗತ್ಯ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ್ ತಿಳಿಸಿದರು.

ಹೊಸ ಶಿಕ್ಷಣ ನೀತಿ ಸಾಕಾರಕ್ಕೆ ಸಹಕಾರ ಅಗತ್ಯ- ಅರುಣ ಶಹಾಪುರ

ವರದಿ: ಗುಲಾಬಚಂದ ಜಾಧವ ಉತ್ತರಪ್ರಭಆಲಮಟ್ಟಿ: ಮೂವತ್ತು ನಾಲ್ಕು ವಸಂತಗಳ ಬಳಿಕ 21 ನೇ ಶತಮಾನ ಕಂಡ…

ಸುಮಲತಾಗೆ ಪಾಸಿಟಿವ್: ಸಂಪರ್ಕಿತರಿಂದ ಪರೀಕ್ಷೆಗೆ ರಶ್.!

ಮಂಡ್ಯ: ಸಂಸದೆ ಸುಮಲತಾ ತಮಗೆ ಪಾಸಿಟಿವ್ ಬಂದಿದೆ ಎಂದು ಸೋಮವಾರ ಘೋಷಿಸಿದ್ದರು. ತಮ್ಮ ಸಂಪರ್ಕಿತರ ಪಟ್ಟಿಯನ್ನು…