ಕೊಲಂಬೊ : ಶ್ರೀಲಂಕಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಕುಸಲ್ ಮೆಂಡಿಸ್ ಅವರನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.

ಶ್ರೀಲಂಕಾದ ರಾಜಧಾನಿ ಕೊಲಂಬೊದ ಹೊರ ಭಾಗದಲ್ಲಿ ಸೈಕಲ್ ಸವಾರನಿಗೆ ಮೆಂಡಿಸ್ ಅವರ ಕಾರು ಡಿಕ್ಕಿ ಹೊಡೆದಿತ್ತು. ಈ ಪ್ರಕರಣದಲ್ಲಿ ಪೊಲೀಸರು ಮೆಂಡಿಸ್ ಅವರನ್ನು ಬಂಧಿಸಿದ್ದಾರೆ. ಕುಸಲ್ ಮೆಂಡಿಸ್ ಶ್ರೀಲಂಕಾದ ಪುನದುರಾ ಪ್ರದೇಶದಲ್ಲಿ ತನ್ನ ಎಸ್ಯುರವಿ ಕಾರನ್ನು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ವೇಳೆ

ಅಲ್ಲಿ ಸೈಕಲ್ ಓಡಿಸುತ್ತಿದ್ದ ಓರ್ವನಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಸೈಕಲ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಹೀಗಾಗಿ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಕುಸಲ್ ಮಂಡಿಸ್ ಅವರನ್ನು ಬಂಧಿಸಿದ್ದು, ಅವರ ಕಾರನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಮಾರ್ಚ್ ನಲ್ಲಿ ಶ್ರೀಲಂಕಾದಲ್ಲಿಯೇ ನಡೆಯಬೇಕಿದ್ದ ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆ ಆಗಿದ್ದ 16 ಜನರಲ್ಲಿ ಮೆಂಡಿಸ್ ಕೂಡ ಇದ್ದರು. ಆದರೆ ಕೊರೊನ ವೈರಸ್ ಭೀತಿಯಿಂದ ಈ ಸರಣಿಯನ್ನು ರದ್ದುಮಾಡಲಾಗಿತ್ತು. ಈ ಹಿಂದೆ 2003ರಲ್ಲಿ ಶ್ರೀಲಂಕಾದ ಮಾಜಿ ಸ್ಪಿನ್ ಬೌಲರ್ ಕೌಶಲ್ ಲೋಕುರಾಚಿ ಅವರು ಕೂಡ ಮಹಿಳಾ ಪಾದಚಾರಿಗೆ ಕಾರಿನಲ್ಲಿ ಡಿಕ್ಕಿ ಹೊಡೆದಿದ್ದರು. ಆಗ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆಯ ನಂತರ ಕೌಶಲ್ ಅವರನ್ನು ನಾಲ್ಕು ವರ್ಷ ಕ್ರಿಕೆಟಿನಿಂದ ಅಮಾನತು ಮಾಡಿ ಜೈಲಿಗೆ ಕೂಡ ಕಳುಹಿಸಲಾಗಿತ್ತು.

Leave a Reply

Your email address will not be published. Required fields are marked *

You May Also Like

ಮಾರ್ಗಸೂಚಿಗಳು ಕೇಂದ್ರ ಸಚಿವರಿಗೆ ಅನ್ವಯವಾಗುವುದಿಲ್ಲವೇ?

ಮಾರ್ಗಸೂಚಿಗಳು ಎಲ್ಲರಿಗೂ ಅನ್ವಯವಾಗುತ್ತವೆ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಕೆಲವು ವಿನಾಯಿತಿಗಳು ಇವೆ

ಗದಗ ಜಿಲ್ಲೆಯಲ್ಲಿಂದು 6 ಕಂಟೇನ್ ಮೆಂಟ್ ಪ್ರದೇಶ ನಿರ್ಭಂಧ ತೆರವು

ಗದಗ: ಜಿಲ್ಲೆಯ ಗದಗ ತಾಲ್ಲೂಕಿನ ಅಸುಂಡಿ ಗ್ರಾಮದ ವಾರ್ಡ ನಂ. 2ರ ಸಿದ್ದಲಿಂಗನಗೌಡಾ ಪಾಟೀಲ ಬಡಾವಣೆ…

ರಾಜ್ಯದಲ್ಲಿ ಏರುಗತಿಯಲ್ಲಿ ಸೋಂಕು: ಇಂದು 5436 ಪಾಸಿಟಿವ್, ಜಿಲ್ಲಾವಾರ ವಿವರ

ರಾಜ್ಯದಲ್ಲಿಂದು 5536 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 107001 ಕ್ಕೆ ಏರಿಕೆಯಾದಂತಾಗಿದೆ.

ಮೇ.22 ರಂದು ವಿಶೇಷ ರೈಲು ಸೇವೆ: ಸಚಿವ ಸುರೇಶ್ ಅಂಗಡಿ

ಬೆಳಗಾವಿ: ಮೇ.22 ರಂದು ರಾಜ್ಯದಲ್ಲಿ 2 ವಿಶೇಷ ರೈಲುಗಳ ಸಂಚಾರ ಆರಂಭಿಸಲಾಗುವುದು ಎಂದು ರೈಲ್ವೆ ಖಾತೆ…