ರಾಯಚೂರು: ಎನ್ ಆರ್ ಬಿ ಸಿ 5 ಕೆನಾಲ್ ಯೋಜನೆಯ ಕ್ರಿಯಾ ಯೋಜನೆಯನ್ನು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡುವಂತೆ ಒತ್ತಾಯಿಸಿ ಮಸ್ಕಿ ತಾಲೂಕಿನ ಎನ್ಆರ್ ಬಿ ಸಿ ಕೆನಾಲ್ ಹೋರಾಟ ಸಮಿತಿ ಮುಖಂಡರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕಳೆದ ಹತ್ತು ವರ್ಷಗಳಿಂದ ಹೋರಾಟ ಮಾಡಿದ ಫಲವಾಗಿ ಈ ಯೋಜನೆಯ ಡಿಪಿಆರ್ ವನ್ನು ಕೃಷ್ಣಭಾಗ್ಯ ಜಲ ನಿಗಮದ ಮೂಲಕ ಸರಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಸರಕಾರ ಈ ಯೋಜನೆಗೆ ಮಂಜೂರಾತಿ ನೀಡಿಲ್ಲ. ಈ ಯೋಜನೆ ಜಾರಿಯಾದರೆ ರಾಯಚೂರು, ಕೊಪ್ಪಳ ಜಿಲ್ಲೆಗಳ 7 ಗ್ರಾಮಗಳ 72000 ಹೆಕ್ಟೇರ್ ಪ್ರದೇಶ ನೀರಾವರಿ ಪ್ರದೇಶ ಆಗಲಿದೆ. ಯೋಜನೆ ಮೊತ್ತ 2,755 ಕೋಟಿ ರೂ.‌ಅಂದಾಜಿಸಲಾಗಿದೆ. ಇದರ ಬಗ್ಗೆ ಮಾರ್ಚ 14ರಂದು ಮಸ್ಕಿ‌ ಪಟ್ಟಣಕ್ಕೆ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಆಗಮಿಸಿದಾಗ ಇದಕ್ಕೆ ಸ್ಪಂದಿಸಿ ಯೋಜನೆಯ ಡಿಪಿಆರ್ ಸೇರಿದಂತೆ ಇನ್ನಿತರ ಕಾಮಗಾರಿ ಆರಂಭಿಸಲು ಭರವಸೆ ನೀಡಿದ್ದರು. ಈ ಕೂಡಲೇ ಸರಕಾರ ಸಂಪುಟ ಸಭೆ ಕರೆದು ಈ ಯೋಜನೆಯನ್ನು ಮಂಜೂರಾತಿ ಮಾಡಬೇಕು ಇಲ್ಲದೇ‌ ಹೋದರೆ ಮುಂದಿನ ದಿನಗಳಲ್ಲಿ ಈ ಭಾಗದ ‌ರೈತರನ್ನು ಒಗ್ಗೂಡಿಸಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಎನ್ಆರ್ಬಿಸಿ 5ಎ ಕೆನಾಲ್ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜಪ್ಪಗೌಡ ಹರವಾಪೂರ, ಅಯ್ಯನಗೌಡ ನಾಗರಬೆಂಚಿ, ನಾಗರೆಡ್ಡಪ್ಪ ದೇವರಮನಿ, ತಿಮ್ಮನಗೌಡ ಚಿಲ್ಕರಾಗಿ, ಮಲ್ಲಿಕಾರ್ಜುನ ಹೂವಿನಬಾವಿ, ಮಲ್ಲರೆಡ್ಡಪ್ಪ ಚಿಲ್ಕರಾಗಿ, ಅಜಯ ನಾಡಗೌಡ, ದೇವೇಂದ್ರಪ್ಪ ಕನಸಾಲಿ, ಗಂಗಪ್ಪ ಅಮಜಿನಗಡ, ಇನ್ನಿತರ ಇದ್ದರು.

Leave a Reply

Your email address will not be published.

You May Also Like

ಶಿರಹಟ್ಟಿ ಮಾಬುಸುಬಾನಿ ಉರುಸು ರದ್ದು

ಮಾಬುಸುಬಾನಿ ಉರುಸು ರದ್ದು ಪಟ್ಟಣದಲ್ಲಿ ಭಾವೈಕ್ಯತೆ ಸಂಕೇತವಾಗಿದ್ದ ಹಜರತ್ ಮೆಹಬೂಬ ಸುಬ್ಹಾನಿ(ರಹ) ದರ್ಗಾದ ಉರುಸು ಈ ಬಾರಿ ಕೊರೊನಾದಿಂದ ರದ್ದುಗೊಳಿಸಲಾಗಿದೆ. ಉರುಸು ನಿಮಿತ್ಯ ನವೆಂಬರ್ 25 ರಿಂದ 27ರವರೆಗೆ ನಡೆಯಬೇಕಿದ್ದ ಎಲ್ಲ ಕಾರ್ಯಕ್ರಮಗಳನ್ನು ಸರ್ಕಾರದ ನಿಯಮದಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ ಆದೇಶದ ಪ್ರಕಾರ ರದ್ದುಗೊಳಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ವಿವಿಯಿಂದ ಸಸಿ ನೆಟ್ಟು, ಸೆಲ್ಫಿ ಹಂಚಿಕೊಳ್ಳುವ ನನ್ನ ಗಿಡ ನನ್ನ ಉಸಿರು ಅಭಿಯಾನ

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಹಾಗೂ ಜಿಲ್ಲಾ ಅರಣ್ಯ ಇಲಾಖೆ ಇವರ ಸಹಯೋಗದೊಂದಿಗೆ ಜೂ.5ರಂದು ವಿಶಿಷ್ಟ ರೀತಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಡಿಸಿ ಬಂಗಲೆಯಲ್ಲಿ ಶೂಟ್ ಮಾಡಿಕೊಂಡ ಪೊಲೀಸ್ ಪೇದೆ

ಜಿಲ್ಲಾಧಿಕಾರಿ ಬಂಗಲೆಯಲ್ಲಿಯೇ ಗುಂಡು ಹಾರಿಸಿಕೊಂಡು ಪೊಲೀಸ್ ಪೇದೆಯೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಲಕ್ಷ್ಮೇಶ್ವರ: ಕಾಮಗಾರಿ ಮುಗಿದರೂ ಹಸ್ತಾಂತರವಾಗದ ಅಂಗನವಾಡಿ

ಬಡ ಮಕ್ಕಳ ಬದುಕಿನಲ್ಲಿ ಶಿಕ್ಷಣ ದಿವಿಗೆಯನ್ನು ಹಚ್ಚಬೇಕಾದ ಅಂಗನವಾಡಿ ಕೇಂದ್ರ ಇದ್ದು ಇಲ್ಲದಂತಾಗಿ ತಾಲೂಕಿನ ಆದರಹಳ್ಳಿ ಗ್ರಾಮದ 2ನೇ ವಾರ್ಡಿನ ಅಂಗನವಾಡಿ ಕೇಂದ್ರ ಇಲ್ಲದೇ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ. ಹಲವು ವರ್ಷಗಳಿಂದ ಮಕ್ಕಳಿಗೆ ಶಿಕ್ಷಣ ಕೊಡುತ್ತಾ ಬಂದಿದ್ದಾರೆ. ಹೊಸ ಅಂಗನವಾಡಿ ಕೇಂದ್ರ ನಿರ್ಮಾಣವಾಗಿ ಸುಮಾರು ವರ್ಷಗಳು ಕಳೆದರೂ ಇದುವರೆಗೆ ಅಂಗನವಾಡಿ ಕೇಂದ್ರವನ್ನು ಗುತ್ತಿಗೆದಾರರು ಹಸ್ತಾಂತರ ಮಾಡಿಲ್ಲ ಹಾಗೂ ಗ್ರಾ.ಪಂ.ಚುನಾವಣೆ ನಡೆದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯೂ ಆಗಿದೆ. ಆದರೆ ಅಂಗನವಾಡಿ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ ಎಂದು 2 ವಾರ್ಡಿನ ಸಾರ್ವಜನಿಕರು ತಮ್ಮ ಆಕ್ರೋಶವನ್ನು ಹೋರ ಹಾಕುತ್ತಿದ್ದಾರೆ.