ಭೋಪಾಲ್: ಮದುವೆ ಸಂಭ್ರಮದಲ್ಲಿ ಹಾಜರಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು, ನವ ದಂಪತಿ ಸೇರಿದಂತೆ 100 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವಧುವಿನ ಸಂಬಂಧಿಯೊಬ್ಬರಿಗೆ ಮಂಗಳವಾರ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ದಂಪತಿ ಹಾಗೂ ಇತರೆ 100 ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ಚಿಂದ್ವಾರ ನಗರ ಪಾಲಿಕೆ ಆಯುಕ್ತ ರಾಜೇಶ್ ಶಾಹಿ ಅವರು ತಿಳಿಸಿದ್ದಾರೆ.

ಕೊರೊನಾ ಪಾಸಿಟಿವ್ ಬಂದಿರುವ ವಧುವಿನ ಸಂಬಂಧಿ ಸಿಐಎಸ್ಎಫ್ ಸಿಬ್ಬಂದಿಯಾಗಿದ್ದು, ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು. ಮೇ. 26ರಂದು ಮದುವೆಯಲ್ಲಿ ಭಾಗವಹಿಸಿದ್ದರು.

ಅವರಿಗೆ ಮೂರ್ನಾಲ್ಕು ದಿನಗಳ ಹಿಂದೆಯೇ ಸೋಂಕಿನ ಲಕ್ಷಣಗಳು ಕಂಡು ಬಂದಿತ್ತು. ನಂತರ ಅವರ ಮಾದರಿಯನ್ನು ತೆಗೆದುಕೊಳ್ಳಲಾಯಿತು ಮತ್ತು ಅವರನ್ನು ಚಿಂದ್ವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಆಯುಕ್ತರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ದೇಶದ ಜನತೆಗೆ ಶುಭಾಶಯ ಕೋರಿದ ಮೋದಿ!

ನವದೆಹಲಿ : ಇಂದಿನಿಂದ ನವರಾತ್ರಿ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

ದೇಶದಲ್ಲಿ 70 ಲಕ್ಷ ದಾಟಿದ ಸೋಂಕಿತರ ಸಂಖ್ಯೆ!

ನವದೆಹಲಿ : ದೇಶದಲ್ಲಿ ಕೊರೊನಾ ತನ್ನ ಅಟ್ಟಹಾಸವನ್ನು ಎಂದಿನಂತೆ ಕಾಯ್ದುಕೊಂಡಿದೆ. ಆದರೆ ಕಳೆದ 24 ಗಂಟೆಗಳಲ್ಲಿ ವೈರಸ್ ನ ಸಂಖ್ಯೆಗಿಂತಲೂ ಚೇತರಿಕೆ ಪ್ರಮಾಣ ಹೆಚ್ಚಾಗಿದೆ.

ಆರೋಗ್ಯ ಸೇತು ಮೊಬೈಲ್ ಆಪ್ ಸುರಕ್ಷಾ ಕವಚ: ಡಾ.ಕೆ.ಸುಧಾಕರ್

ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ’ಆರೋಗ್ಯ ಸೇತು’ ಆ್ಯಪ್ ಸಹಕಾರಿಯಾಗಿದೆ. ಇನ್ನೂ ಹೆಚ್ಚು ವ್ಯಾಪಕವಾಗಿ ಇದನ್ನು ಜನರು ಬಳಸುವಂತಾಗಬೇಕು

ರಶ್ಮಿಕಾ ಜಾಗಕ್ಕೆ ಬಂದು ನಿಂತ ಸಾಯಿ ಪಲ್ಲವಿ!

ಹೈದರಾಬಾದ್ : ದಕ್ಷಿಣ ಭಾರತ ಸೆನ್ಸೇಶನ್ ಕ್ವೀನ್ ಸಾಯಿ ಪಲ್ಲವಿ ಸದ್ಯ ತೆಲುಗು, ತಮಿಳು ಚಿತ್ರರಂಗದಲ್ಲಿ…