ದೆಹಲಿ: ದೇಶದ ಗಡಿ ಮತ್ತು ಸಾರ್ವಭೌಮತ್ವ ರಕ್ಷಿಸುವ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಬದ್ಧತೆಯನ್ನು ಪ್ರಪಂಚವೇ ನೋಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಲ್ಲದೇ, ಪೂರ್ವ ಲಡಾಕ್‌ನಲ್ಲಿ ಭಾರತದ ಪ್ರಾಂತ್ಯಗಳನ್ನು ಬಯಸುವವರಿಗೆ ತಕ್ಕ ಉತ್ತರವನ್ನು ನಮ್ಮ ಸೇನೆ ನೀಡಿದೆ ಎಂದರು.

ಪ್ರತಿ ತಿಂಗಳ ಕೊನೆಯ ಭಾನುವಾರದಂದು ಆಕಾಶವಾಣಿಯಲ್ಲಿ ದೇಶದ ಪ್ರಜೆಗಳನ್ನುದ್ದೇಶಿಸಿ ಮಾತನಾಡುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಇಂದು ಮಾತಾಡಿದ ಅವರು, ಕೊರೋನಾ ಸಂಕಷ್ಟದ ನಡುವೆ ಈ ವರ್ಷ ಭಾರತ ಹಲವು ಸವಾಲುಗಳನ್ನು ಮುಖಾಮುಖಿಯಾಯಿತು. ಆಂಫನ್, ನಿಸರ್ಗ ಚಂಡಮಾರುತಗಳು, ಮಿಡತೆ ದಾಳಿ, ಕೆಲವೆಡೆ ಅಲ್ಪಪ್ರಮಾಣದ ಭೂಕಂಪಗಳು ಸಂಭವಿಸಿದವು. ಇವೆಲ್ಲವುಗಳ ನಡುವೆ ನಮ್ಮ ನೆರೆ ದೇಶ ನೀಡುತ್ತಿರುವ ಕಿರುಕುಳದ ವಿರುದ್ಧ ಸಹ ಹೋರಾಡಬೇಕಾಗಿದೆ ಎಂದು ಅವರು ಹೇಳಿದರು.

ಶಾಂತಿ ಕಾಪಾಡುವ ನಿಟ್ಟಿನಲ್ಲಿ ಭಾರತದ ಬದ್ಧತೆ ಮತ್ತು ಶಕ್ತಿಯನ್ನು ಇಡೀ ಪ್ರಪಂಚ ನೋಡಿದೆ ಎಂದು ಅವರು ಅಭಿಪ್ರಾಯಪಟ್ಟರು.

ಹೇಗೆ ಸ್ನೇಹದಿಂದರಬೇಕು ಎಂದು ಮತ್ತು ನಮ್ಮ ತಂಟೆಗೆ ಬಂದರೆ ಸೂಕ್ತ ರೀತಿಯಲ್ಲಿ ಹೇಗೆ ಉತ್ತರಿಸಬೇಕೆಂದು ಕೂಡ ಭಾರತಕ್ಕೆ ಗೊತ್ತಿದೆ. ಲಡಾಕ್‌ನಲ್ಲಿ ನಮ್ಮ ಪ್ರಾಂತ್ಯಗಳನ್ನು ಅಪೇಕ್ಷಿಸುವವರಿಗೆ ಸೂಕ್ತ ಉತ್ತರ ನೀಡಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜೊತೆಗೆ, ಪೂರ್ವ ಲಡಾಕ್ ಸಂಘರ್ಷದ ಬಳಿಕ ಹಲವರು ಸ್ವದೇಶಿ ವಸ್ತುಗಳ ಮೊರೆ ಹೋಗುತ್ತಿದ್ದಾರೆ. ದೇಶಿ ವಸ್ತುಗಳ ಬಳಕೆಗೆ ಕರೆ ನೀಡಿದ್ದಾರೆ. ಅಸ್ಸಾಂನ ರಜನಿ, ನಾನು ದೇಶಿ ವಸ್ತುಗಳನ್ನೇ ಇನ್ನು ಮುಂದೆ ಬಳಸುತ್ತೇನೆ. ಅಷ್ಟೇ ಅಲ್ಲ, ಇತರರಿಗೆ ಸ್ಥಳೀಯ ವಸ್ತುಗಳನ್ನು ಬಳಸುವಂತೆ ಉತ್ತೇಜಿಸುತ್ತೇನೆ ಎಂದಿದ್ದಾರೆ. ಹೀಗೆ ದೇಶದ ನೂರಾರು ಭಾಗಗಳಿಂದ ಅನೇಕ ನಾಗರಿಕರು ನನಗೆ ಸಂದೇಶಗಳನ್ನು ಕಳುಹಿಸಿದ್ದಾರೆ. ಸ್ವಾವಲಂಬಿ ಆಗುವಲ್ಲಿ ಭಾರತೀಯರು ತೆಗೆದುಕೊಂಡಿರುವ ದಿಟ್ಟ ನಿರ್ಧಾರ ಶ್ಲಾಘನೀಯ ಎಂದು ನಾಗರಿಕರ ನಿರ್ಧಾರವನ್ನು ಬೆಂಬಲಿಸಿದರು.

ಜೂನ್ 15ರಂದು ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ 20 ಯೋಧರಿಗೆ ಭಾರತ ಗೌರವ ಸಲ್ಲಿಸುತ್ತಿದೆ. ಮಡಿದವರ ತ್ಯಾಗ, ಬಲಿದಾನವನ್ನು ಈ ದೇಶ ಮರೆಯದು. ತಮ್ಮ ಪುತ್ರನನ್ನು ಕಳೆದುಕೊಂಡ ಪೋಷಕರು ಭಾರತದ ಸೇನೆಗೆ ಇತರ ಮಕ್ಕಳನ್ನು ಸೇರಿಸಲು ಮುಂದಾಗಿದ್ದಾರೆ. ಸೇನೆಗೆ ತಮ್ಮ ಮಕ್ಕಳನ್ನು ಸೇರಿಸಲು ಹಿಂಜರಿಯುತ್ತಿಲ್ಲ. ಇದು ಅವರ ಉತ್ಸಾಹ ಮತ್ತು ತ್ಯಾಗ ಮನೋಭಾವವನ್ನು ತೋರಿಸುತ್ತಿದೆ ಎಂದರು.

ಈ ವೇಳೆ ಹುತಾತ್ಮ ಯೋಧನ ತಂದೆ, ಬಿಹಾರದ ಕುಂದನ್ ಕುಮಾರ್, ನನ್ನ ಮೊಮ್ಮಗನನ್ನು ಕೂಡ ಸೇನೆಗೆ ಕಳುಹಿಸುತ್ತೇನೆ ಎಂದ ವಿಷಯವನ್ನು ಪ್ರಸ್ತಾಪಿಸಿದ ಅವರು, ಇದು ಹುತಾತ್ಮ ಯೋಧರ ಕುಟುಂಬದವರ ಉತ್ಸಾಹ ಮನೋಭಾವ ತೋರಿಸುತ್ತದೆ. ಇಂಥ ಕುಟುಂಬದವರ ತ್ಯಾಗ ಮನೋಭಾವ ಪ್ರಶಂಸನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

You May Also Like

ಗಡಿಯಲ್ಲಿ 60 ಸಾವಿರ ಸೈನಿಕರನ್ನು ನಿಯೋಜಿಸಿದ ಚೀನಾ!

ವಾಷಿಂಗ್ಟನ್ : ಗಡಿಯಲ್ಲಿ ಚೀನಾ ರಾಷ್ಟ್ರದ ಉಪಟಳ ಮುಂದುವರೆದಿದೆ. ಚೀನಾ ಭಾರತದ ಮೇಲೆ ದಾಳಿ ಮಾಡುವ ಹುನ್ನಾರ ನಡೆಸುತ್ತಿದೆಯೇ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಗಡಿಯಲ್ಲಿ 60 ಸಾವಿರ ಸೈನಿಕರನ್ನು ನಿಯೋಜಿಸಿದ್ದೆ ಈ ಸಂಶಯಕ್ಕೆ ಕಾರಣವಾಗುತ್ತಿದೆ.

ಸರ್ಕಾರಿ ನೌಕರಸ್ಥರಿಗೆ ಆರೋಗ್ಯ ಸೇತು ಆಪ್ ಕಡ್ಡಾಯ!

ಕೇಂದ್ರ ಸರ್ಕಾರ ಹೊರ ಗುತ್ತಿಗೆ ಸಿಬ್ಬಂದಿ ಸೇರಿದಂತೆ ಎಲ್ಲ ಕೆಲಸಗಾರರು ಆರೋಗ್ಯ ಸೇತು ಆಪ್ ಅನ್ನು ಕಡ್ಡಾಯವಾಗಿ ಬಳಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಕೋರೊನಾ ನಿರ್ವಹಣೆ ಸರಿಯಾಗಿದೆ, ಆತಂಕ ಬೇಡ: ಸಚಿವ ಸಿ.ಸಿ. ಪಾಟೀಲ್

ಕೋರೊನಾ ನಿವ೯ಹಣೆ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಸಕಾ೯ರ ಹಾಗೂ ಜಿಲ್ಲಾಡಳಿತ ಸಮಥ೯ವಾಗಿವೆ. ಯಾವುದೆ ರೀತಿಯ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಟ್ವೀಟ್ ಮಾಡಿದ್ದಾರೆ.

ಟಿಕ್ ಟಾಕ್ App ಬ್ಯಾನ್ ಗೆ ಟಿಕ್ ಟಾಕ್ ನೀಡಿದ ಸ್ಪಷ್ಟಿಕರಣ

ನವದೆಹಲಿ: ಕೇಂದ್ರ ಸರ್ಕಾರವು 59 App ಗಳನ್ನು ನಿಷೇಧಿಸಿ‌ ಮದ್ಯಂತರ ಆದೇಶ ಹೊರಡಿಸಿದೆ. 59 App…