ಮುಂಡರಗಿ: ಗೆಳೆಯರಿಗೆ ಅಚ್ಚುಮೆಚ್ಚಾಗಿದ್ದಾತ. ನಿನ್ನೆಯಷ್ಟೆ ಭವಿಷ್ಯದ ನಿರ್ಣಾಯಕ ಘಟ್ಟದ ಮೊದಲ ಪರೀಕ್ಷೆ ಮುಗಿಸಿದ್ದ. ಸಹಪಾಠಿಗಳೊಂದಿಗೆ ಕೂಡಿ ಪರೀಕ್ಷೆ ಬರೆದು ಪರೀಕ್ಷಾ ಕೇಂದ್ರದಿಂದ ಮನೆಗೆ ಮರಳಿದಾತ ಮನಿ ಸೇರಲೇ ಇಲ್ಲ. ಈಗ-ಆಗ ಬಂದಾನು ಅಂತ ಕಾದು ಕುಳಿತ ತಂದೆ-ತಾಯಿಯರಿಗೆ ಕೊನೆಗೂ ಆಘಾತ ನೀಡಿ ಹೋಗಿ ಬಿಟ್ಟ.
ನಿನ್ನೆ ಸಿದ್ದಪ್ಪನೊಂದಿಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಇಂದು ಸಹಪಾಠಿಯ ಅಗಲಿಕೆಯ ದುಗೂಡದಲ್ಲಿಯೇ ಪರೀಕ್ಷೆಗೆ ಹಾಜರಾದರು. ಇದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗೇವಾಡಿಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಸಿದ್ದಪ್ಪ ಜೀವನದ ಅಂತಿಮ ಪರೀಕ್ಷೆ ಮುಗಿಸಿ ನಪಾಸ್ ಆಗಿ ಹೋದ ಕಥೆ..!

ಮೊನ್ನೆಯಷ್ಟೆ ಕಲಕೇರಿಯ ಪರೀಕ್ಷಾ ಕೇಂದ್ರದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿಸಿ ಮನೆಗೆ ಮರಳುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದರು. ಇದರಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಿದ್ದಪ್ಪ ಸಾವನ್ನಪ್ಪಿದ. ತಂದೆ ಮಲ್ಲಪ್ಪ, ತಾಯಿ ಮಾದೇವಿ ಯವರಿಗೆ ಮಗನ ಅಗಲಿಕೆ ಮಾತ್ರ ಅರಗಿಸಿಕೊಳ್ಳಲು ಆಗುತ್ತಲೇ ಇಲ್ಲ. ಮೂವರು ಗಂಡು ಮಕ್ಕಳಲ್ಲಿ ಈ ಮನೆಗೆ ಸಿದ್ದಪ್ಪನೇ ಕಿರಿಯ ಪುತ್ರ. ಕಿರಿಯ ಮಗನ ಬಗ್ಗೆ ಕನಸಿನ ಮೂಟೆ ಹೊತ್ತ ತಂದೆಗೆ ಜವರಾಯ ನಿರಾಶೆ ಮಾಡಿದ್ದಾನೆ. ಸಿದ್ದಪ್ಪನ ಅಣ್ಣ ರಮೇಶ್ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ. ಕಳೆದ ಮೂರು ವರ್ಷಗಳ ಹಿಂದಷ್ಟೆ ಬಾಗೇವಾಡಿ ಪ್ರೌಢ ಶಾಲೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿದ್ದ. ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದಿದ್ದ. ರಮೇಶನಂತೆ ಸಿದ್ದಪ್ಪ ಕೂಡ ಉನ್ನತ ವ್ಯಾಸಾಂಗ ಮಾಡಬೇಕು ಎನ್ನುವ ಕನಸು ಮಲ್ಲಪ್ಪನದ್ದಾಗಿತ್ತು.

ಪಾಲಕರಿಗೆ ಉತ್ತರಪ್ರಭ ಮನವಿ

• ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಸಾರಿಗೆ ಸೌಲಭ್ಯ ನೀಡಿದೆ. ಇದರ ಸದುಪಯೋಗ ಪಡೆದುಕೊಳ್ಳಿ

• ನಿಮ್ಮ ಮಕ್ಕಳನ್ನು ಬೈಕಿನಲ್ಲಿ ಪರೀಕ್ಷೆಗೆ ಕಳುಹಿಸಬೇಡಿ

• ನೀವೂ ಕೂಡ ನಿಮ್ಮ ಮಕ್ಕಳನ್ನು ಬೈಕಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಬೇಡಿ

• ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ತುಂಬಿ.

ಈ ಘಟನೆಯಿಂದ ವಿದ್ಯಾರ್ಥಿಗಳ ಮನಸ್ಸು ಘಾಸಿಗೊಂಡಿದೆ. ಶಾಲೆಯಲ್ಲಿ 54 ವಿದ್ಯಾರ್ಥಿಗಳಲ್ಲಿ ಸಿದ್ದಪ್ಪ ಸಾವನ್ನಪ್ಪಿದರೆ, ಗಾಯಗೊಂಡ ಇನ್ನುಳಿದ ಇಬ್ಬರು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ 51 ವಿದ್ಯಾರ್ಥಿಗಳು ನಿನ್ನೆ ಪರೀಕ್ಷೆಗೆ ಹಾಜರಾದರು.

ಈ ಘಟನೆಯ ಕಾರಣ ನಿನ್ನೆಯಿಂದಲೇ ಶಾಲೆಯ ಸಿಬ್ಬಂಧಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಬಸ್ ಮೂಲಕ ಪರೀಕ್ಷೆಗೆ ಕಳುಹಿಸುವಂತೆ ಪಾಲಕರಿಗೆ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

'ಲಾ' ಸಿನಿಮಾ ಬಗ್ಗೆ ಕುತೂಹಲಕಾರಿ ಮಾಹಿತಿ ಹಂಚಿಕೊಂಡ ನಟಿ ರಾಗಿಣಿ ಚಂದ್ರನ್‌

ಕನ್ನಡದ ʻಲಾʼ ಸಿನಿಮಾ ಬಿಡುಗಡೆಯ ಬಗ್ಗೆ ಚಿತ್ರದ ನಾಯಕಿ ಬಹಳ ಉತ್ಸುಕರಾಗಿದ್ದಾರೆ. ಇದೇ ಜುಲೈ 17…

1 ರಿಂದ 5ನೇ ತರಗತಿ ಶಾಲಾ ಆರಂಭಕ್ಕೆ ರಾಜ್ಯ ಸರ್ಕಾರ ಚಿಂತನೆ

ಕೊರೋನಾ ಸೋಂಕಿನ ಭೀತಿ, ಕೊರೋನಾ ಎರಡನೇ ಅಲೆಯ ನಡುವೆಯೂ ರಾಜ್ಯದಲ್ಲಿ ಈಗಾಗಲೇ ಫೆಬ್ರವರಿ 1ರಿಂದ ಪೂರ್ಣ ಪ್ರಮಾಣದ ತರಗತಿ ಕೂಡ 9, 10, ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಗೊಂಡಿವೆ.

ಅಕ್ಟೋಬರ್ ನಲ್ಲಿ ಗ್ರಾಪಂ ಚುನಾವಣೆ ?ಜುಲೈ 13ರಿಂದ ಮತದಾರರ ಪಟ್ಟಿ ಪ್ರಕ್ರಿಯೆ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತಿಗಳ ಚುನಾವಣೆಗಳನ್ನು ಅಕ್ಟೋಬರ್ ನಲ್ಲಿ ನಡೆಸುವ ಸಾಧ್ಯತೆ ಇದ್ದು. ಇದೇ ಜುಲೈ…

ಟ್ಯಾಕ್ಟರ್ ಪಲ್ಟಿ 18 ಕೂಲಿ ಕಾರ್ಮಿಕರಿಗೆ ಗಾಯ

ಜಲಾಶಯಲ್ಲಿನ ಹೂಳು ಎತ್ತುವ ಕಾಮಗಾರಿ ಮುಗಿಸಿಕೊಂಡು ಹಿಂತಿರುಗುವ ವೇಳೆ ಟ್ಯಾಕ್ಟರ್ ಪಲ್ಟಿಯಾಗಿ ಐದು ಜನರು ಗಾಯಗೊಂಡ ಘಟನೆ ಸಂತೆಕೆಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ.