ಗದಗ: ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮ ವಹಿಸಿ, ಜೂನ್ 25 ರಿಂದ ಜು.03ರವರೆಗೆ ಜರುಗುವ ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ಸುರಕ್ಷಿತ ಹಾಗೂ ಅತ್ಯಂತ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ವಿವರ ಇಂತಿದೆ.
2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಜಿಲ್ಲೆಯ 58 ಪರೀಕ್ಷಾ ಕೇಂದ್ರಗಳಲ್ಲಿ ನಾಳೆಯಿಂದ ಜೂ.25 ರಿಂದ ಜು.03 ರವರೆಗೆ ನಡೆಯಲಿವೆ. ಜಿಲ್ಲೆಯಲ್ಲಿ ಒಟ್ಟು 14,210 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಅದರಲ್ಲಿ ಗದಗ ಶಹರದ 14 ಪರೀಕ್ಷಾ ಕೇಂದ್ರಗಳಲ್ಲಿ 2,708 ವಿದ್ಯಾರ್ಥಿಗಳು, ಗದಗ ಗ್ರಾಮೀಣದ 8 ಕೇಂದ್ರಗಳಲ್ಲಿ 2,330 ವಿದ್ಯಾರ್ಥಿಗಳು ಸೇರಿ ಮುಂಡರಗಿಯ 8 ಕೇಂದ್ರಗಳಲ್ಲಿ 1,800, ನರಗುಂದದ 6 ಕೇಂದ್ರಗಳಲ್ಲಿ 1,349, ರೋಣದ 12 ಕೇಂದ್ರಗಳಲ್ಲಿ 3,275 ಹಾಗೂ ಶಿರಹಟ್ಟಿ ತಾಲೂಕಿನ 10 ಕೇದ್ರಗಳಲ್ಲಿ 2,748 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅಲ್ಲದೇ, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಲು ಸಾರಿಗೆ ಹಾಗೂ ಖಾಸಗಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. 


ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲಿರುವ ಕಂಟೈನ್‍ಮೆಂಟ್ ಪ್ರದೇಶದಿಂದ ಬರುವ 31 ವಿದ್ಯಾರ್ಥಿಗಳಿಗೆ 4 ವಾಹನಗಳ  ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳು ಮಾಡಿರುತ್ತಾರೆ. ಹಾಗೂ ಇವರಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆಯನ್ನು ಮಾಡಲಾಗಿದೆ.

ಹೊಸದಾಗಿ ತೆರೆಯಲಾದ  7  ಉಪಕೇಂದ್ರಗಳು

ಸರಕಾರಿ ಪ್ರೌಢಶಾಲೆ ಕೋಟುಮಚಗಿ, ಬಿ.ಎಚ್. ಪಾಟೀಲ ಪ್ರೌಢಶಾಲೆ ಲಕ್ಕುಂಡಿ, ಶ್ರೀ ಹಾಲಶಿವಯೋಗೇಶ್ವರ ಪ್ರೌಢಶಾಲೆ ಪೇಠಾಲೂರ, ಎಸ್.ಜಿ.ಎಂ. ಪ್ರೌಢಶಾಲೆ ಕಲಕೇರಿ,  ಶಿವಯೋಗೇಶ್ವರ ಪ್ರೌಢಶಾಲೆ ಹೆಬ್ಬಾಳ, ಸರಕಾರಿ ಪ್ರೌಢಶಾಲೆ ಮಾಗಡಿ, ಎಸ್.ಜೆ.ಎಫ್. ಪ್ರೌಢಶಾಲೆ ಬೆಳ್ಳಟ್ಟಿ.

ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳು

  • ಪರೀಕ್ಷೆ ನಡೆಯುವ 1 ಗಂಟೆ 30 ನಿಮಿಷ ಮೊದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು.
  • ಪರೀಕ್ಷಾ ಕೇಂದ್ರ ಪ್ರವೇಶಿಸುವಾಗ ಮತ್ತು ಹೊರ ಹೋಗುವಾಗ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ.
  • 58 ಪರೀಕ್ಷಾ ಕೇಂದ್ರಗಳನ್ನು ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಸ್ಯಾನಿಟೈಸ್ ಮಾಡಲಾಗಿದೆ.
  • ಆಸನ ವ್ಯವಸ್ಥೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿದೆ. ಪ್ರವೇಶ ದ್ವಾರದಲ್ಲೆ ವಿದ್ಯಾರ್ಥಿಗಳ ಆರೋಗ್ಯವನ್ನು ತಪಾಸಣೆ ಮಾಡಲಾಗುವುದು.
  • ಈಗಾಗಲೇ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯತ್ ಹಾಗೂ ಸ್ಕೌಟ್ಸ್ & ಗೈಡ್ಸ್ ವತಿಯಿಂದ ಉಚಿತವಾಗಿ ಮಾಸ್ಕ್ ಬಿ.ಇ.ಓ ರವರ ಮೂಲಕ ವಿತರಿಸಲಾಗಿದೆ.
  • ಪ್ರತಿ ವಿದ್ಯಾರ್ಥಿ ಬ್ಯಾಗ್‍ನಲ್ಲಿ ನೀರಿನ ಬಾಟಲ್, ಆಹಾರವನ್ನು ತರಲು ಸೂಚಿಸಲಾಗಿದೆ.
  • ಸ್ಯಾನಿಟೈಸರ್ ಕೊಟ್ಟು, ಥರ್ಮಲ್ ಸ್ಕ್ಯಾನ್ ಮಾಡಿ ವಿದ್ಯಾರ್ಥಿಗಳನ್ನು ಕೊಠಡಿಗೆ ಕಳುಹಿಸಲು ಅಗತ್ಯ ಪ್ರಮಾಣದಲ್ಲಿ ಆರೋಗ್ಯ ಸಹಾಯಕರು ಹಾಗೂ ವೈದ್ಯರನ್ನು ನಿಯೋಜಿಸಲು ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.
  • ಪ್ರತಿ ಪರೀಕ್ಷಾ ಕೇಂದ್ರಗಳ ಸುತ್ತಲೂ 144 ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿ ಮಾಡಿರುತ್ತಾರೆ.
  • ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಸುರಕ್ಷಿತವಾಗಿ ಪರೀಕ್ಷೆ ನಡೆಯಲು ಸೂಕ್ತ ಪೋಲೀಸ್ ಬಂದೋಬಸ್ತ್ ಜಿಲ್ಲಾ ಪೋಲೀಸ್ ಇಲಾಖೆಯಿಂದ ಒದಗಿಸಲಾಗಿದ್ದು, ಶಾಂತಿ-ಸುವ್ಯವಸ್ಥೆಯಿಂದ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

Leave a Reply

Your email address will not be published.

You May Also Like

ಅಪ್ಪಾ.. ಅಪ್ಪಾ ಬೇಗ ಬಾ ಅಪ್ಪಾ ಎಂದ ಕಂದನನ್ನು ಮೊಬೈಲ್ ನಲ್ಲಿಯೇ ನೋಡಿ ಖುಷಿಪಟ್ಟ ವೈದ್ಯ

ಮಕ್ಕಳು ಅಪ್ಪನನ್ನು ನೋಡುತ್ತಲೇ ಅಪ್ಪಾ ಬೇಗ ಬಾ ಅಪ್ಪಾ ಎಂದು ಮಗು ಕೇಳಿಕೊಂಡಿದೆ. ನಿಜಕ್ಕೂ ವೈದ್ಯಕೀಯ ಸಿಬ್ಬಂಧಿಗಳ ಕಾರ್ಯ ಹಾಗೂ ತ್ಯಾಗ ಮಾತ್ರ ಪ್ರಶಂಸನೀಯ.

ರಾಜ್ಯದಲ್ಲಿಂದು 5324 ಕೊರೊನಾ ಪಾಸಿಟಿವ್, ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು 5324 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 101465 ಕ್ಕೆ ಏರಿಕೆಯಾದಂತಾಗಿದೆ.

ಯಾವ ಜಿಲ್ಲೆಯ ಪೊಲೀಸರಿಗೆ ಕೊರೊನಾ ಬರುವುದಿಲ್ಲವೋ ಆ ಜಿಲ್ಲೆಯೇ ಗ್ರೀನ್ ಜೋನ್!

ಕೊರೊನಾ ಸೋಂಕು ತಡೆಗಟ್ಟುವಲ್ಲಿ ಜಿಲ್ಲೆಯ ಪೊಲೀಸರು ಮಾದರಿಯಾಗಿದ್ದಾರೆ ಎಂದು ಡಿಜಿ – ಐಜಿಪಿ ಪ್ರವೀಣ್ ಸೂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಲೂಕಾ ಆರೋಗ್ಯ ರಕ್ಷಾ ಸಮಿತಿ ಸಭೆ ನಿರ್ಭಯದಿಂದ ಕಾರ್ಯ ನಿರ್ವಹಿಸಿ: ವೈದ್ಯರಿಗೆ ಶಾಸಕ ರಾಮಣ್ಣ ಅಭಯ

ಉತ್ತರಪ್ರಭ ಸುದ್ದಿಶಿರಹಟ್ಟಿ : ಪ್ರಸ್ತುತ ಕೊರೊನಾ ಸಮಯದಲ್ಲೂ ಹಲವಾರು ಸಮಸ್ಯೆಗಳನ್ನು ಎದುರಿಸಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು…