ಬೆಂಗಳೂರು: ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಿವೆ. ಆದ್ದರಿಂದ ಕೆಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಇಂದು ಮುಂದಿನ ನಡೆ ಕುರಿತು ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ‌. ಬೆಂಗಳೂರಿನಲ್ಲಿ ಕೊರೊನಾ ಚಿಕಿತ್ಸೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ಜೊತೆಗೆ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗಿವೆ. ಬೆಂಗಳೂರಿಗರಿಗೆ ಮತ್ತೊಂದು ಸೀಲ್ ಡೌನ್‌ ಬೇಡವೆಂದಾದಲ್ಲಿ, ಜನ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಮತ್ತು ಸ್ಯಾನಿಟೈಜರ್ ಬಳಸಬೇಕು ಎಂದು ನಾನು ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.

Leave a Reply

Your email address will not be published. Required fields are marked *

You May Also Like

ಬೆಳಿಗ್ಗೆ ಅಪ್ಪನ ಸಾವಿನ ದುರಂತ: ಗದಗನಲ್ಲಿ ಎಸ್.ಎಸ್.ಎಲ್.ಸಿ ಅಗ್ನಿ ಪರಿಕ್ಷೆ ಎದುರಿಸಿದ ಅನುಷಾ!

ಗದಗ: ಮುಂಜಾನೆ ಮರಳಿ ಬಾರದ ಲೋಕಕ್ಕೆ ಅಪ್ಪ ಹೋಗಿದ್ದಾನೆ. ಮನೆ ತುಂಬ ದು:ಖದ ವಾತಾವರಣ. ನೆರೆಹೊರೆಯವರು, ಸಂಬಂಧಿಕರು ಜಮಾಯಿಸುತ್ತಿದ್ದಾರೆ. ಈ ದುಗೂಡದಲ್ಲಿಯೂ ಗದಗಿನ ಈಶ್ವರ ನಗರದ ನಿವಾಸಿ, ತೋಂಟದಾರ್ಯ ಪ್ರೌಢ ಶಾಲೆಯ ವಿದ್ಯಾರ್ಥಿನಿ 16ರ ಬಾಲಕಿ ಪಾಲಿಗೆ ಇವತ್ತಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಕೇವಲ ಪರೀಕ್ಷೆ ಆಗಿರಲಿಲ್ಲ. ಇದು ಅಗ್ನಿ ಪರೀಕ್ಷೆ, ಧರ್ಮ ಪರೀಕ್ಷೆ.

ವಿನಯ್ ಕುಲಕರ್ಣಿ, ಎಂ.ಬಿ.ಪಾಟೀಲ್ ಬಿಜೆಪಿ ಸೇರ್ಪಡೆ ವಿಚಾರ ಪಕ್ಷದಲ್ಲಿ ಚರ್ಚೆ ನಡೆದಿಲ್ಲ

ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಎಂ.ಬಿ ಪಾಟೀಲ್ ಬಿಜೆಪಿ ಸೇರ್ಪಡೆ ವಿಚಾರ ಕುರಿತು ನಮ್ಮ ಪಕ್ಷದಲ್ಲಿ ಈ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಜಗದೀಶ್ ಶೆಟ್ಟರ್ ಹಾಗೂ ನನ್ನ ಜೊತೆ ಯಾವುದೇ ನಾಯಕರು ಮಾತನಾಡಿಲ್ಲ. ನಮ್ಮ ಜೊತೆ ಚರ್ಚಿಸದೆ ಹೇಗೆ ಅವರನ್ನು ಪಕ್ಷಕ್ಕೆ ಕರೆದುಕೊಳ್ಳಲು ಸಾದ್ಯವೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.

ಜಕ್ಕಲಿ ಗ್ರಾಮದಲ್ಲಿ ಪಲ್ಸ್ ಪೋಲಿಯೋ ಜಾಗೃತಿ ಜಾಥಾ

ಜಕ್ಕಲಿ ಗ್ರಾಮದ ಎಸ್ಎಜೆಡಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಪಲ್ಸ್ ಪೋಲಿಯೋ ದಿನಾಚರಣೆ ಅಂಗವಾಗಿ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಊರಿನ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ಕೈಗೊಂಡರು.

ಅಂದರ್ ಬಾಹರ್: ಪೋಲಿಸರ್ ಕಾರ್ಯಾಚರಣೆ : 14 ಲಕ್ಷ ರೂ. ಜಪ್ತಿ, 17 ಜನರ ಮೇಲೆ ಪ್ರಕರಣ ದಾಖಲು, ಸರ್ಕಾರಿ ನೌಕರ ಭಾಗಿ

ಉತ್ತರಪ್ರಭ ಮುಂಡರಗಿ: ಗದಗ ಪೊಲೀಸರು ಅಂದರ್ ಬಾಹರ್ ಅಡ್ಡೆ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲಕ್ಷಾಂತರ…