ಬೆಂಗಳೂರು : ಲಾಕ್ ಡೌನ್ ಇದ್ದರೂ ಅಭಿಮಾನಿಗಳೊಂದಿಗೆ ತಮ್ಮ ಒಡನಾಟ ಇಟ್ಟುಕೊಂಡಿರುವ ನಟಿ ಸಂಯುಕ್ತಾ ಹೆಗ್ಡೆ ಒಳ್ಳೆಯ ಚಿತ್ರ ಸಿಕ್ಕರೆ ಕನ್ನಡದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೃತ್ಯ ಕೌಶಲ್ಯ, ವ್ಯಾಯಾಮ ಅಥವಾ ಇತರ ಆಸಕ್ತಿದಾಯಕ ಚಟುವಟಿಕೆಗಳಿಂದ ಸಂಚಲನ ಮೂಡಿಸುತ್ತಿದ್ದಾರೆ. ವರ್ಕ್ ಹಾಗೂ ಜಿಮ್ ಅನ್ನು ತಪ್ಪಿಸಿಕೊಳ್ಳುತ್ತಿದ್ದೇನೆ. ಆದರೆ ಡ್ಯಾನ್ಸ್ ಮಾತ್ರ ಎಂದಿಗೂ ನಿಲ್ಲಿಸಿಲ್ಲ. ಹೊಸ ಹೊಸ ಬಗೆಯ ಪ್ರಕಾರಗಳಿಗೆ ತನ್ನನ್ನು ತೆರೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ನಾನು ಬರೆಯುವುದನ್ನು ಹಾಗೂ ಅಡುಗೆ ಮಾಡುವುದನ್ನು ಕಲಿಯುತ್ತಿದ್ದೇನೆ. ಆಕ್ಟಿಂಗ್ ಕ್ಲಾಸ್ ತೆಗೆದುಕೊಂಡಿದ್ದೆ. ಅಲ್ಲದೇ, ಹೆತ್ತವರೊಂದಿಗೆ ಸದ್ಯ ಸಮಯ ಕಳೆಯುತ್ತಿದ್ದೇನೆ. ಇದರಿಂದ ತುಂಬಾ ಖುಷಿಯಾಗಿದೆ ಎಂದು ಅವರು ಹೇಳಿದ್ದಾರೆ. 

ವಾಚ್ ಮ್ಯಾನ್, ಮತ್ತು ಜಯಂ ರವಿ ಎದುರು ನಟಿಸಿದ ಕೋಮಲಿ ಚಿತ್ರಗಳ ಮೂಲಕ ಸಂಯುಕ್ತ ಹೆಗ್ಡೆ ಕಾಲಿವುಡ್ ನಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಕೆಲವು ಸ್ಕ್ರಿಪ್ಟ್‌ಗಳ ಓದುವಿಕೆ ನಡೆದಿದೆ. ಆದರೆ ಯಾವುದೂ ಅಂತಿಮವಾಗಿಲ್ಲ ಎಂದು ಹೇಳಿದ್ದಾರೆ. 

ಒಬ್ಬ ನಟಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದ ಭಾಷೆಯಲ್ಲಿ ಬೆಳೆಯಲು ಇಷ್ಟಪಡುತ್ತೇನೆ. ಕನ್ನಡದ ಇತರ ನಟಿಯರಿಗಿಂತ ಹೆಚ್ಚು ಕನ್ನಡವನ್ನು ನಿರರ್ಗಳವಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

1 comment
Leave a Reply

Your email address will not be published. Required fields are marked *

You May Also Like

ರಾಷ್ಟಪತಿ ಭಾಷಣಕ್ಕೆ ಬಹಿಷ್ಕರಿಸಲು 16 ವಿಪಕ್ಷಗಳಿಂದ ನಿರ್ಧಾರ

ನಾಳೆಯಿಂದ ಅಧಿವೇಶನ ಸಂಸತ್‌ ಬಜೆಟ್‌ ಆರಂಭವಾಗಲಿದ್ದು, ಕೇಂದ್ರದ ನೂತನ ಕೃಷಿ ಮಸೂದೆಗಳನ್ನ ವಿರೋಧಿಸಿ ರಾಷ್ಟ್ರಪತಿಗಳ ಭಾಷಣ ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ಗುಲಾಂ ನಬಿ ಹೇಳಿದ್ದಾರೆ.

ಮಾಸ್ಕ್ ಬಳಸದವರಿಗೆ ವಿಧಿಸಲಾಗಿದ್ದ ದಂಡ ಪ್ರಮಾಣದಲ್ಲಿ ಇಳಿಕೆ

ಕೋವಿಡ್ 19 ಸೋಂಕು ಕರ್ನಾಟಕದಲ್ಲಿ ಕಾಣಿಸಿಕೊಂಡ ದಿನದಿಂದ ಸರ್ಕಾರವು ಸೋಂಕನ್ನು ತಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಕಾಲಕಾಲಕ್ಕೆ ಕೇಂದ್ರದ ಮಾರ್ಗಸೂಚಿಗಳನ್ವಯ ರಾಜ್ಯದಲ್ಲಿಯೂ ಸಹ ಲಾಕ್ ಡೌನ್ ವಿಧಿಸುವುದರಲ್ಲದೆ, ಕಡ್ಡಾಯವಾಗಿ ಮಾಸ್ಕ ಬಳಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯಗೋಳಿಸಲಾಗಿದೆ.

ಶಿವಾಜಿನಗರದಲ್ಲಿ ಮತ್ತೆ 14 ಜನರಲ್ಲಿ ಕಂಡು ಬಂದ ಸೋಂಕು!

ಬೆಂಗಳೂರು: ಇಲ್ಲಿಯ ಶಿವಾಜಿನಗರದಲ್ಲಿ ಮತ್ತೆ 14 ಜನರಲ್ಲಿ ಸೋಂಕು ಇರುವುದು ಬೆಳಕಿಗೆ ಬಂದಿದೆ. ಹೌಸ್ ಕೀಪಿಂಗ್…