ಬೆಂಗಳೂರು : ನನ್ನ ಮಕ್ಕಳಿರುವ ಮನೆಯನ್ನು ದೇವರೇ ಕಾಪಾಡಬೇಕು ಎಂದು ನಟ ರವಿಶಂಕರ್ ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದೆ. ದಿನೇ ದಿನೇ ನಗರದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಸದ್ಯ ನಗರದಲ್ಲಿ ಸಮುದಾಯದ ಮಟ್ಟದಲ್ಲಿ ಸ್ಫೋಟಗೊಂಡಿದೆ. ಹೊಸ ಹೊಸ ಪ್ರದೇಶಗಳಿಗೆ ತನ್ನ ವ್ಯಾಪ್ತಿ ಹೆಚ್ಚಿಸುತ್ತಿದೆ. ಸದ್ಯ ನಟ ರವಿಶಂಕರ್ ಅವರ ಮನೆಯ ಮುಂದಿನ ಮನೆಗೆ ಬಂದಿದೆ. ಹೀಗಾಗಿ ಅವರಲ್ಲಿ ಆತಂಕ ಮನೆ ಮಾಡಿದೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ರವಿ ಶಂಕರ್, ನನ್ನ ಅಪಾರ್ಟ್ಮೆಂರಟ್ ನಲ್ಲಿ ನನ್ನ ಎದುರು ಮನೆಗೆ ಸೋಂಕು ವಕ್ಕರಿಸಿದೆ. ನನ್ನ ಮಕ್ಕಳಿರುವ ಮನೆಯನ್ನು ದೇವರೇ ಕಾಪಾಡಬೇಕು. ಕ್ವಾರಂಟೈನ್ ಮಾಡಿದ್ದಾರೆ ಬಾಗಿಲನ್ನು 14 ದಿನ ತೆರೆಯುವಂತಿಲ್ಲ. ಸುದೀಪ, ಗಣಪ, ಸೃಜನ್, ಮಕ್ಕಳನ್ನು ಕರೆದುಕೊಂಡು ನಮ್ಮನೆಗೆ ಬಾ ಅಂದರು. ಗೆಳೆತನ ಎಂದರೆ ಇದೆ ಅಲ್ಲವೆ. ನಮ್ಮ ಬಗ್ಗೆ ವಿಚಾರಿಸಿದ ಸಂತೋಷ್ ಆನಂದ್, ರಘುರಾಮ್ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕೊರೊನಾ ಸೋಂಕು ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಈ ವಿಚಾರವಾಗಿ ಬುಧವಾರವಷ್ಟೇ ಟ್ವೀಟ್ ಮಾಡಿದ್ದ ವಿಜಯಲಕ್ಷ್ಮಿ, ನನಗೆ ಕೊರೊನಾ ಸೋಂಕು ಇಲ್ಲ. ಇದು ಸುಳ್ಳು ಸುದ್ದಿ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

You May Also Like

ಕೊರೋನಾ ಚಿಕಿತ್ಸೆಗೆ ಆಶಾದಾಯಕ ಆಯುರ್ವೇದ ಮಾತ್ರೆ?

ಬೆಂಗಳೂರು: ಕೋವಿಡ್-19 ಸೋಂಕಿನಿಂದ ಗುಣಪಡಿಸಲು ಬೆಂಗಳೂರಿನ ಆಯುರ್ವೇದ ವೈದ್ಯರೊಬ್ಬರು ಸಣ್ಣದೊಂದು ಹೆಜ್ಜೆ ಇಟ್ಟಿದ್ದಾರೆ. ಭೌಮ್ಯ ಮತ್ತು…

ಖಾಸಗಿ ಶಾಲಾ ಶಿಕ್ಷಕರ ಗೋಳು ಕೇಳುವವರು ಯಾರು?: ಶಿಕ್ಷಕರ ಸಮಸ್ಯೆಗೆ ಸ್ಪಂದಿಸಬೇಕಿದೆ ಸರ್ಕಾರ

ಲಾಕ್ ಡೌನ್ ಹಿನ್ನೆಲೆ ಜೂನ್ 1 ಕ್ಕೆ ಆರಂಭವಾಗಬೇಕಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಈವರೆಗೆ ಆರಂಭವಾಗಿಲ್ಲ. ಇದರಿಂದ ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ತೀವ್ರ ತೊಂದರೆಗೀಡಾಗಿದ್ದಾರೆ.

ನಾಪತ್ತೆಯಾಗಿದ್ದ ಸೋಂಕಿತ ವ್ಯಕ್ತಿ ಪತ್ತೆಯಾಗಿದ್ದು ಎಲ್ಲಿ ಗೊತ್ತಾ?

ಕೋಲಾರ : ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6ಕ್ಕೇರಿದೆ. ಸೋಂಕಿತ ಕೋರ್ಟ್ ಉದ್ಯೋಗಿಯ ಟ್ರಾವಲ್ ಹಿಸ್ಟರಿ ಮೂರು…

ಗುರುವಾರ ವಿದ್ಯುತ್ ನಿಲುಗಡೆ

ಗದಗ: 110 ಕೆವ್ಹಿ ಗದಗ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಪರಿವರ್ತಕ-1 ಹಾಗೂ ಪರಿವರ್ತಕ-2 ರ…