ಲಾಕ್ ಡೌನ್ ಹಿನ್ನೆಲೆ ಜೂನ್ 1 ಕ್ಕೆ ಆರಂಭವಾಗಬೇಕಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಈವರೆಗೆ ಆರಂಭವಾಗಿಲ್ಲ. ಇದರಿಂದ ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ತೀವ್ರ ತೊಂದರೆಗೀಡಾಗಿದ್ದಾರೆ. ತಮ್ಮ ಸಂಕಷ್ಟವನ್ನು ಹೇಳಿಕೊಂಡ ಶಿಕ್ಷಕಿಯರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಮಗೂ ಕೂಡ ಸಹಾಯ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜೊತೆಗೆ ಮಾದ್ಯಮಗಳು ತಮ್ಮನ್ನು ಕಾಣುವ ರೀತಿಯ ಬಗ್ಗೆಯೂ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಖಾಸಗಿ ಶಾಲಾಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಗೋಳುಗಳನ್ನು ಹೇಳಿಮುಗಿಸಲು ಸಾಧ್ಯವಿಲ್ಲ. ಅದರಲ್ಲೂ ಕೊರೊನಾ ನಂತರದ ಅವರ ಪರಿಸ್ಥಿತಿ ಶೋಚನೀಯ ಹಂತ ತಲುಪಿದೆ. ಆದರೆ, ಇವರ ಸಮಸ್ಯೆಗಳ ಕುರಿತು ಗಮನ ಹರಿಸಬೇಕಿದ್ದ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್, ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಮೌನಕ್ಕೆ ಶರಣಾಗಿದ್ದಾರೆ. ಇವರ ಸಮಸ್ಯೆಯನ್ನು ಆಲಿಸುವವರು ಯಾರು ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ಶಿಕ್ಷಕಿಯೊಬ್ಬರು ಖಾಸಗಿ ಶಾಲಾಕಾಲೇಜುಗಳಲ್ಲಿ ನಿರ್ವಹಿಸುತ್ತಿರುವವರ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ. ಇವರ
ಗೋಳು ಸರ್ಕಾರ, ಅಧಿಕಾರಿಗಳು, ಶಿಕ್ಷಣ ಇಲಾಖೆಗೆ ಶೀಘ್ರದಲ್ಲೇ ಮುಟ್ಟಬೇಕಿದೆ. ವಿಡಿಯೋದಲ್ಲಿ ಮಾಧ್ಯಮಗಳು ಎಲ್ಲದಕ್ಕೂ ಕೊಟ್ಟ ಮಾನ್ಯತೆಯ ಜೊತೆಗೆ, ನಮ್ಮ ಸಮಸ್ಯೆಗಳನ್ನು ಕುರಿತು ಏಕೆ ಬೆಳಕು ಚೆಲ್ಲುತ್ತಿಲ್ಲ? ಎಂದು ಪ್ರಶ್ನಿಸಸಿದ್ದಾರೆ.