ಬೆಂಗಳೂರು : ಭೂಗತ ಪಾತಕಿ ರವಿ ಪೂಜಾರಿ ಕೃತ್ಯಗಳ ಕುರಿತು ತನಿಖೆ ನಡೆಸುತ್ತಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು, ಮುಂಬಯಿನ ಶಾರ್ಪ್‌ ಶೂಟರ್‌ ಯೂಸೂಫ್ ಚ್ಕಾನ್‌ನನ್ನು ವಶಕ್ಕೆ ಪಡೆದಿದ್ದಾರೆ.

ಪಾತಕ ಲೋಕದಲ್ಲಿ ಶಾರ್ಪ್‌ ಶೂಟರ್‌, ಭೂಗತ ಲೋಕದ ದೊರೆಗಳ ಏಜೆಂಟ್‌ ಎಂಬ ಕುಖ್ಯಾತಿ ಪಡೆದಿದ್ದಾನೆ. ಸದ್ಯ ಆತನ ಕೃತ್ಯಗಳ ಬಗ್ಗೆ ತನಿಖೆ ಮುಂದುವರಿಯಲಿದೆ.

2007ರಲ್ಲಿ ಮಂಗಳೂರಿನಲ್ಲಿ ನಡೆದ ಬಿಲ್ಡರ್‌ ಸುಬ್ಬರಾವು ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಯೂಸೂಫ್ ಗುರಿಯಾಗಿದ್ದಾನೆ. ರವಿ ಪೂಜಾರಿಯನ್ನು ವಿಚಾರಣೆ ನಡೆಸುತ್ತಿದ್ದಾಗ ಯೂಸೂಫ್ ಬಗ್ಗೆ ಬಾಯ್ಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ರವಿ ಪೂಜಾರಿ ನಡೆಸಿರಬಹುದಾದ ಇತರೆ ಕೃತ್ಯಗಳಲ್ಲಿ ಯೂಸೂಫ್ ಪಾತ್ರದ ಕುರಿತು ತನಿಖೆ ನಡೆಸಲು ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಬಾಲಿವುಡ್‌ ನಿರ್ಮಾಪಕ ನಿರ್ದೇಶಕರೊಬ್ಬರಿಗೆ ಕೊಲೆ ಬೆದರಿಕೆ, ಸುಲಿಗೆ ಸೇರಿ ಉದ್ಯಮಿಗಳ ಕೆಲವು ಕೊಲೆ, ಸುಲಿಗೆ, ಜೀವ ಬೆದರಿಕೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ಹಿರಿಯ ಪೊಲೀಸ್‌ ಆಧಿಕಾರಿಯೊಬ್ಬರು ತಿಳಿಸಿದರು.

Leave a Reply

Your email address will not be published. Required fields are marked *

You May Also Like

ಜೇನುಹುಳುಗಳಂತೆ ಬಂದ ಕುರುಬರು

ನಗರದ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ (ಬಿಐಇಸಿ) ಆವರಣ ಭಾನುವಾರ ಕುರುಬರ ಶಕ್ತಿ ಪ್ರದರ್ಶನ ಕೇಂದ್ರದಂತೆ ಕಾಣುತ್ತಿತ್ತು. ರಾಜ್ಯದ ಮೂಲೆ-ಮೂಲೆಯಿಂದ ಜನಸಾಗರ ಸಮಾವೇಶಕ್ಕೆ ಹರಿದು ಬಂದಿತ್ತು.

ಭಾರತ ಮನು ಕುಲದ ಒಳಿತಿಗಾಗಿ ಶ್ರಮಿಸುತ್ತಿದೆ – ಮೋದಿ

ಇಂದು ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ.

ಗದಗ ಜಿಲ್ಲೆಗೂ ಒಂದು ವಾರದ ಲಾಕ್ಡೌನ್?

ಸಿಎಂ ಯಡಿಯೂರಪ್ಪ ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡೀಯೋ ಸಂವಾದ ನಡೆಸುತ್ತಿದ್ದಾರೆ. ಅಭಿಪ್ರಾಯ ಆಧರಿಸಿ ಲಾಕ್ ಡೌನ್ ಜಾರಿ ಮಾಡಬಹುದು ಎನ್ನಲಾಗಿದೆ.

ಶಿರಹಟ್ಟಿ ಕಟ್ಟಿಗೆ ಅಡ್ಡೆ ಪ್ರಕರಣ: ಅರಣ್ಯ ಇಲಾಖೆ ಕಣ್ಣಿದ್ದು ಕುರುಡಾಯಿತೆ?

ಗದಗ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಾಂತ ನಡೆಯುತ್ತಿರುವ ಸಾ-ಮಿಲ್ಗಳಿಗೆ ಯಾವುದೇ ಪರವಾನಿಗೆ ಇಲ್ಲದೆ ರಾಜಾರೋಷವಾಗಿ ಕಟ್ಟಿಗೆ ವ್ಯಾಪಾರ…