ಉತ್ತರಪ್ರಬ ಸುದ್ದಿ
ಗದಗ:
ಬಗರ್ ಹುಕುಮ ಸಾಗುವಳಿದಾರರು, ಅರಣ್ಯ ಹಕ್ಕು ಅಧಿನಿಯಮದಡಿಯಲ್ಲಿ, ಗದಗ ಜಿಲ್ಲೆಯ ಲಕ್ಷ್ಮೇಶ್ವರ, ಶಿರಹಟ್ಟಿ, ರೋಣ, ಮುಂಡರಗಿ, ಹಾಗೂ ಜಿಲ್ಲೆಯ ಇತರೆ ತಾಲೂಕಿನ ಅರ್ಜಿಗಳನ್ನು ಜಿಲ್ಲಾಡಳಿತ ತಿರಸ್ಕರಿಸಿದ್ದನ್ನು ಖಂಡಿಸಿ ಶಿರಹಟ್ಟಿ ತಾಲೂಕ ದೇವಿಹಾಳ ಗ್ರಾಮದಿಂದ ಪಾದಯಾತ್ರೆ ಮೂಲಕ ಶಿರಹಟ್ಟಿ ತಹಶಿಲ್ದಾರ ಕಛೇರಿಯ ಎದುರುಗಡೆ ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷರಾದ ಶ್ರೀ ರವಿಕಾಂತ ಅಂಗಡಿಯವರ ನೇತ್ರುತ್ವದಲ್ಲಿ ಧರಣಿ ನಡೆಯಿತು. ಧರಣಿ ನಿರತ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿಗಳು ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲಾ, ಅರಣ್ಯ ಇಲಾಖೆಯಿಂದ ತಿರಸ್ಕ್ರುತ ಅರ್ಜಿಯನ್ನು ಮರು ಪರಿಶಿಲಿಸಲಾಗುತ್ತದೆ ಯಾವುದೇ ಕಾರಣಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ಮನವಿ ಮಾಡಿದ ನಂತರ ಧರಣಿಯನ್ನು ಕೈಬಿಡಲಾಗಿತ್ತು. ಜಿಲ್ಲಾ ಆಡಳಿತದ ಆದೇಶವನ್ನು ಪರಿಗಣೆಗೆ ತೆಗೆದು ಕೊಳ್ಳದೆ ಬಡ, ನಿರ್ಗತಿಕ ರೈತರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಲು ನಿರಂತರವಾಗಿ ನೋಟಿಸ್ ನೀಡುತ್ತಿದ್ದಾರೆ ಇದರಿಂದ ಬಡ ರೈತರರಿಗೆ ಬರಸಿಡುಲು ಬಡಿದಂತಾಗಿದೆ ನಿರಂತರವಾಗಿ ಜನರಪರ, ಕಪ್ಪತ್ತ ಗುಡ್ಡ ಉಳಿವಿಗಾಗಿ ಹೋರಾಟ ಮಾಡುತ್ತಾ ಬಂದಿರುವ ಉತ್ತರ ಕರ್ನಾಟಕ ಮಹಾ ಸಭಾ ಅಧ್ಯಕ್ಷರಾದ ಶ್ರೀ ರವಿಕಾಂತ ಅಂಗಡಿಯವರು ಇಂದು ಹಿರಿಯ ನಾಯಕರು ಗದಗ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾನ್ಯ ಮಾಜಿ ಸಚಿವರಾದ ಶ್ರೀ ಹೆಚ್. ಕೆ. ಪಾಟೀಲರನ್ನು ಬೇಟಿಯಾಗಿ ಚರ್ಚಿಸಿದರು.

ಸದರಿ ವಿಚಾರವನ್ನು ಚರ್ಚಿಸಿದ ನಂತರ ಹೆಚ್. ಕೆ. ಪಾಟೀಲರು, ಜಿಲ್ಲಾ ಅರಣ್ಯ ಅಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾತನಾಡಿ, ಯಾವುದೆ ಕಾರಣಕ್ಕೂ ಬಡ ರೈತರಿಗೆ ತೊಂದರೆಯಾಗದoತೆ, ಅವರನ್ನ ಒಕ್ಕಲೆಬ್ಬಿಸಬಾರದೆಂದು ಮತ್ತು ಅವರ ಅರ್ಜಿಗಳನ್ನು ಪುನರ್ ಪರಿಶೀಲನೆ ಮಾಡಿ ಹಕ್ಕು ಪತ್ರಗಳನ್ನು ನಿಡಬೆಕೆಂದು ಸೂಚಿಸಿದರು ಮತ್ತು ರೈತರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಠಾಕುರ ಜಾದವ ಬೇಳದಡಿ ಸೇರಿದಂತೆ ಜಿಲ್ಲೆಯ ಅನೇಕ ಬಗರ್ ಹುಕುಮ್ ಸಾಗುವಳಿ ರೈತರು ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *

You May Also Like

ಪತ್ನಿ ಕೊಂದ ಸೈಕೋ ಪತಿ..!!

ಬೆಂಗಳೂರು: ಪತ್ನಿಯನ್ನು ಕೊಂದು ಎರಡು ದಿನಗಳ ಕಾಲ ಹೆಣವನ್ನು ಮನೆಯಲ್ಲಿಯೇ ಇಟ್ಟುಕೊಂಡು, ಆ ನಂತರ ಪತಿ…

1xbet вход: Актуальное Зеркало 1хбет Денга

Онлайн Казино 1xbet официальному Сайт Зеркало: Регистрация И Вход, Скачать 1хбет Что…

ಕೋವಿಡ್ ಲಸಿಕೆ ಪಡೆದ ಜಿ.ಎಸ್.ಪಾಟೀಲ

ಭೀಮಸೇನ್ ಜೋಶಿ ಆಸ್ಪತ್ರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಎಸ್.ಪಾಟೀಲ ಕೋವಿಡ್ ಲಸಿಕೆ ಹಾಕಿಸಿಕೊಂಡರು.

ಯುವಕರಲ್ಲಿ ಆತ್ಮಸ್ಥೈರ್ಯ ಕುಗ್ಗಿಸಿದ ಬಿಜೆಪಿ : ರಾಮಕೃಷ್ಣ ದೊಡ್ಡಮನಿ

ಈಗಿನ ಯುವಕರಲ್ಲಿ ಆತ್ಮಸ್ಥೆರ್ಯ ಕುಗ್ಗಿಹೋಗಿದೆ. ಅವರಲ್ಲಿ ಆತ್ಮಸ್ಥೆರ್ಯ ತುಂಬಿದರೆ ನೀರುದ್ಯೋಗದ ಸಮಸ್ಯೆ ಬಗೆಹರಿಸಬಹುದಾಗಿತ್ತು. ಆದರೆ ಬಿಜೆಪಿಯವರು ಇವು ಯಾವುದೆ ಕೆಲಸ ಮಾಡಿಲ್ಲ ಅನೇಕ ಯುವಕರು ನೀರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಎದುರಿಸುತ್ತಿದ್ದಾರೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.