ಬಾಗಲಕೋಟೆ: ಕ್ಷೇತ್ರದ ಶಾಸಕ ಡಾ:ವೀರಣ್ಣ ಚರಂತಿಮಠ ತಾಲ್ಲೂಕಿನ ಬೇವೂರು ಹಾಗೂ ಬೆನಕಟ್ಟಿ ಗ್ರಾಮಗಳಲ್ಲಿ ಸೋಮವಾರ 10 ಕೋಟಿ, 17 ಲಕ್ಷ ರೂ.ಗಳ ವೆಚ್ಚದ ರಸ್ತೆ ಅಭಿವೃದ್ಧಿ ಹಾಗೂ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿ ಗಳಿಗೆ ಚಾಲನೆ ನೀಡಿದರು.
ಬೆನಕಟ್ಟಿ ಗ್ರಾಮದಲ್ಲಿ ಬೆನಕಟ್ಟಿ- ಶಿರೂರ ನಡುವಿನ ಜಿಲ್ಲಾ ಮುಖ್ಯ ರಸ್ತೆಯ 6 ಕಿ.ಮೀ ರಸ್ತೆ ಸುಧಾರಣೆ, ಡಾಂಬರೀಕರಣದ 5 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನರೆವೇರಿಸಿದರು.
ಬೇವೂರಿನಲ್ಲಿ ಬೂದಿಹಾಳ ಬೋಡನಾಯಕದಿನ್ನಿ ಕ್ರಾಸ್ ವರೆಗಿನ ಜಿಲ್ಲಾ ಮುಖ್ಯ ರಸ್ತೆಯ 4,75 ಕಿ.ಮೀ ರಸ್ತೆ ಸುಧಾರಣೆ ಕಾಮಗಾರಿ 5 ಕೋಟಿ ರೂ. ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲಾಗುವ 12 ಲಕ್ಷ ರೂ.ಗಳ ವೆಚ್ಚದ ಬಾಬು ಜಗಜೀವನ ರಾಮ್ ಸಮುದಾಯ ಭವನ ಮತ್ತು ಶಾಸಕರ ಅನುದಾನದ 5 ಲಕ್ಷ ರೂ. ಗಳ ವೆಚ್ಚದ ಭರಮಣ್ಣನ ಗುಡಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಸಿ.ಆರ್.ಪರನಗೌಡ್ರ, ಸದಸ್ಯರುಗಳಾದ ನಿಂಗಪ್ಪ ಮಾಗನೂರ,ರಾಜಶೇಖರ ಅಂಗಡಿ, ಬೆನಕಟ್ಟಿ ಗ್ರಾಪಂ ಅಧ್ಯಕ್ಷ ರೇವಣ್ಣ ಆಲೂರ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಸುರೇಶ್ ಕೊಣ್ಣೂರ, ಸಂಗಮೇಶ ಹಿತ್ತಲಮನಿ ಹಾಗೂ ಪಿಡಬ್ಲುಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಈಶ್ವರ ಕುರಬಗಟ್ಟಿ, ಎನ್.ಜಿ.ಪಾಟೀಲ, ಗುತ್ತಿಗೆದಾರರಾದ ಸಿ.ಕೆ.ಒಂಟಿಗೋಡಿ,ಎನ್.ಆರ.ಕುಲಕರ್ಣಿ, ಗ್ರಾಪಂ ಕಾರ್ಯದರ್ಶಿ ಆರ್.ವೈ.ಅಪ್ಪನ್ನವರು, ಗ್ರಾಮದ ಬಿಜೆಪಿಯ ನಾಯಕರು ಮತ್ತು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿಂದು ನಿಲ್ಲದ ಕೊರೊನಾ ಸಂಚಾರ: ಇಂದು ಮತ್ತೆ 61 ಕೊರೊನಾ ಪಾಸಿಟಿವ್!

ಜಿಲ್ಲೆಯಲ್ಲಿಂದು ಕೂಡ 61 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಈವರೆಗೆ 1004 ಸೋಂಕಿತರು ಪತ್ತೆಯಾದಂತಾಗಿದೆ. ಇಂದು 26 ಜನ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡ

ಹಳ್ಳದ ರಭಸಕ್ಕೆ ಕೊಚ್ಚಿ ಹೋದ ಯುವಕ

ಪ್ರವಾಹಕ್ಕೆ ಸಿಲುಕಿದವರ ರಕ್ಷಣೆ ವೇಳೆ ಹಗ್ಗ ತುಂಡಾಗಿ ವ್ಯಕ್ತಿಯೋರ್ವ ಹಳ್ಳದಲ್ಲಿ ಕೊಚ್ಚಿಹೋದ ಘಟನೆ ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ನಡೆದಿದೆ. ಪಟ್ಟಣದ ಹಿರೇಹಳ್ಳದ ಪ್ರವಾಹಕ್ಕೆ ಸಿಲುಕಿದವರ ರಕ್ಷಣೆ ವೇಳೆಯಲ್ಲಿ ಹಗ್ಗ ತುಂಡಾಗಿದೆ. ಭಾರಿ ಮಳೆಯಿಂದಾಗಿ ಮಸ್ಕಿ ಜಲಾಶಯ ಭರ್ತಿ ಆಗಿದೆ. ಹೀಗಾಗಿ ಜಲಾಶಯದ ನೀರು ಹಳ್ಳಕ್ಕೆ ಬಿಡಲಾಗಿತ್ತು. ಬೆಳಗಿನ ವೇಳೆ ಶೌಚಕ್ಕೆ ತೆರಳಿದ ಯುವಕರು ಹಳ್ಳದ ನಡುಗಡ್ಡೆಯಲ್ಲಿ ಸಿಲುಕಿದ್ದರು.

ನಿವೃತ್ತ ಪ್ರಾಚಾರ್ಯ ಡಿ.ಡಿ. ಕಡೇಮನಿ ನಿಧನ

ಗದಗ: ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರು ಮತ್ತು ನೆಲ್ಸನ್…

ಗದಗ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ನಡೆಯುವ ಗ್ರಾಪಂ ಚುನಾವಣೆ ವಿವರ

ರಾಜ್ಯ ಚುನಾವಣಾ ಆಯೋಗವು ರಾಜ್ಯದ 30 ಜಿಲ್ಲೆಗಳಲ್ಲಿನ ಒಟ್ಟು 6004 ಗ್ರಾಮ ಪಂಚಾಯತಿಗಳಲ್ಲಿ ಅವಧಿ ಮುಕ್ತಾಯವಾಗದ 162 ಗ್ರಾಮ ಪಂಚಾಯತಿಗಳು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವ 6 ಗ್ರಾಮ ಪಂಚಾಯತಿಗಳು ಮತ್ತು 33 ಗ್ರಾಮ ಪಂಚಾಯತಿಗಳು ಪೂರ್ಣವಾಗಿ ಹಾಗೂ 41 ಗ್ರಾಮ ಪಂಚಾಯತಿಗಳು ಬಹುಶಃ ನಗರ ಸ್ಥಳೀಯ ಸಂಸ್ಥೆಗೆ ಸೇರ್ಪಡೆಯಾಗಿರುವುದರಿಂದ ಒಟ್ಟು 74 ಗ್ರಾಮ ಪಂಚಾಯತಿಗಳು ಒಟ್ಟಾರೆ 242 ಗ್ರಾಮ ಪಂಚಾಯತಿಗಳನ್ನು ಹೊರತು ಪಡೆಸಿ ಉಳಿದ ಎಲ್ಲ 5762 ಗ್ರಾಮ ಪಂಚಾಯತಿಗಳ 35,884 ಕ್ಷೇತ್ರಗಳಿಂದ ಒಟ್ಟು 92121 ಸ್ಥಾನಗಳಿಗೆ ಈ ಕೆಳಕಂಡ ವೇಳಾ ಪಟ್ಟಿಯಂತೆ ಚುನಾವಣೆ ನಡೆಸಲಾಗುವುದು.