ಶ್ರೀನಗರ : ಲಡಾಖ್ ನಲ್ಲಿ ಚೀನಾ ಸಂಘರ್ಷ ನಡೆಸುತ್ತಿದ್ದರೆ, ಇನ್ನೊಂದೆಡೆ ಪಾಕ್ ತನ್ನ ಉಪಟಳ ಮುಂದುವರೆಸಿದೆ. ಗಡಿ ಉಲ್ಲಂಘಿಸಿ ಬಂದ ಪಾಕಿಸ್ತಾನ ಸೇನಾ ಯೋಧರು ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಇಂದು ಬೆಳಿಗ್ಗೆ ಪಾಕ್ ಸೈನಿಕರು ಗಡಿ ನಿಯಂತ್ರಣ ರೇಖೆಯ ಪೂಂಚ್ ಜಿಲ್ಲೆಯ ರಜೌರಿ ನೌಶೆರಾ ವಲಯದಲ್ಲಿ ಮತ್ತು ಕತೌ ಜಿಲ್ಲೆಯ ಐಬಿ ವಲಯದಲ್ಲಿ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ದಾಳಿ ನಡೆಸಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಗಡಿ ನಿಯಂತ್ರಣ ರೇಖೆಯ ಹತ್ತಿರ ನೌಶೆರಾ ವಲಯದ ಪ್ರದೇಶದಲ್ಲಿ ಕಾವಲು ಕಾಯುತ್ತಿದ್ದ ಸೇನಾ ಯೋಧ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡರು. ನಂತರ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಮಧ್ಯೆಯೇ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

You May Also Like

ಉತ್ತರಪ್ರದೇಶ: ಕಂಡವರ ಮನೆಗೆ ಕೇಸರಿ ಬಳಿದ ಮನೆಹಾಳರು

ಯೋಗಿ ಆದಿತ್ಯನಾಥರ ಆಡಳಿತದಲ್ಲಿ ಉತ್ತರಪ್ರದೇಶ ‘ಜಂಗಲ್ ನ್ಯಾಯ’ ಕಡೆ ಮುಖ ಮಾಡುತ್ತಿದೆಯೇ? ನಗರವೊಂದರ ಏರಿಯಾದ ಎಲ್ಲ ಮನೆಗಳ ಹೊರ ಗೋಡೆಗಳಿಗೆ ಕೆಲವು ಮನೆಹಾಳರು ಆ ಮನೆಯವರ ವಿರೋಧ ಲೆಕ್ಕಿಸದೇ ಕೇಸರಿ ಬಣ್ಣ ಬಳಿದು ವಿಕಾರಗೊಳಿಸಿದ್ದಾರೆ.

ಸ್ಪಾ ಹೆಸರಿನಲ್ಲಿ ಸೆಕ್ಸ್ ದಂಧೆ…ಗ್ರಾಹಕರ ವೇಷದಲ್ಲಿ ಹೋಗಿದ್ದ ಪೊಲೀಸರಿಗೆ ಶಾಕ್!

ಜೈಪುರ : ಸ್ಪಾ, ಮಸಾಜ್ ಶಾಪ್ ಗೆ ದಾಳಿ ಮಾಡಿದ ಪೊಲೀಸರು, ವೇಶ್ಯಾವಾಟಿಕೆಯ ಜಾಲ ಬಯಲಿಗೆ ಎಳೆದಿದ್ದಾರೆ.

ಹಾವು ರಕ್ಷಕ ಡ್ಯಾನಿಯಲ್ ಗೆ ಕಚ್ವಿದ ಹಾವು: ಆಸ್ಪತ್ರೆಗೆ ದಾಖಲು

ಬಾಗಲಕೋಟೆ: ನಗರದ ಉರಗ ಪ್ರೇಮಿ ಹಾಗೂ ಹಾವು ರಕ್ಷಕ ಡ್ಯಾನಿಯಲ್ ನ್ಯೂಟನ್ ನಿಗೆ ಹಾವು ಕಚ್ಚಿದ್ದು…

ಕೊರೊನಾ ಮುಕ್ತಿ ಹೊಂದುವ ಕಾಲ ಬರಲಿದೆ…ಹೀಗಂತ ಈ ವೈದ್ಯ ಹೇಳಿದ್ದೇಕೆ?

ದುಬೈ : ಆಗತಾನೆ ಹುಟ್ಟಿದ ಮಗು ವೈದ್ಯರ ಮುಖದಲ್ಲಿದ್ದ ಮಾಸ್ಕ್ ಕಿತ್ತು ಹಾಕಿದೆ. ಈ ಫೋಟೋ ಸೆರೆ ಹಿಡಿದ ವೈದ್ಯರು, ಇನ್ನೇನು ಕೆಲವೇ ದಿನಗಳಲ್ಲಿ ಕೊರೊನಾ ತೊಲಗುವ ಸಂದೇಶ ಇದು ಎಂದು ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.