ಲಕ್ನೋ : ಸಿನಿಮಾನ ನಟನೊಬ್ಬ ತನ್ನ ಸಹಚರರೊಂದಿಗೆ ಸೇರಿಕೊಂಡು ಐಷಾರಾಮಿ ಕಾರುಗಳನ್ನೇ ಕದಿಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ರೂ. 5 ಕೋಟಿ ಮೌಲ್ಯದ 50 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮಾಹಿತಿ ನೀಡಿದ ಲಕ್ನೋ ಪೊಲೀಸ್ ಆಯುಕ್ತ ಸುಜಿತ್ ಪಾಂಡೆ, ಇಲ್ಲಿಯವರೆಗೆ 5 ಜನರನ್ನು ಮಾತ್ರ ಬಂಧಿಸಲಾಗಿದೆ. ಮುಖ್ಯ ಆರೋಪಿ ನಾಸಿರ್ ಖಾನ್ ಅಲಿಯಾಸ್ ಚೋತಿ ಅಮಿನಾಬಾದ್ ಪ್ರದೇಶದ ನಿವಾಸಿಯಾಗಿದ್ದು, ಮೂರು ಭೋಜ್ಪುನರಿ ಚಲನಚಿತ್ರಗಳಲ್ಲಿ ನಟಿಸಿದ್ದಾನೆ. ಈ ಪೈಕಿ ಒಂದು ಸಿನಿಮಾದಲ್ಲಿ ಪೊಲೀಸ್ ಇನ್ಸಪೆಕ್ಟರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

ನಾಸಿರ್ ಕದ್ದ ಕಾರುಗಳನ್ನು ಆನ್ಲೈ ನ್ ಮೂಲಕ ಮಾರಾಟ ಮಾಡುತ್ತಿದ್ದ. ಮತ್ತೋರ್ವ ಆರೋಪಿ ರಿಜ್ವಾನ್ (50) ಕಾರು ಕಳ್ಳತನದಿಂದ ಬಂದ ಹಣದಲ್ಲಿಯೇ ಬ್ಯಾಂಕಾಕ್ನಪಲ್ಲಿ ಹೊಟೇಲ್ ಖರೀದಿಸಿದ್ದಾನೆ. ಉಳಿದಂತೆ ಲಕ್ನೋ ಮೂಲದ ಆರೋಪಿ ಮೊಯಿನುದ್ದೀನ್ ಖಾನ್ ಮತ್ತು ವಿನಯ್ ತಲ್ವಾರ್, ಕಾನ್ಪುರದ ಶ್ಯಾಮ್ ಜಿ ಜೈಸ್ವಾಲ್ ಎಂದು ಗುರುತಿಸಲಾಗಿದೆ.

ಕಾರು ಕಳ್ಳತನದ ದಂಧೆಯಲ್ಲಿರುವ ಇತರ ಎಂಟು ಆರೋಪಿಗಳು ಪರಾರಿಯಾಗಿದ್ದಾರೆ. ಅವರು ಮೀರತ್, ಆಗ್ರಾ, ಮೊರಾದಾಬಾದ್, ದೆಹಲಿ ಮತ್ತು ಲಖಿಂಪುರ ಖೇರಿಗೆ ಸೇರಿದವರಾಗಿದ್ದಾರೆ.

Leave a Reply

Your email address will not be published. Required fields are marked *

You May Also Like

ಗೋಧ್ರಾ ಹತ್ಯಾಕಾಂಡ: 19 ವರ್ಷಗಳ ಬಳಿಕ ಪ್ರಮುಖ ಆರೋಪಿ ಬಂಧನ

ಗೋಧ್ರಾ ರೈಲು ಹತ್ಯಾಕಾಂಡದ ಪ್ರಮುಖ ಆರೋಪಿಯನ್ನು 19 ವರ್ಷಗಳ ಬಳಿಕ ಬಂಧಿಸಲಾಗಿದೆ. ಗೋಧ್ರಾ ನಗರದ ರಫೀಕ್ ಹುಸೇನ್ ಭಾತುಕ್ ಬಂಧಿತ ಆರೋಪಿ. ಈತನೇ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಪಂಚಮಹಲ್ ಪೊಲೀಸ್ ವರಿಷ್ಠಾಧಿಕಾರಿ ಲೀನಾ ಪಾಟೀಲ್ ತಿಳಿಸಿದ್ದಾರೆ.

ಪಂಚಾಯತಿ ಚುನಾವಣೆ: ಸರ್ಕಾರ ಎಲ್ಲವನ್ನು ಎಲ್ಲರನ್ನು ಕೇಳಿ ತೀರ್ಮಾನ ಕೈಗೊಳ್ಳಲು ಆಗಲ್ಲ

ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರ ಎಲ್ಲವನ್ನು ಎಲ್ಲರನ್ನು ಕೇಳಿ ತೀರ್ಮಾನ ಕೈಗೊಳ್ಳಲು ಆಗಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ಗದಗ ಜಿಲ್ಲೆಯ 48 ಕಂಟೈನ್ಮೆಂಟ್ ಝೋನ್ ಗಳ ವಿವರ

ಗದಗ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಬುಧವಾರದ ವರೆಗೆ…

ಕೋವಿಡ್ ಜ್ವರದಿಂದ ಬಳಲುತ್ತಿರುವ ಮಕ್ಕಳು!

ವಾಷಿಂಗ್ಟನ್‍: ಕೊರೊನಾ ವೈರಸ್‍ ಸಂಬಂಧಿತ ಜ್ವರದಿಂದ ಮಕ್ಕಳು ಬಳಲುತ್ತಿರುವ ಪ್ರಕರಣಗಳು ಅಮೆರಿಕದ ಕನಿಷ್ಠ 17 ರಾಜ್ಯಗಳಿಂದ…