ರಾಯಚೂರು: ಹೇಳಿಕೇಳಿ ಅತಿಥಿ ಉಪನ್ಯಾಸಕ ಅಂದರೆ ಸರ್ಕಾರಕ್ಕೆ ಬೇಕಾದಾಗ‌ ಮಾತ್ರ ಸೇವೆ ಸಲ್ಲಿಸುವವರು. ಇವರಿಗೆ‌ ಸಂಬಳವೂ ಕಡಿಮೆ. ಉನ್ನತ ವ್ಯಾಸಾಂಗ ಮಾಡಿ ಕಡಿಮೆ ಸಂಬಳದಲ್ಲಿ ಬದುಕು ಕಟ್ಟಿಕೊಂಡ ಅದೆಷ್ಟೋ ಅತಿಥಿ ಉಪನ್ಯಾಸಕರ ಬದುಕಿನಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆ. ಇದರಲ್ಲಿ ಈಗ ನಾವು ನಿಮಗೆ ಹೇಳ್ತಿರೋದು ರಾಯಚೂರು ಜಿಲ್ಲೆಯ ಅತಿಥಿ ಉಪನ್ಯಾಸಕ ಡಾ.ಅಮರೇಶರ ಅಳಲಿನ ಕಥೆ.
ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಅಂತಾರೆ. ಇದು ಅಮರೇಶ್ ಅವರ ಬದುಕಿಗೆ ಹೇಳಿ ಮಾಡಿಸಿದ ಗಾದೆಯಂತಿದೆ. ತನ್ನ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಮರೇಶ್ ಬದಕು ಬಂಡಿಯ ನೊಗ ಹೊರಲು ಆಗದೇ ಅಸಹಾಯಕರಾಗಿ ಕೈಚೆಲ್ಲಿ ಕುಳಿತಿದ್ದಾರೆ.

ಆರು ವರ್ಷದಿಂದ ಅತಿಥಿ ಉಪನ್ಯಾಸಕ ವೃತ್ತಿ
ಕಳೆದ ಆರು ವರ್ಷಗಳಿಂದ ಡಾ.ಅಮರೇಶ್ ಜಿಲ್ಲೆಯ ಲಿಂಗಸುಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಆಲ್ಕೋಡ್ ಗ್ರಾಮದ ಡಾ.ಅಮರೇಶ್ ಆಲ್ಕೋಡ್ ಕಳೆದ ಮೂರು ವರ್ಷಗಳಿಂದ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ.
ಅವರು ವಾರಕ್ಕೆ ಎರಡು ಸಾರಿ ಡಯಾಲಿಸಸ್ ಮಾಡಿಸಿಕೊಳ್ಳುತ್ತಿದ್ದು, ಡಯಾಲಿಸಸ್ ಮತ್ತು ಕಿಡ್ನಿಗಳ ಚಿಕಿತ್ಸೆಗಾಗಿ ಇದುವರೆಗೂ ಸುಮಾರು 15-20 ಲಕ್ಷ ರೂ. ಸಾಲಮಾಡಿ ಖರ್ಚು ಮಾಡಿಕೊಂಡಿದ್ದಾರೆ.

ಸಂಗಾತಿಯ ಆಸೆರೆಯೂ ಇಲ್ಲ
ತಮ್ಮ ಸ್ಥಿತಿ ಹೀಗಿದ್ದಾಗ ಮಡದಿಯಾದರೂ ಕುಟುಂನದ ನೊಗ ಹೊತ್ತು ಮಕ್ಕಳ ಪೋಷಣೆ ಮಾಡುತ್ತಾರೆ ಎನ್ನುವ ಸಮಾಧಾನ ಅಮರೇಶ್ ಅವರಲ್ಲಿತ್ತು. ಆದರೆ ವಿಧಿಯಾಟವೇ ಬೇರೆಯಾಗಿದೆ. ಕಳೆದ ತಿಂಗಳಷ್ಟೇ ಹೃದಯಾಘಾತದಿಂದ ಇವರ ಪತ್ನಿ ಮೃತಪಟ್ಟಿದ್ದಾರೆ. ಇದು ಅಮರೇಶ್ ಅವರಿಗೆ‌ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೇ ತಮ್ಮ ಚಿಕಿತ್ಸೆಗಾಗಿ ಸಾಕಷ್ಟು ಸಾಲದ ಹೊರೆ ಹೊತ್ತುಕೊಂಡ ಕಾರಣ ಹೆಂಡತಿಗೂ ಚಿಕಿತ್ಸೆ‌ ಕೊಡಿಸಲು ಅಮರೇಶ್ ಅವರಿಗೆ ಆಗಲಿಲ್ಲ. ಆರ್ಥಿಕ ಸ್ಥಿತಿಯಿಂದ ಹೆಂಡತಿಗೆ ಚಿಕಿತ್ಸೆ ಕೊಡಿಸಲು ಆಗಲಿಲ್ಲ.

ಉತ್ತರಪ್ರಭ ಕಳಕಳಿ

ಡಾ. ಅಮರೇಶ್ ಆಲ್ಕೋಡ್, ಎಸ್.ಬಿ.ಐ ಬ್ಯಾಂಕ್, ಸಿರವಾರ ಶಾಖೆ, ಖಾತೆ ಸಂಖ್ಯೆ 31090846274 ಐ.ಎಫ್.ಎಸ್.ಸಿ ಕೋಡ್: SBIN0011137 , ಮೊ. 6364056438‌ ಗೆ ಕರೆಮಾಡಿ ಧೈರ್ಯ ಹೇಳಿ ಕೈಲಾದ ಸಹಾಯ ಮಾಡಿ.

ಕಣ್ಣೆದುರಿಗೆ ಮಕ್ಕಳ ಭವಿಷ್ಯ
ಅಮರೇಶ್ ಅವರು ತಮ್ಮ ಮಕ್ಕಳಿಗೆ‌ ಮಡದಿ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ಬಹಳಷ್ಟಿತ್ತು. ಹೀಗಾಗಿ ಮೆಚ್ಚಿದ ಮಡದಿ ಸಾವನ್ನಪ್ಪಿದ ಮೇಲೆ ಮಕ್ಕಳ ಭವಿಷ್ಯ ಇವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಹೀಗಾಗಿ
ತನ್ನ ಮಕ್ಕಳ ಪಾಲನೆಗಾಗಿ ಮತ್ತು ತನ್ನ ಮುಂದಿನ ಜೀವನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವಿಡಿಯೋವೊಂದನ್ನು ಮಾಡಿರುವ ಇವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ ನಾರಾಯಣರವರಿಗೆ ವಿಡಿಯೋ ಮೂಲಕ ಕುಟುಂಬದ ನೋವನ್ನು ತಿಳಿಸಿದ್ದಾರೆ. ಅಲ್ಲದೇ ನೆರವು ನೀಡುವಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇವರ ಆರೋಗ್ಯ ದೃಷ್ಟಿಯಿಂದ ಹಾಗೂ ಇವರ ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರ ಇವರ ನೆರವಿಗೆ ಮುಂದಾಗಬೇಕಿದೆ. ಸರ್ಕಾರದ ಜೊತೆಗೆ ಸಂಘ-ಸಂಸ್ಥೆಗಳು ಹಾಗೂ ಸಹಾಯ ಮಾಡುವ ಮನಸ್ಸುಗಳು ಸಹಾಯ ಹಸ್ತ ಚಾಚಿದರೆ ಅಮರೇಶ್ ಅವರ ಅಳಲಿಗೆ ಸ್ಪಂದಿಸಿದಂತಾಗುತ್ತದೆ.

Leave a Reply

Your email address will not be published. Required fields are marked *

You May Also Like

ಶಿರಹಟ್ಟಿಯಲ್ಲಿ ಕಟ್ಟಿಗೆ ಅಡ್ಡೆಗಳ ದರ್ಬಾರಿಗೆ ಅನುಮತಿ ಕೊಟ್ಟವರು ಯಾರು..?

ನಿನ್ನೆಯಷ್ಟೆ ಕಟ್ಟಿಗೆ ಅಡ್ಡೆಗಳಿಂದ ಕೊರೊನಾ ಆತಂಕ ಎನ್ನುವ ಶಿರ್ಷಿಕೆಯಡಿ ವಿಶೇಷ ವರದಿಯನ್ನು ಉತ್ತರಪ್ರಭ ಪ್ರಕಟಿಸಿತ್ತು. ಆದರೆ ಇದರ ಆಳಕ್ಕಿಳಿದಾಗ ಗೊತ್ತಾಗಿದ್ದು, ಶಿರಹಟ್ಟಿಯಲ್ಲಿನ ಕಟ್ಟಿಗೆ ಅಡ್ಡೆಗಳಿಗೆ ಅನುಮತಿ ನೀಡಿದವರು ಯಾರು? ಎನ್ನುವ ಪ್ರಶ್ನೆ.

ಕಂಡಕ್ಟರ್, ಡ್ರೈವರ್ ಗಳನ್ನು ಟಾರ್ಗೇಟ್ ಮಾಡಿದ್ರಾ ಡಿಪೋ ಮ್ಯಾನೇಜರ್..?

ಇದೀಗ ಡಿಪೋ ಮ್ಯಾನೇಜರ್ ಬಸಪ್ಪ ಪೂಜಾರ್ ಅವರ ವರ್ತನೆ ಮತ್ತೊಂದು ಯಡವಟ್ಟಿಗೆ ಕಾರಣವಾಗಿದೆ. ನಿನ್ನೆ ಘಟನೆ ನಂತರ ಇದೀಗ ಸಿಬ್ಬಂಧಿಗಳನ್ನು ಡಿಪೋ ಮ್ಯಾನೇಜರ್ ಟಾರ್ಗೆಟ್ ಮಾಡಿದ್ದಾರೆಯೇ? ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಪದ್ಮಶ್ರೀ ಇಬ್ರಾಹಿಂ ಸುತಾರ್ ಇನ್ನಿಲ್ಲ

ಮಹಾಲಿಂಗಪುರ:ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಹೃದಯಾಘಾತದಿಂದ ಪದ್ಮಶ್ರೀ ಪುರಸ್ಕೃತ, ಸೂಫಿ ಸಂತ, ತತ್ವಪದ…

7 ವರ್ಷಗಳ ಹಿಂದೆ ಕಳ್ಳತನ ಮಾಡಿದವರ ಈಗ ಅಂದರ್!

ಧಾರವಾಡ : ಜಿಲ್ಲೆಯಲ್ಲಿ ಎರಡು ಪ್ರದೇಶಗಳಲ್ಲಿ 7 ವರ್ಷಗಳ ಹಿಂದೆ ಕಳ್ಳತನ ಮಾಡಿದ್ದ ವ್ಯಕ್ತಿಗೆ ಇಲ್ಲಿಯ 2ನೇ ಜೆಎಂಎಫ್ ಸಿ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.