ದೆಹಲಿ: ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ತನ್ನ ತೆಕ್ಕೆಗೆ ಎಳೆದುಕೊಂಡು ಜನರನ್ನು ಬಾಧಿಸುತ್ತಿರುವ ಕೊರೊನಾಗೆ ಗ್ಲೆನ್ ಮಾರ್ಕ್ ಸಂಸ್ಥೆ ಫ್ಯಾಬಿಫ್ಲೂ ಎಂಬ ಔಷಧಿಯನ್ನು ಪರಿಚಯಿಸಿದೆ.
ಕೊರೊನಾವನ್ನು ಹಿಮ್ಮೆಟ್ಟಿಸಲು ಜಾಗತಿಕ ಮಟ್ಟದಲ್ಲಿ ಅನೇಕ ಪ್ರಯತ್ನಗಳು ನಡೆದಿವೆ. ಇವುಗಳ ಪೈಕಿ ಭಾರತದಲ್ಲಿ ಉತ್ಪಾದನೆಯಾಗುವ ಹೈಡ್ರೋಕ್ಸಿಕ್ಲೋರಿಕ್ವಿನ್ ಕೊರೋನಾ ವೈರಸ್ ಚಿಕಿತ್ಸೆಗೆ ತುರ್ತಾಗಿ ಪರಿಣಾಮಕಾರಿ ಎನ್ನಲಾಗಿತ್ತು. ಆದರೆ, ಇದರಿಂದ ಯಾವುದೇ ಉಪಯುಕ್ತತೆ ಇಲ್ಲ ಎಂದು ವರದಿಯಾಯಿತು.
ಇವೆಲ್ಲ ಬೆಳವಣಿಗೆಗಳ ನಡುವೆ ಮುಂಬೈ ಮೂಲದ ಗ್ಲೆನ್ ಮಾರ್ಕ್ ಫಾರ್ಮಾಸುಟಿಕಲ್ಸ್ ಕೇಂದ್ರದ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ದಿಂದ ಫ್ಯಾಬಿಫ್ಲೂ ಉತ್ಪನ್ನಗಳನ್ನು ಉತ್ಪಾದಿಸಲು ಅನುಮತಿ ಪಡೆದಿದೆ.
ಈ ಫಾವಿಪಿರವಿರ್ (favipiravir) ಲಸಿಕೆ ಉತ್ಪಾದನೆಗೆ ಹಸಿರು ನಿಶಾನೆ ಸಿಕ್ಕಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಂಪನಿಯ ಎಂಡಿ ಗ್ಲೆನ್ ಸಲ್ಡಾನಾ, ದೇಶಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಸಮಯದಲ್ಲಿ ತೀವ್ರ ಒತ್ತಡವಿದೆ ಎಂದಿದ್ದಾರೆ.
ಇನ್ನು ರಷ್ಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5 ಲಕ್ಷದ ದಾಟಿದ ತಕ್ಷಣ favipiravir ಔಷಧಿ ಪ್ರಯೋಗಿಸಲು ಅವಕಾಶ ನೀಡಲಾಗಿತ್ತು. ಇದೀಗ ಭಾರತದಲ್ಲಿ 12,000 ಜನ ಕೊರೊನಾಗೆ ಬಲಿಯಾಗಿದ್ದಾರೆ. ರಷ್ಯಾ ಮಾದರಿಯಲ್ಲೇ ಭಾರತದಲ್ಲೂ favipiravir ಅನ್ನು ಗ್ಲೆನ್ ಮಾರ್ಕ್ ಸಂಸ್ಥೆಯಿಂದ FabiFlu ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯವಾಗಲಿದೆ.
ಭವಿಷ್ಯದಲ್ಲಿ ಇದು ಎಷ್ಟು ಪರಿಣಾಮಕಾರಿಯಾಗಲಿದೆ ಎಂಬುದರ ಆಧಾರದಲ್ಲಿ ದೇಶದಲ್ಲಿ ಕೊರೊನ ನಿಯಂತ್ರಣ ಮತ್ತು ಸ್ಥಗಿತವಾಗಿರುವ ಆರ್ಥಿಕತೆಗೆ ವೇಗ ದಕ್ಕಲಿದೆ.

Leave a Reply

Your email address will not be published. Required fields are marked *

You May Also Like

ಊರಳಿಯನಿಂದ ಬಂತು ಸೋಂಕು: ಆರ್.ಎಂ.ಪಿ ಡಾಕ್ಟರ್ ನಿಂದ ಸುತ್ತಲಿನ ಗ್ರಾಮಸ್ಥರಿಗೆ ಆತಂಕ..!

ಗದಗ: ಊರಳಿಯ ಮಾವನ ಮನೆಗೆ ಬಂದಿದ್ದಾನೆ. ಆದರೆ ಆತನಿಗೆ ಸೋಂಕು ತಗುಲಿರುವುದು ಸ್ವತ: ಆತನಿಗೂ ಗೊತ್ತಿರಲಿಲ್ಲ.…

ರಾಜ್ಯಸಭೆಯತ್ತ ಎಚ್.ವಿಶ್ವನಾಥ್ ಚಿತ್ತ..?

ಇತ್ತಿಚಿನ ಬೆಳವಣಿಗೆಯನ್ನು ನೋಡಿದರೆ ವಿಶ್ವನಾಥ್ ಚಿತ್ತ ರಾಜ್ಯಸಭೆಯತ್ತ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲ ಕಾರಣಗಳಿಂದ ಶಿಘ್ರದಲ್ಲಿ ಬರಲಿರುವ ರಾಜ್ಯಸಭೆ ಚುನಾವಣೆಗೆ ಇನ್ನಷ್ಟು ಮಹತ್ವ ಬಂದಿದೆ

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಯಿಂದ ಮನವಿ

ಲಕ್ಷ್ಮೇಶ್ವರ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಯಿಂದ ಮನವಿ…

ರಾಜ್ಯಕ್ಕೆ ಮುಂಗಾರು ಯಾವಾಗ ಪ್ರವೇಶಿಸುವುದು ಯಾವಾಗ ಗೊತ್ತಾ?

ಪ್ರತಿ ವರ್ಷ ಜೂನ್ 1ಕ್ಕೆ ನೈರುತ್ಯ ಮುಂಗಾರು ಕೇರಳ ಪ್ರವೇಶಿಸಿ ನಂತರ ರಾಜ್ಯಕ್ಕೆ ಆಗಮಿಸುತ್ತಿತ್ತು. ಆದರೆ, ಈ ಬಾರಿ ಜೂ. 5ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ