ಗದಗ: ಮಾಜಿ ಸಚಿವ ಎಚ್. ವಿಶ್ವನಾಥ‌ ಅವರು ಅನಾಥರಲ್ಲ. ವಿಶ್ವನಾಥ ಸಹ ನಮ್ಮ ಜೊತೆಯಲ್ಲೇ ಇದ್ದಾರೆ. ಬಂದಂಥಹವರಿಗೆ ಒಂದೊಂದು ಅವಕಾಶ ಆಗಿದೆ ಅದೇ ರೀತಿ ಮುಂದಿನದಿನ ವಿಶ್ವನಾಥ ಅವರಿಗೂ ಅವಕಾಶ ಸಿಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಈ ಕುರಿತು ಗದಗನಲ್ಲಿ ಮಾತನಾಡಿದ ಅವರು, ನಮಗೆ ಹತ್ತೂ ಜನರಿಗೆ ಒಂದು ಸಾರಿ ಅವಕಾಶ ಆಯಿತು. ಇದೀಗ ನಾಗರಾಜು‌ ಹಾಗೂ ಶಂಕರಗೆ‌ ಅವಕಾಶ ಆಗಿದೆ. ಮುನಿರತ್ನಂ ಹಾಗೂ ಪ್ರತಾಪಗೌಡ ಪಾಟೀಲ್ ಗೆ ಮುಂದಿನ ತಿಂಗಳು ಚುನಾವಣೆ ನಿಗದಿಯಾಗುತ್ತೆ ಎಲ್ಲವೂ ಹಂತಹಂತವಾಗಿ ಅವಕಾಶಗಳು ಸಿಗುತ್ತವೆ. ವಿಶ್ವನಾಥ‌ ಅವರಿಗೂ ಮುಖ್ಯಮಂತ್ರಿ ಯಡಿಯೂರಪ್ಪ ಎಂಎಲ್ಸಿ ಸ್ಥಾನದ ಆಶ್ವಾಸನೆ‌ ನೀಡಿದ್ದಾರೆ. ಯಾರಿಗೂ ಕೂಡ‌ ಇಲ್ಲಾ ಅನ್ನುವ ಪ್ರಶ್ನೆ‌ಯೇ ಇಲ್ಲ. ಮುಖ್ಯಮಂತ್ರಿಗಳು ನುಡಿದಂತೆ‌ ನಡೆದಿದ್ದಾರೆ. ವಿಶ್ವನಾಥ ಸಮೇತ ಮುಖ್ಯಮಂತ್ರಿಗಳ‌ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದೇವೆ. ಸದ್ಯದಲ್ಲೇ ಮುಂದಿನ ಸಲ ಅವಕಾಶ ಕೊಡ್ತೆವೆ ಅಂತ ಹೇಳಿದ್ದಾರೆ. ಇದಕ್ಕೆ ವಿಶ್ವನಾಥ ಕೂಡ ಒಪ್ಪಿಕೊಂಡಿದ್ದಾರೆ ಎಂದರು.

Leave a Reply

Your email address will not be published. Required fields are marked *

You May Also Like

ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘದಿಂದ ಖಂಡನೆ

ರಾಜ್ಯ ಸರ್ಕಾರ ಶೇ.30ರಷ್ಟು ಖಾಸಗಿ ಶಾಲಾ ಶುಲ್ಕ ಕಡಿತಗಿಳಿಸಿದ್ದನ್ನು ಖಂಡಿಸಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘದಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೂ ಅವಕಾಶ!

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ಯಾವುದೇ ವಿದ್ಯಾರ್ಥಿ ಪೋಷಕ, ಪೋಷಕರು ಅಥವಾ ಜತೆಯಲ್ಲಿ ವಾಸಿಸುವ ಹತ್ತಿರದ…

ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯದ ಕೂಗು ಎತ್ತಿದ್ದು ನಿಜ- ಸಚಿವ ಉಮೇಶ್ ಕತ್ತಿ

ಆಲಮಟ್ಟಿ: ಉತ್ತರ ಕರ್ನಾಟಕದ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊ0ಡಾಗ ತಾವು ಸಹಜವಾಗಿಯೇ ಪ್ರತ್ಯೇಕ ರಾಜ್ಯದ ಕೂಗೆತ್ತಿರುವುದು…

ವಾಯುಭಾರ ಕುಸಿತ – ಒಂದೇ ಜಿಲ್ಲೆಯ ಬರೋಬ್ಬರಿ 148 ಗ್ರಾಮಗಳಲ್ಲಿ ಪ್ರವಾಹ ಭೀತಿ!

ಕಲಬುರಗಿ : ವಾಯುಭಾರ ಕುಸಿತದಿಂದಾಗಿ ಉತ್ತರ ಕರ್ನಾಟಕದಲ್ಲಿ ಮಳೆರಾಯನ ಅಟ್ಟಹಾಸ ಮುಂದುವರೆದಿದೆ. ಇದರಿಂದಾಗಿ ಜನ ಬೀದಿಗೆ ಬಂದು ನಿಂತಿದ್ದಾರೆ.