ಮುಂಡರಗಿ: ಚೀನಿ ಆಪ್ ಟಿಕ್ ಟಾಕ್ ನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿ ಮುಂಡರಗಿಯಲ್ಲಿಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಇಲ್ಲಿನ ಕೊಪ್ಪಳ ವೃತ್ತ ಬಳಿ ಜಮಾವಣೆಗೊಂಡು ಟಿಕ್ ಟಾಕ್ ಫಲಕ ಹಾಕಿದ ಚೀನಾ ಅಧ್ಯಕ್ಷರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತ ಪಡಿಸಲಾಯಿತು.

ಜಗತ್ತಿನಾದ್ಯಂತ ಕೊರೊನಾ ಹರಡಲು ಚೀನಾ ದೇಶವೇ ಮುಖ್ಯ ಕಾರಣ. ಆದರೆ ಇದೀಗ ಕಳೆದ ಹಲುವು ದಿನಗಳಿಂದ ಕಾಲ್ಕೆರೆದು ಭಾರತದ ಗಡಿ ದಾಟುವ ದುಸ್ಸಾಹಸ ಮಾಡುತ್ತಿದೆ. ಮಧ್ಯ ರಾತ್ರಿ ಲಡಾಕ್ ನ ಗಾಲ್ವಾನ್ ನಲ್ಲಿ  ನಡೆದ ಕಾಳಗದಲ್ಲಿ ಭಾರತೀಯ ಸೇನೆಯ ಓರ್ವ ಮುಖ್ಯಸ್ಥ ಸೇರಿದಂತೆ 20 ಸೈನಿಕರು ಹುತಾತ್ಮರಾಗಿದ್ದಾರೆ. ಚೀನಾದ ಈ ನರಿ ಬುದ್ದಿಯ ಚಾಳಿಯನ್ನು ವಿರೋಧಿಸಬೇಕಿದೆ. ಈ ಕಾರಣದಿಂದ ಟಿಕ್ ಟಾಕ್ ಆಪ್ ಹಾಗೂ ಚೀನಾ ಮೂಲದ ವಸ್ತುಗಳನ್ನು ಯಾರು ಕೂಡ ಬಳಸದಿರುವ ಬಗ್ಗೆ ಜನಜಾಗೃತಿಯಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಕ್ರಾಂತಿ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಮುಧೋಳ್, ತಾಲೂಕು ಅಧ್ಯಕ್ಷ ರಾಮು ದೊಣ್ಣಿ, ಉಪಾಧ್ಯಕ್ಷ ಮಹಾಂತೇಶ್ ಬಳ್ಳಾರಿ, ಮಂಜುನಾಥ್ ಇಟಗಿ, ಶಿವು ನಾಡಗೌಡ್ರ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ಗೋಣಿ ಬಸವೇಶ್ವರ ರಥ ನಿರ್ಮಾಣಕ್ಕೆ ಸಚಿವ ಶ್ರೀರಾಮುಲು ಸಹಾಯ

ಗೋಣಿ ಬಸವೇಶ್ವರ ರಥ ನಿರ್ಮಾಣಕ್ಕೆ ಸಚಿವ ಶ್ರೀರಾಮುಲು ಸಹಾಯ

ಮಾ.20ಕ್ಕೆ ನವೀನ್ ಮೃತದೇಹ ಆಗಮನ: ಸಿಎಂ ಬೊಮ್ಮಾಯಿ

ಉತ್ತರಪ್ರಭ ಸುದ್ದಿಬೆಂಗಳೂರು: ಉಕ್ರೇನ್‌ನಲ್ಲಿ ರಷ್ಯಾ ಶೆಲ್ ದಾಳಿಗೆ ಮೃತಪಟ್ಟಿದ್ದ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಚಳಗೇರಿ…

ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಾಲ್ಕು ಜನರ ಸಾಮೂಹಿಕ ಅಂತ್ಯಸಂಸ್ಕಾರ ಸಂಸ್ಕಾರ ಮಾಡಿದ ಬಿನ್ನಾಳ ಗ್ರಾಮಸ್ಥರು

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರದ ಬಳಿ ರಾತ್ರಿ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಒಂದೇ…

ಫಾರ್ಮ್ ಹೌಸ್ ನಲ್ಲಿಯೇ ಗಾನ ಗಾರುಡಿಗನ ಅಂತಿಮ ಸಂಸ್ಕಾರ – ಸಾರ್ವಜನಿಕರಿಂದ ವೀಕ್ಷಣೆ!

ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣಂ ಅವರ ಅಂತ್ಯ ಸಂಸ್ಕಾರ ಇಂದು ಚೆನ್ನೈನ ರೆಡ್‍ ಹಿಲ್ ಫಾರ್ಮ್ ಹೌಸ್ ನಲ್ಲಿ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.