ಹರಪನಹಳ್ಳಿ: ಕೊರೊನಾ ಹಿನ್ನೆಲೆ ಲಾಕ್ ಡೌನ್ ಸಡಿಲಿಸಿದರೂ ಸಾಕಷ್ಟು ಕಟ್ಟುನಿಟ್ಟಿನ ನಿಯಮ ಸರ್ಕಾರ ಸೂಚಿಸಿದೆ. ಆದರೆ ಜನಸಾಮಾನ್ಯರಿಗೆ ಒಂದು ನ್ಯಾಯ ಜನಪ್ರತಿನಿಧಿಗಳಿಗೆ ಒಂದು ನ್ಯಾಯ ಎನ್ನುವಂತಾಗಿದೆ. ಇತ್ತಿಚೆಗಷ್ಟೆ ಸ್ವತ: ಆರೋಗ್ಯ ಸಚಿವ ಶ್ರೀರಾಮುಲು ಅದ್ಧೂರಿ ಮೆರವಣಿಗೆ ಮೂಲಕ ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ದರು. ಇದರ ಬೆನ್ನಲ್ಲೆ ಇದೀಗ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯಕ ಈ ಸಾಲಿಗೆ ಸೇರಿದ್ದಾರೆ.
ಹೌದು ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ತಮ್ಮ ಪುತ್ರನ ಅದ್ಧೂರಿ ಮದುವೆ ಮಾಡುವ ಮೂಲಕ ಇಂಥದ್ದೊಂದು ಟೀಕೆಗೆ ಗುರಿಯಾಗಿದ್ದಾರೆ.

ಸಾಮಾಜಿಕ ಅಂತರ ಇವರಿಗೆ ಸಂಬಂಧವೇ ಇರಲಿಲ್ಲ
ಲಾಕ್ ಡೌನ್ ಸಡಿಲಗೊಳಿಸಿದಾಗ್ಯೂ ಮದುವೆ ಸಮಾರಂಭಗಳಲ್ಲಿ ಕೇವಲ 50 ಜನ ಮಾತ್ರ ಭಾಗವಹಿಸಲು ಅವಕಾಶವಿದೆ. ಆದರೆ ಮಾಜಿ ಸಚಿವ ಪಿಟಿ ಪರಮೇಶ್ವರ ನಾಯ್ಕ್ ಅವರ ಮಗನ ಮದುವೆಯಲ್ಲಿ ಈ ನಿಯಮ ಗಾಳಿಗೆ ತೂರಲಾಗಿತ್ತು.
ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಲಕ್ಷ್ಮಿಪುರ ತಾಂಡದಲ್ಲಿ ನಡೆದ ಪಿಟಿಪಿ ಪುತ್ರನ ಮದುವೆ ಇದೀಗ ಟೀಕೆಗೂ ಗುರಿಯಾಗಿದೆ. ಮುಖ್ಯವಾಗಿ ಮದುವೆ ಸಮಾರಂಭದಲ್ಲಿ ಸಾಮಾಜಿಕ ಅಂತರ ಇವರಿಗೆ ಸಂಬಂಧವೇ ಇಲ್ಲದಂತಿತ್ತು.

ಹಲವು ಮುಖಂಡರು ಭಾಗಿ
ಮದುವೆ ಸಮಾರಂಭದಲ್ಲಿ ಹಲವು ಮುಖಂಡರು ಭಾಗಿಯಾಗಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಹಾಲಿ, ಮಾಜಿ ಸಚಿವರು ಶಾಸಕರು ಸೇರಿದಂತೆ ಹಲವು ಮುಖಂಡರು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಮದುವೆಗೆ ಆಗಮಿಸಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಅಸಹಾಯಕರಾಗಿದ್ದರು. ಜನಸಾಮಾನ್ಯರು ಒಂದು ಸಣ್ಣ ತಪ್ಪು ಮಾಡಿದರೂ ಕ್ರಮ ಕೈಗೊಳ್ಳುವ ಆಡಳಿತ ವ್ಯವಸ್ಥೆ ಜನಪ್ರತಿನಿಧಅಸಹಾಯಕವಾಗಿದೆಆಡಳಿತಆಡಳಿತ ವ್ಯವಸ್ಥೆ ಕ್ರಮ ಕೈಗೊಳ್ಳಲು ಅಸಹಾಯಕವಾಗಿದೆಯಾ ಎಂದು ಜನರು ಮಾತಾಡಿಕೊಳ್ಳುವಂತಾಗಿದೆ.

Leave a Reply

Your email address will not be published. Required fields are marked *

You May Also Like

ಹುಬ್ಬಳ್ಳಿ :ಕೈಯಲ್ಲಿ ಜೀವ ಹಿಡಿದುಕೊಂಡು ಹೋಗಬೇಕು ಜಯನಗರದಲ್ಲಿ

ಅದು ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯ ಭಾಗ, ಅಲ್ಲಿ ನೀವು ಏನಾದರೂ ಸಂಚಾರ ಮಾಡಬೇಕು ಎಂದರೆ ಸ್ವಲ್ಪ ಎಚ್ಚರಿಕೆ ಇರಬೇಕು. ಸ್ವಲ್ಪ ಅಪ್ಪ ತಪ್ಪಿದರೆ ಸೊಂಟ,‌ಅಥವಾ ಕೈಕಾಲು ಮುರಿಯುವುದು ಗ್ಯಾರಂಟಿ. ಇದು ನಗರದ ಕಿಮ್ಸ್ ಆಸ್ಪತ್ರೆಯ ಎದುರಿಗಿನ ಜಯನಗರ ರಸ್ತೆ. ಮಳೆಯಾದರೂ ಅಂತೂ ಮಳೆಯ ನೀರು ಮನೆ ತುಂಬೆಲ್ಲಾ ನುಗ್ಗುತ್ತವೆ.

6 ರಿಂದ 8ನೇ ತರಗತಿ ಶಾಲಾರಂಭದ ಕುರಿತು ಮಹತ್ವದ ಮಾಹಿತಿ ಇಲ್ಲಿದೆ ನೋಡಿ

ಕೋವಿಡ್ ನಂತರ ರಾಜ್ಯದಲ್ಲಿ ಫೆ.22 ರಿಂದ 6 ರಿಂದ 8ನೇ ತರಗತಿಯ ಪೂರ್ಣಾವಧಿ ಶಾಲೆ ಪ್ರಾರಂಭ ಮತ್ತು ವಿದ್ಯಾಗಮ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಜಿಂದಾಲ್ ಕಂಪೆನಿಗೆ ಸರ್ಕಾರ ಕದ್ದುಮುಚ್ಚಿ ಭೂಮಿ ಮಾರಾಟ

ಜಿಂದಾಲ್ ಕಂಪೆನಿಗೆ ರಾಜ್ಯ ಸರ್ಕಾರ ಸದ್ದಿಲ್ಲದೇ 3677 ಎಕರೆ ಭೂಮಿಯನ್ನು ಮಾರಾಟ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಧ್ವಜಾರೋಹಣ ನೆರವೇರಿಸಿದ ಸಚಿವ ಸಿ.ಸಿ.ಪಾಟೀಲ ನೀಡಿದ ಮಾಹಿತಿ

ಇಂದು ಸ್ವಾಂತಂತ್ರ್ಯ ದಿನಾಚರಣೆ ನಿಮಿತ್ಯ, ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಜಿಲ್ಲಾ ಉಸ್ತುವಾರಿ ಸಚಿವ…