ಗದಗ: ಇಲ್ಲಿನ ರಾಜೀವ್ ಗಾಂಧಿ ನಗರದಲ್ಲಿರುವ ಬಾಗಲಕೋಟೆ ಜಿಲ್ಲೆಯ ನೀರು‌ ಸರಬರಾಜು ಮಂಡಳಿಯ ಎಇಇ ಹನುಮಂತ ಪ್ರಭಣ್ಣವರ್ ಮನೆ‌ ಮೇಲೆ ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಸಿಬಿ ಡಿವೈಎಸ್ಪಿ ವಾಸುದೇವರಾಮ್ ನೇತೃತ್ವದ ತಂಡ ದಾಳಿ ನಡೆಸಿದೆ. ಭ್ರಷ್ಟಾಚಾರ ದೂರಿನ‌ ಮೇರೆಗೆ ದಾಳಿಮಾಡಿದ ಅಧಿಕಾರಿಗಳು ಮಹತ್ವದ ದಾಖಲೆ ವಶಪಡಿಸಿ ಕೊಂಡು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು ಎಇಇ ಹನುಮಂತ ಮನೆ‌ಮೇಲೆ ಮತ್ತು ಬಾಗಲಕೋಟೆಯ ಅವರ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದ್ದು ಹನಮಂತ ಅವರನ್ನು ಬಾಗಲಕೋಟೆಯಲ್ಲಿಯೆ ಎಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಮಹತ್ವದ ದಾಖಲೆ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಕಡತಗಳ ಪರಿಶೀಲನೆ ಮುಂದುವರೆದಿದ್ದು ಎಇಇ ಹನಮಂತ ಮತ್ತು ಮನೆಯವರನ್ನು ವಿಚಾರಣೆಗೊಳಪಡಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಶರಣೇಗೌಡ ಬಯ್ಯಾಪುರ ಗೆಲುವಿಗೆ ಮಸ್ಕಿಯಲ್ಲಿ ಸಂಭ್ರಮ

 ಉತ್ತರಪ್ರಭ ವರದಿ:ವಿಠ್ಠಲ ಕೆಳೊತ ಮಸ್ಕಿ: ರಾಯಚೂರು ಕೊಪ್ಪಳ ವಿಧಾನ ಪರಿಷತ್ ಚುನಾವಣೆಯಲ್ಲಿ ಶರಣೇಗೌಡ ಪಾಟೀಲ್ ಬಯ್ಯಾಪೂರು…

ಕಾರ್ಮಿಕ ಮುಖಂಡ ಮಹೇಶ್ ಹಿರೇಮಠ ಆಕ್ರೋಶ: ಸರ್ಕಾರದ ಕೆಟ್ಟ ಧೋರಣೆ ನಿಲ್ಲುವವರೆಗೂ ನಮ್ಮ ಹೋರಾಟ ನಿಲ್ಲದು

ಸರ್ಕಾರದ ಕೆಟ್ಟ ಧೋರಣೆಗಳು ಎಲ್ಲಿಯವರೆಗೆ ನಡೆಯುತ್ತವೇಯೋ ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವದಿಲ್ಲ ನಮ್ಮ ಕಾರ್ಮಿಕ ವರ್ಗದವರು ಅನುಭವಿಸುವ ನೋವು ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ ಎಂದು ಕಾರ್ಮಿಕ ಮುಖಂಡ ಮಹೇಶ್ ಹಿರೇಮಠ ಸರ್ಕಾರದ ವಿರುದ್ಧ ಕಿಡಿಕಾರಿದರು.

ಸಿಎಂ ಬದಲಾವಣೆ ವಿಚಾರ ಮಾಧ್ಯಮಗಳ ಸೃಷ್ಟಿ: ಡಿಸಿಎಂ ಕಾರಜೋಳ

ಗದಗ: ಪೂರ್ಣಾವಧಿಗೆ ಬಿ.ಎಸ್.ಯಡಿಯೂರಪ್ಪ ಅವ್ರೇ ಸಿಎಂ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಡಿಸಿಎಂ…