ಜೈಪುರ: ಮಹಾಮಾರಿಯ ಅಟ್ಟಹಾಸ ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಗಡಿ ಬಂದ್ ಮಾಡಲಾಗಿದೆ.

ಒಂದು ವಾರದ ಮಟ್ಟಿಗೆ ರಾಜಸ್ತಾನ ಸರ್ಕಾರ ರಾಜ್ಯ ಎಲ್ಲಾ ಗಡಿಗಳನ್ನು ಬಂದ್ ಮಾಡಿದೆ. ಎನ್ಒಸಿ ಪ್ರಮಾಣ ಪತ್ರವಿಲ್ಲದೆ ಯಾರೊಬ್ಬರೂ ರಾಜ್ಯ ಪ್ರವೇಶಿಸುವಂತಿಲ್ಲ. ಅಲ್ಲದೆ, ಪಾಸ್ ಗಳಿಲ್ಲದೆ, ರಾಜ್ಯದಿಂದ ಯಾರೊಬ್ಬರು ಹೊರಗೆ ಹೋಗುವಂತಿಲ್ಲ ಎಂದು ಸರ್ಕಾರ ತಿಳಿಸಿದೆ.

ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಆಯುಕ್ತರಿಗೆ ಪಾಸ್ ವಿತರಿಸುವ ಹೊಣೆಯನ್ನು ನೀಡಲಾಗಿದ್ದು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಾಗೂ ಸಾವಿಗೀಡಾದ ಕುಟುಂಬಸ್ಥರಿಗೆ ಆದೇಶದಲ್ಲಿ ವಿನಾಯಿತಿ ನೀಡಲಾಗಿದೆ. ರಾಜ್ಯದಲ್ಲಿ ಇಲ್ಲಿಯವರೆಗೂ 11,368 ಜನರಿಗೆ ಸೋಂಕು ತಗುಲಿದೆ.

Leave a Reply

Your email address will not be published. Required fields are marked *

You May Also Like

ಸ್ತ್ರೀಯರ ವಿವಾಹದ ಕನಿಷ್ಠ ವಯೋಮಿತಿ ಕುರಿತು ಪರಿಶೀಲಿಸುವ ಚಿಂತನೆ ನಡೆದಿದೆ : ಪ್ರಧಾನಿ ಮೋದಿ

ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಹಲವು ಯೋಜನೆಗಳನ್ನು ಘೋಷಿಸಿದರು. ಇನ್ನು ಇದೇ ವೇಳೆ ದೇಶದ…

ಗದಗ ಜಿಲ್ಲೆಯಲ್ಲಿ ಇಂದು ಇಬ್ಬರಿಗೆ ಕೊರೊನಾ ಪಾಸಿಟಿವ್..!

ಗದಗ: ಜಿಲ್ಲೆಯಲ್ಲಿಂದು ಇಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕು ತಗುಲಿದವರ ಸಂಖ್ಯೆ…

ಕಪ್ಪತ್ತಗುಡ್ಡ ಸಂರಕ್ಷಣೆಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಜನಾಂದೋಲನವೇ ಪರಿಹಾರ : ಜಾರಕಿಹೊಳಿ

ಕಪ್ಪತ್ತಗುಡ್ಡ ರಕ್ಷಣೆ ಮಾಡುವ ವಿಚಾರದಲ್ಲಿ ನಮ್ಮ ಅವಧಿಯಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಆದರೆ ಈಗೀನ ಬಿ.ಎಸ್.ವೈ ಸರ್ಕಾರ ಗಣಿಗಾರಿಕೆ ಮುಕ್ತ ಮಾಡುವಲ್ಲಿ ಬಹುತೇಕ ಕೆಲಸ ಮುಗಿಸಿದೆ.

ಉತ್ತರಪ್ರದೇಶ: ಕಂಡವರ ಮನೆಗೆ ಕೇಸರಿ ಬಳಿದ ಮನೆಹಾಳರು

ಯೋಗಿ ಆದಿತ್ಯನಾಥರ ಆಡಳಿತದಲ್ಲಿ ಉತ್ತರಪ್ರದೇಶ ‘ಜಂಗಲ್ ನ್ಯಾಯ’ ಕಡೆ ಮುಖ ಮಾಡುತ್ತಿದೆಯೇ? ನಗರವೊಂದರ ಏರಿಯಾದ ಎಲ್ಲ ಮನೆಗಳ ಹೊರ ಗೋಡೆಗಳಿಗೆ ಕೆಲವು ಮನೆಹಾಳರು ಆ ಮನೆಯವರ ವಿರೋಧ ಲೆಕ್ಕಿಸದೇ ಕೇಸರಿ ಬಣ್ಣ ಬಳಿದು ವಿಕಾರಗೊಳಿಸಿದ್ದಾರೆ.