ಉತ್ತರಪ್ರಭ ಸುದ್ದಿ
ಆಲಮಟ್ಟಿ:
ಧಾಮೀ೯ಕ ಪ್ರವಚನಗಳು ಆಲಿಸುವುದರಿಂದ ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ನೆಲೆಗೊಳ್ಳುತ್ತದೆ. ಒಳ್ಳೆಯ ವಿಚಾರಗಳು ಶ್ರವಣಗಳಿಗೆ ತಾಗಿದಾಗ ಮನಸ್ಸಿನಲ್ಲಿ ನವೋಲ್ಲಾಸ ಮೂಡುತ್ತದೆ. ಆಧ್ಯಾತ್ಮಿಕ ಜೀವನ ಚೈತ್ರ ಪ್ರತಿಯೊಬ್ಬರು ಆಳವಡಿಸಿಕೊಳ್ಳಿ ಎಂದು ಹಡಗಲಿ,ನಿಡಗುಂದಿ ರುದ್ರೇಶ್ವರ ಸಂಸ್ಥಾನಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. ಇಲ್ಲಿನ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಅಖಿಲ ಭಾರತ ವೀರಶೈವ ಮಹಾಸಂಘದ ಆಲಮಟ್ಟಿ ಶಾಖೆ ಆಶ್ರಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡಿರುವ ಮುಗಳಖೋಡದ ಶ್ರೀ ಯಲ್ಲಾಲಿಂಗೇಶ್ವರ ಪುರಾಣ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.


ಶ್ರಾವಣದಲ್ಲಿ ಆಧ್ಯಾತ್ಮದ ಜ್ಞಾನ ಯಜ್ಞದಲ್ಲಿ ತೇಲಿ. ನವವಿಧ ಶ್ರವಣ ಭಕ್ತಿಯಲ್ಲಿ ಸಾಗಿ. ಪುರಾಣ, ಪುಣ್ಯ ಕಥೆ, ಶಾಸ್ತ್ರ, ಉತ್ತಮ ಪಾರಾಯಣ ಕೇಳಿ ಆನಂದಿಸಿ. ಶ್ರಾವಣ ಮಾಸ ಪವಿತ್ರ ಮಾಸ. ಶ್ರವಣವೆಂದರೆ ಒಳ್ಳೆಯದು ಕೇಳುವುದು. ಕೇಳಿದನ್ನು ಬದುಕಿನ ಭಾಗದಲ್ಲಿ ಭದ್ರವಾಗಿ ಇರಿಸಿಕೊಳ್ಳುವುದು. ಒಳ್ಳೆಯದನ್ನು ಕೇಳಿ ಕೆಟ್ಟದನ್ನು ತೋರೆಯಿರಿ ಎಂದರು.
ಎಲ್ಲರ ಒಳಿತು ಬಯಸುವುದೇ ಮಾನವ ಧರ್ಮ. ಸತ್ಕಾರ್ಯಗಳು ದೇವರಿಗೆ ಪ್ರೀತಿ. ಪುರಾಣಗಳು ಈ ನೆಲದ ಸತ್ವ.ಅವುಗಳ ಒಳ ನೋಟ ಪ್ರವಚನಕಾರರ ಧ್ವನಿಯಿಂದ ಹೀರಿಕೊಳ್ಳಿ. ಸ್ಮರಣ ಕಾವ್ಯಗಳ ಕಥಾ ಹಂದರದಲ್ಲಿ ಮಿನುಗಿ. ಇಂದಿನ ಸಾಮಾಜಿಕ ತಲ್ಲಣಗಳ ಜಗದಲ್ಲಿ ಆಧ್ಯಾತ್ಮಿಕ ಸಿಂಚನ ಮನು ಕುಲಕ್ಕೆ ಅಗತ್ಯ. ಧರ್ಮ,ಸಂಪ್ರದಾಯವನ್ನು ಹತ್ತಿಕ್ಕಿ ನೆಮ್ಮದಿಯಿಂದ ಜೀವಿಸಲು ಸಾಧ್ಯವಿಲ್ಲ. ಧಾಮೀ೯ಕ ಮನಶಾಂತಿಯ ನೆಲೆಗಟ್ಟಿಗೆ ಭಕ್ತಿ ಪ್ರಸಾದ ಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆರ್.ಬಿ‌ಪಿ.ಜಿ.ಹಳಕಟ್ಟಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಮಾತನಾಡಿ,ಆಲಮಟ್ಟಿ ಆಣೆಕಟ್ಟೆಯಿಂದ ಪ್ರವಾಸಿತಾಣವಾಗಿ ಪ್ರಸಿದ್ಧಿ ಹೊಂದಿದೆ. ಹಾಗೆಯೇ ಇಲ್ಲಿನ ಮಣ್ಣಿನಲ್ಲಿ ಪುಣ್ಯ ಪುರುಷರು, ಸಂತರು, ದಾರ್ಶನಿಕರು ಅಗಿ ಹೋಗಿದ್ದಾರೆ. ಬಂಥನಾಳದ ಸಂಗನಬಸವ ಶಿವಯೋಗಿಗಳು, ಶರಣರಾದ ಮಂಜಪ್ಪ ಹಡೇ೯ಕರ, ಡಾ.ಫ.ಗು.ಹಳಕಟ್ಟಿ ಮೊದಲಿಗರು. ಕನಾ೯ಟಕ ಗಾಂಧಿ ಮಂಜಪ್ಪ ಹಡೇ೯ಕರ ಹಾಗು ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ವಿಚಾರಗಳನ್ನು ಬೆಳಕಿಗೆ ತರುವಲ್ಲಿ ಗದುಗಿನ ತೋಂಟದ ಲಿಂ,ಡಾ.ಸಿದ್ದಲಿಂಗ ಮಹಾಸ್ವಾಮಿಗಳು ಶ್ರಮಿಸಿದ್ದಾರೆ. ಹಳಕಟ್ಟಿಯವರು ವಚನ ಸಾಹಿತ್ಯಕ್ಕಾಗಿ ಇಡೀ ಜೀವಮಾನ ಸೆವೆಸಿದ್ದಾರೆ. ನೂರಾರು ಗ್ರಂಥಗಳನ್ನು ಸಂಪಾದಿಸಿ,ರಚಿಸಿ,ಮುದ್ರಿಸಿ, ಪ್ರಕಾಶಿಸಿ ರಕ್ಷಿಸಿದ್ದಾರೆ. ಅವರು ನಡೆದಾಡುವ ವಿಶ್ವವಿದ್ಯಾಲಯ ಆಗಿದ್ದರು. ಕರುನಾಡು ಗಾಂಧಿ ಮಂಜಪ್ಪ ಹಡೇ೯ಕರ ಅವರು ಕೂಡಾ ಪರಿಶುದ್ದ ಜೀವನ,ಶ್ರೇಷ್ಠ ಬರಹಗಳು,ಚಿಂತನೆಗಳು ನಾಡಿನ ಪ್ರಗತಿಗೆ ದಾರಿದೀಪವಾಗಿವೆ ಎಂದರು.
ಕೆಬಿಜೆಎನ್ಎಲ್ ಮುಖ್ಯ ಅಭಿಯಂತರ ಸುರೇಶ ಎಚ್. ಅಧೀಕ್ಷಕ ಅಭಿಯಂತರ ಬಸವರಾಜ ಡಿ, ಕಾರ್ಯನಿರ್ವಾಹಕ ಅಭಿಯಂತರ ಬಿ.ಎಸ್.ಪಾಟೀಲ, ಎಂ.ಆರ್.ಹಲಗತ್ತಿ ಕನಾ೯ಟಕ ರಾಜ್ಯ ನೌಕರರ ಸಂಘದ ಆಲಮಟ್ಟಿ ಯೋಜನಾ ಶಾಖೆ ಅಧ್ಯಕ್ಷ ಸದಾಶಿವ ದಳವಾಯಿ, ಅಖಿಲಭಾರತ ಮಹಾ ಸಂಘದ ಅಧ್ಯಕ್ಷ ಯಶವಂತ ಮರಡಿ, ಉಪಾಧ್ಯಕ್ಷೆ ಅಶ್ವಿನಿ ಪಟ್ಟಣಶೆಟ್ಟಿ, ಡಾ.ಎಸ್.ಎಸ್.ರೇವಡಿ ಮೊದಲಾದವರು ಇದ್ದರು. ಬೇವಿನಾಳದ ಶ್ರವಣಕುಮಾರ ಪ್ರವಚನ ನಡೆಸಿಕೊಟ್ಟರು. ಸೋಮನಾಳದ ಶರಣಯ್ಯಸ್ವಾಮಿ ಹಿರೇಮಠ ,ಹಣಮೇಶಕುಮಾರ ಪಣವಾಳ ಸಂಗೀತ, ಹಾಮೋ೯ನೀಯಂ, ತಬಲಾ ಸೇವೆ ಗೈದರು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ: ಸಚಿವ ಶೆಟ್ಟರ್

ವಿಧಾನ ಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತವಿಲ್ಲ. ಸರ್ಕಾರ ಸುಸೂತ್ರವಾಗಿ ನಡೆಯಲು ಎರಡು ಕಡೆ ಬಹುಮತ ಅಗತ್ಯ. ಪರಿಷತ್‌ನ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹುಬ್ಬಳ್ಳಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ವಿಪ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಆಸ್ತಿ ಎಷ್ಟು? : ಮಾಡಿದ ಸಾಲ ಎಷ್ಟು..?

ಬೆಂಗಳೂರು: ವಿಧಾನ ಪರಿಷತ್‍ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ರೂ. 1,224…

ಶಿಕ್ಷಕರಿಗೂ ಬೇಕು ವರ್ಕ್ ಪ್ರಮ್ ಹೋಮ್

ಬೆಂಗಳೂರು: ಈಗಾಗಲೇ ದಿನದಿಂದ ದಿನಕ್ಕೆ ದೇಶದಲ್ಲಷ್ಟೆ ಅಲ್ಲದೇ ರಾಜ್ಯದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.…

ಹುಲ್ಲೂರಿನಲ್ಲಿ ಮಳೆಯ ಆರ್ಭಟ: ಧರೆಗುರುಳುತ್ತಿವೆ ಮನೆ-ಮರಗಳು

ಕಳೆದ ಎರ್ಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮನೆ ಹಾಗೂ ಮರಗಳು ಧರೆಗುರುಳುತ್ತಿವೆ. ಇದರಿಂದ ಗದಗ ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.