ಗದಗ: ಕೊರೊನಾ ಗೈಡ್ ಲೈನ್ ಪ್ರಕಾರ ಸೋಂಕಿತರ ಹೆಸರನ್ನು ಬಹಿರಂಗಗೊಳಿಸಬಾರದು. ಆದರೆ ಇಂದು ಬೆಳಿಗ್ಗೆಯಿಂದಲೇ ಸೋಂಕಿತರ ಹೆಸರು ಇರುವ ಲೀಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ಲೀಸ್ಟ್ ಹೇಗೆ ಲೀಕ್ ಔಟ್ ಆಯಿತು? ಇದು ಅಸಲಿಯೋ ನಕಲಿಯೋ ಎನ್ನುವ ಸಂದೇಹ ಮೂಡಿಸಿದೆ.

07-06-2020 ದಿನಾಂಕ ಸಮೂದಿಸಿದ ಗದಗ ಜಿಮ್ಸ್ ಕೊರೊನಾ ಸೋಂಕು ದೃಡಪಡಿಸಿದ ಪ್ರಕರಣಗಳ ಪಟ್ಟಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇದು ಹೇಗೆ ಸಾಧ್ಯ ಎನ್ನುವುದು ಇದೀಗ ಪ್ರಶ್ನೆಯಾಗಿದೆ. ಜೊತೆಗೆ ಈ ಪಟ್ಟಿಯಲ್ಲಿ ಸೋಂಕು ದೃಢಪಡಿಸಿದ ವೈದ್ಯರ ಸಹಿ ಕೂಡ ಇದೆ.

ಕೊರೊನಾ ಗೈಡ್ ಲೈನ್ ಪ್ರಕಾರ ಜಿಲ್ಲಾಧಿಕಾರಿಗಳು ಮಾತ್ರ ಸೋಂಕಿತರ ಬಗ್ಗೆ ಮಾಹಿತಿ ನೀಡಬೇಕು. ಜೊತೆಗೆ ಸೋಂಕಿತರ ಹೆಸರನ್ನು ಬಹಿರಂಗಗೊಳಿಸುವುದು ಕಡ್ಡಾಯ ನಿಯಮವಾಗಿದೆ. ಆದರೆ ಜಿಲ್ಲಾಧಿಕಾರಿಗಳಿಗೂ ಮೊದಲೇ ಗದಗ ಹಾಗೂ ಗಜೇಂದ್ರಗಡ ಮೂಲದ 6 ಜನರಿಗೆ ಸೋಂಕು ದೃಢಪಟ್ಟಿರುವುದು ಹೆಸರು ಸಮೇತ ಹೇಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಯಿತು?

ಅಥವಾ ಜಿಮ್ಸ್ ಹೆಸರಿನಲ್ಲಿರುವ ನಕಲಿ ಪಟ್ಟಿ ಇದಾಗಿದೆಯಾ? ಇಲ್ಲವೇ ಜಿಮ್ಸ್ ಸಿಬ್ಬಂಧಿಗಳೇ ಇದನ್ನು ಲೀಕ್ ಮಾಡಿದ್ದಾರೆಯೇ ಎನ್ನುವುದು ಪ್ರಶ್ನೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಮ್ಸ್ ನಿರ್ದೇಶಕ ಪಿ.ಎಸ್.ಭೂಸರಡ್ಡಿ, ಈ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಸಿಬ್ಬಂಧಿಗಳಿಂದ ಮಾಹಿತಿ ಪಡೆದು ಜಿಮ್ಸ್ ಸಿಬ್ಬಂಧಿಗಳಿಂದಲೇ ಲೀಸ್ ಬಹಿರಂಗವಾಗಿದ್ದಾದರೇ ತಪ್ಪಿತಸ್ಥ ಸಿಬ್ಬಂಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

Leave a Reply

Your email address will not be published. Required fields are marked *

You May Also Like

ಕ್ರೀಡೆಗಳಿಂದ ಆರೋಗ್ಯಕರ ಭಾವನೆ

ಉತ್ತರಪ್ರಭ ಸುದ್ದಿನಿಡಗುಂದಿ: ಹಲ ಬಗೆಯ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವದರಿಂದ ನಮ್ಮ ಆರೋಗ್ಯ ರಕ್ಷಣೆ ಮಾಡಲು ಸಾಧ್ಯ…

7 ವರ್ಷಗಳ ಹಿಂದೆ ಕಳ್ಳತನ ಮಾಡಿದವರ ಈಗ ಅಂದರ್!

ಧಾರವಾಡ : ಜಿಲ್ಲೆಯಲ್ಲಿ ಎರಡು ಪ್ರದೇಶಗಳಲ್ಲಿ 7 ವರ್ಷಗಳ ಹಿಂದೆ ಕಳ್ಳತನ ಮಾಡಿದ್ದ ವ್ಯಕ್ತಿಗೆ ಇಲ್ಲಿಯ 2ನೇ ಜೆಎಂಎಫ್ ಸಿ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಗದಗ ಜಿಲ್ಲೆಯಲ್ಲಿ 2 ಸಾವಿರ ತೋಟ ನಿರ್ಮಾಣ ಗುರಿ: ಜಿ.ಪಂ ಅಧ್ಯಕ್ಷ ರಾಜೂಗೌಡ

ಗದಗ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 2 ಸಾವಿರ ಹೊಸ ತೋಟಗಳನ್ನು ನಿರ್ಮಿಸಲು ತೋಟಗಾರಿಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ ಸೂಚಿಸಿದರು.